ಆರೋಗ್ಯ ಸಚಿವ ಯುಟಿ ಖಾದರ್ 
ರಾಜ್ಯ

ಗುತ್ತಿಗೆ ವೈದ್ಯರಿಗೆ ಸಿಹಿ ಸುದ್ದಿ: ವಾರದೊಳಗೆ 200 ವೈದ್ಯರ ಖಾಯಂ ನೇಮಕಾತಿಗೆ ಅನುಮೋದನೆ

ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಚಿವ ಯುಟಿ ಖಾದರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಶಕಗಳಿಂದ ಕಾಡುತ್ತಿರುವ ವೈದ್ಯರ ಕೊರತೆ ನೀಗಿಸಲು ಸಚಿವರು ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೇ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ.

ಬೆಂಗಳೂರು: ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಚಿವ ಯುಟಿ ಖಾದರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಶಕಗಳಿಂದ ಕಾಡುತ್ತಿರುವ ವೈದ್ಯರ ಕೊರತೆ ನೀಗಿಸಲು ಸಚಿವರು ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೇ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ.

ಅದರಂತೆ ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿರುವ ಗುತ್ತಿಗೆ ವೈದ್ಯರಿಗೆ ಸಚಿವರು ಬಂಪರ್ ಕೊಡುಗೆ ನೀಡಿದ್ದಾರೆ. 5 ವರ್ಷ ಸೇವೆ ಪೂರ್ಣಗೊಳಿಸಿರುವ ಮತ್ತು ಉತ್ತಮ ಕೆಲಸ ಮಾಡಿರುವ ಗುತ್ತಿಗೆ ನೌಕರರನ್ನು ಹಂತಹಂತವಾಗಿ ಖಾಯಂಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರ ಭಾಗವಾಗಿ 200 ವೈದ್ಯರನ್ನು ಕೆಇಎ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಿ ವಾರದೊಳಗೆ ಆದೇಶ ಪತ್ರ ನೀಡಲು ನಿರ್ಧರಿಸಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆಯ ಒಪ್ಪಿಗೆಯೂ ಸಿಕ್ಕಿದೆ.

ರಾಜ್ಯದಲ್ಲಿ 1280 ವೈದ್ಯರು, 924 ತಜ್ಞ ವೈದ್ಯರು ಹಾಗೂ 892 ನರ್ಸ್‌ಗಳ ಕೊರತೆ ಇದೆ. ಇದನ್ನು ಸರಿಪಡಿಸಲು Walk-in Interview ಮೂಲಕ ತಕ್ಷಣದ ನೇಮಕಾತಿಗೆ ಸಚಿವರು ಚಾಲನೆ ನೀಡಿದ್ದಾರೆ. ಇನ್ನು ಕೆಇಎ ಮೂಲಕವೇ 400 ನರ್ಸ್‌ಗಳು, 400 ಫಾರ್ಮಸಿಸ್ಟ್‌ಗಳು ಹಾಗೂ 400 ಲ್ಯಾಬ್ ಟೆಕ್ನಿಷಿಯನ್‌ಗಳನ್ನು ಖಾಯಂ ಆಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದ ಮೊದಲ ಪ್ರಧಾನಿ ನೆಹರೂ ದಾಖಲೆ ಮುರಿದ ಮೋದಿಗೆ ಸಚಿವ ಸಂಪುಟ ಗೌರವ; ಎದ್ದು ನಿಂತು ಚಪ್ಪಾಳೆ ತಟ್ಟಿದ ಸಚಿವರು!

RSS ನೋಂದಣಿಗೆ ದಾಖಲೆ ಸಿದ್ಧಪಡಿಸಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹರಿಪ್ರಸಾದ್ ಬೆಂಬಲ

ಪಶ್ಚಿಮ ಬಂಗಾಳದಲ್ಲಿ TMC ಅಸ್ತಿತ್ವಕ್ಕೇ ಕುತ್ತು: ಕಾಂಗ್ರೆಸ್ ಜೊತೆ ವಿಲೀನ? ದೀದಿಗೆ ಉಪಾಧ್ಯಕ್ಷೆ ಪಟ್ಟದ ಆಫರ್!

ದೀರ್ಘಾವಧಿ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾದ ಮೋದಿಗೆ ವಿಶ್ವ ನಾಯಕರಿಂದ ಅಭಿನಂದನೆಗಳ ಮಹಾಪೂರ; ಹೇಳಿದ್ದೇನು?

ಪಶ್ಚಿಮ ಬಂಗಾಳ ಸಚಿವರಿಗೆ ಖಾತೆ ಹಂಚಿಕೆ; ಪತ್ರಕರ್ತರಾಗಿದ್ದ ಸ್ವಪನ್ ದಾಸ್‌ಗುಪ್ತಾಗೆ ಹಣಕಾಸು ಇಲಾಖೆ

SCROLL FOR NEXT