ಹುಡುಗ-ಹುಡುಗಿಯರಿಂದ ಎಣ್ಣೆ ಪಾರ್ಟಿ 
ರಾಜ್ಯ

BCM ಗರ್ಲ್ಸ್ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಎಣ್ಣೆ ಪಾರ್ಟಿ; ವಿದ್ಯಾರ್ಥಿನಿಯರ ದುರ್ಬಳಕೆ ಆರೋಪ; ವಿಡಿಯೋ ವೈರಲ್

ಎರಡು ದಿನಗಳ ಹಿಂದಷ್ಟೇ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಅಪ್ರಾಪ್ತರಿಗೆ ಪಬ್ ಮತ್ತು ಬಾರ್ ಗಳಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ತವರು ಜಿಲ್ಲೆಯಲ್ಲಿ ಅಪ್ರಾಪ್ತರಿರುವ ಹಾಸ್ಟೆಲ್​​​​​ನಲ್ಲೇ ಎಣ್ಣೆ ಪಾರ್ಟಿ ನಡೆದಿದೆ.

ಕಲಬುರಗಿ: ಕಲಬುರಗಿಯಲ್ಲಿರುವ ರಾಜ್ಯ ಸರ್ಕಾರದ ಬಿಸಿಎಂ ಮಹಿಳಾ ಹಾಸ್ಟೆಲ್ ನಲ್ಲಿ ಹುಡುಗ ಹಾಗೂ ಹುಡುಗಿಯರು ಬಿಂದಾಸ್ ಆಗಿ ಮದ್ಯ ಸೇವೆನೆ ಪಾರ್ಟಿ ಮಾಡಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಮಹಿಳಾ ಹಾಸ್ಟೆಲ್​​​​​ನಲ್ಲೇ ನಡೆದ ಈ ಮಧ್ಯದ ಪಾರ್ಟಿಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಅಪ್ರಾಪ್ತರಿಗೆ ಪಬ್ ಮತ್ತು ಬಾರ್ ಗಳಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ತವರು ಜಿಲ್ಲೆಯಲ್ಲಿ ಅಪ್ರಾಪ್ತರಿರುವ ಹಾಸ್ಟೆಲ್​​​​​ನಲ್ಲೇ ಎಣ್ಣೆ ಪಾರ್ಟಿ ನಡೆದಿದೆ.

ಹೌದು… ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಿಸಿಎಂ ಹಾಸ್ಟೆಲ್ ನದ್ದು ಎನ್ನಲಾಗುತ್ತಿರೋ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಇನ್ನು ವಿದ್ಯಾರ್ಥಿನಿ ಬಿಯರ್ ಕುಡಿಯುತ್ತಿರೋ ದೃಶ್ಯ ವಿಡಿಯೋದಲ್ಲಿದ್ದು, ಇದನ್ನೇ ವಾರ್ಡನ್ ಬಂಡವಾಳ ಮಾಡಿಕೊಂಡಿಕೊಂಡಿದ್ದು, ಪ್ರಕರಣ ಮುಚ್ಚಿಹಾಕಲು ಹಣ ವಸೂಲಿಗೆ ಇಳಿದಿದ್ದಾರೆ. ಅಲ್ಲದೇ ಮೂರ್ನಾಲ್ಕು ವಾರ್ಡನ್​​ಗಳು, ವಿದ್ಯಾರ್ಥಿನಿಯರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ.

ಇನ್ನು ವಾರ್ಡನ್ ಹಾಗೂ ವಿದ್ಯಾರ್ಥಿನಿಯ ಆಡಿಯೋ ಕೂಡಾ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ಪ್ರಶ್ನೆಪತ್ರಿಕೆ ಸೋರಿಕೆ: ಕೊನೆಗೂ ಕೇಂದ್ರ ಸಚಿವ Dharmendra Pradhan ರಾಜಿನಾಮೆ; ಪ್ರಧಾನಿ ಮೋದಿಗೆ ಪತ್ರ! ಹೇಳಿದ್ದೇನು?

UNESCO ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪ್ರಾಚೀನ ಬೌದ್ಧ ತಾಣ ಸಾರನಾಥ!

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ದೇಶದ ಪ್ರತಿಯೊಬ್ಬ ಆಡಳಿತಗಾರರಿಗೆ ಎಚ್ಚರಿಕೆ ಪಾಠ; ಕಾಂಗ್ರೆಸ್ ನಿಂದ ಆಗಾಧ ಬೆಂಬಲ- ಪ್ರಿಯಾಂಕಾ ಗಾಂಧಿ

CWG 2026: ತರಕಾರಿ ಮಾರುತ್ತಿದ್ದ ಝಂಡು ಕುಮಾರ್ ಕಂಚು ಗೆದ್ದಿದ್ದು ಕ್ರೀಡಾಕೂಟದಲ್ಲಿ ಖಾತೆ ತೆರೆದ ಭಾರತ!

"ನಮ್ಮ 3 ಬೇಡಿಕೆಗಳನ್ನು ಲಿಖಿತವಾಗಿ ಸ್ವೀಕರಿಸಿ, ನಾವು ಮನೆಗೆ ಹೋಗುತ್ತೇವೆ": ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಮೇಣದಬತ್ತಿ ಮೆರವಣಿಗೆಗೆ ಸಿಜೆಪಿ ಕರೆ!