ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರು: ಉದ್ಯಮಿಗೆ ಬ್ಲ್ಯಾಕ್ ಮೇಲ್ ಮಾಡಿ 2.7 ಕೋಟಿ ರೂ ಹಣ ಸುಲಿಗೆ; ಯುವ ಕಾಂಗ್ರೆಸ್ ಮುಖಂಡನ ಬಂಧನ

2024ರಲ್ಲೇ ಪ್ರಸಿದ್ಧ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದಾನೆ.

ಮಂಗಳೂರು: ಉದ್ಯಮಿಯೊಬ್ಬರಿಗೆ ಮೇಲೆ 'ಬ್ಲ್ಯಾಕ್‌ಮೇಲ್' ಮಾಡಿ, ಅವರ ಆತ್ಮೀಯ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿ 2.77 ಕೋಟಿ ರೂ.ಗಳನ್ನು 'ಸುಲಿಗೆ' ಮಾಡಿದ ಆರೋಪದ ಮೇಲೆ ಯುವ ಕಾಂಗ್ರೆಸ್ ನಾಯಕ ನಿಜಾಮ್ ಇಬ್ರಾಹಿಂ ಮತ್ತು ಅವರ ಸಹಚರ ಜಿತೇಶ್ ಎಂಬುವರನ್ನು ಮಂಗಳೂರಿನ ಉರ್ವಾ ಪೊಲೀಸರು ಬಂಧಿಸಿದ್ದಾರೆ.

2024ರಲ್ಲೇ ಪ್ರಸಿದ್ಧ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದನಂತೆ. ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ ಕೈ ಮುಖಂಡರು, ಹಣ ಕೊಡದಿದ್ರೆ ಆತನ ಪತ್ನಿಗೆ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿದ್ದರು. ಮೊದಲಿಗೆ ಜಿತೇಶ್​ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್​ಗೆ ಉದ್ಯಮಿ ಹಣ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಉದ್ಯಮಿಯ ನಿವಾಸಕ್ಕೆ ಭೇಟಿ ನೀಡಿ ಹಣಕ್ಕಾಗಿ ಒತ್ತಡ ಹೇರುತ್ತಲೇ ಇದ್ದರು.

ಬೇಡಿಕೆಗಳು ಹೆಚ್ಚಾದಂತೆ, ಬಲಿಪಶು ಸಹಾಯಕ್ಕಾಗಿ ತಮ್ಮ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ನಿಜಾಮ್ ಇಬ್ರಾಹಿಂ ಅವರನ್ನು ಸಂಪರ್ಕಿಸಿದರು. ಉದ್ಯಮಿಗೆ ಸಹಾಯ ಮಾಡುವ ಬದಲು ನಿಜಾಮ್ ಸುಲಿಗೆ ದಂಧೆಯ ಭಾಗವಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಉದ್ಯಮಿಯಿಂದ ನಿಜಾಮ್​ ಮತ್ತೆ ಕೋಟಿ ಕೋಟಿ ಲೂಟಿ ಮಾಡಿದ್ದು, ಈವರೆಗೆ ಬರೋಬ್ಬರಿ 2 ಕೋಟಿ 77 ಲಕ್ಷ ದೋಚಿ ಭಾರೀ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿ ನಿಝಾಮ್ ಇಬ್ರಾಹಿಂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸದ್ಯ ಹನಿಟ್ರ್ಯಾಪ್ ಕೇಸ್​​ನಲ್ಲಿ ನಿಝಾಮ್ ಮತ್ತು ಜಿತೇಶ್ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

ಉರ್ವಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸೆಕ್ಷನ್ 308(5) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿನ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಿಜಾಮ್ ಇಬ್ರಾಹಿಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ, ವ್ಯಾಪಾರಿಗಳು ಬೇಸ್ತು! ಕಾರಣ ಏನು?

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!