ಪ್ರಿಯಾಂಕ್ ಖರ್ಗೆ 
ರಾಜ್ಯ

RSS ನಾಯಕರು ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸುವುದರಲ್ಲಿ ಮುಂದು, ವೀರ ಸಾವರ್ಕರ್ ಬಿರುದು ಹೇಗೆ ಬಂತು ಎಂದು ಅವರಿಗೆ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ-Video

ರಾಜ್ಯಪಾಲರ ಬಳಿಗೆ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ, ಬಿಜೆಪಿಯವರು ಮಾಧ್ಯಮಗಳ ಮುಂದೆ ಬಂದು ದಾಖಲೆಗಳನ್ನು ತೋರಿಸಲಿ, ಜನರಿಗೆ ತೋರಿಸಲಿ ಎಂದರು.

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ನನ್ನ ಪ್ರಶ್ನೆ ತರ್ಕಬದ್ಧವಾಗಿಲ್ಲವೇ ಅಥವಾ ಸಂವಿಧಾನಾತ್ಮಕವಾಗಿಲ್ಲವೇ ಅಥವಾ ಕಾನೂನಿಗೆ ವಿರುದ್ಧವಾಗಿದೆಯೇ ಎಂದು ಕೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ನಾನು ವಿಷಯಾಂತರ ಮಾಡಲು ಇಚ್ಛಿಸುವುದಿಲ್ಲ, ರಾಜ್ಯಪಾಲರ ಬಳಿಗೆ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ, ಬಿಜೆಪಿಯವರು ಮಾಧ್ಯಮಗಳ ಮುಂದೆ ಬಂದು ದಾಖಲೆಗಳನ್ನು ತೋರಿಸಲಿ, ಜನರಿಗೆ ತೋರಿಸಲಿ. ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಮತ್ತು ತ್ಯಾಜ್ಯ ವಿಲೇವಾರಿ ಮಾಡುವ ನೆಪದಲ್ಲಿ ಕಾಂಗ್ರೆಸ್‌ ಸರ್ಕಾರ 39,000 ಕೋಟಿ ಹಗರಣ ನಡೆಸಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರು ಜನರ ಮುಂದೆ ಬಂದು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಕಸ ಸಂಸ್ಕರಣೆಯಲ್ಲಿ ಯಾವುದೇ ಹಗರಣವಾಗಿಲ್ಲ, ಈ ಕುರಿತು ಯಾವುದೇ ತನಿಖೆಗೆ ಸಿದ್ಧ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹಗರಣವಾಗಿದ್ದರೆ ಬಿಜೆಪಿಯವರು ತೋರಿಸಲಿ ಎಂದರು.

ನಾವು ವೈಜ್ಞಾನಿಕವಾಗಿ ಕಸ ಸಂಗ್ರಹಣೆ, ವಿಲೇವಾರಿ ಮಾಡುತ್ತಿದ್ದೇವೆ, ಅದನ್ನು ಶ್ಲಾಘಿಸಬೇಕು, ಅದು ಬಿಟ್ಟು ಸುಮ್ಮನೆ ಟೀಕೆ ಮಾಡುವುದಲ್ಲ. ಆರ್‌ಎಸ್‌ಎಸ್ ಮತ್ತು ಅದರ ನಾಯಕರು ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸುವುದಕ್ಕೆ ಹೆಸರುವಾಸಿಗಳು ವೀರ ಸಾವರ್ಕರ್ ಗೆ ವೀರ ಎಂಬ ಬಿರುದು ಹೇಗೆ ಬಂತು ಎಂದು ಕೂಡ ಅವರಿಗೆ ಗೊತ್ತಿಲ್ಲ, ಪಂಡಿತ್ ಜವಹರಲಾಲ್ ನೆಹರೂ ಬಗ್ಗೆ ಕೂಡ ಅವರಿಗೆ ಜ್ಞಾನವಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಅಮೆರಿಕ ದಾಳಿ: ಇಬ್ಬರು ಭಾರತೀಯ ನಾವಿಕರು, ಓರ್ವ ಮುಖ್ಯ ಇಂಜಿನಿಯರ್ ಸಾವು!

ಮಣಿಪುರದಲ್ಲಿ ಮತ್ತೆ ರಕ್ತಪಾತ: ಅಪಹರಣಕ್ಕೊಳಗಾಗಿದ್ದ ನಾಗಾ ಸಮುದಾಯದ 6 ಮಂದಿ ಶವವಾಗಿ ಪತ್ತೆ, ಇನ್ನು ಸುಮ್ಮನಿರಲ್ಲ- ಮಣಿಪುರ CM ಖಡಕ್ ಎಚ್ಚರಿಕೆ!

ಬೆಂಗಳೂರಲ್ಲಿ ಭೀಕರ ಅಪಘಾತ: ಗೊರಗುಂಟೆಪಾಳ್ಯ ಬಳಿ ಬೈಕಿಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

ಧರ್ಮಸ್ಥಳ ವಿಸ್ಮಯ: 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಸತೀಶ್, ಸಲೀಂ ಆಗಿ ಪತ್ತೆ! ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!

Hormuz ಜಲಸಂಧಿ ಮತ್ತೆ ಸ್ಥಗಿತ, ಜಗತ್ತಿಗೆ ಶಾಕ್ ಕೊಟ್ಟ Iran, ಅಮೆರಿಕ ಮುಂದಿನ ನಡೆಯೇನು?

SCROLL FOR NEXT