ಬೆಂಗಳೂರು: ಸರ್ದಾರ್ ಪಟೇಲ್, ನೆಹರೂ ಅವರು ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದಾಗ ಇದೇ ಆರ್ ಎಸ್ ಎಸ್ ನವರು ಕೈಕಾಲು ಹಿಡಿದಿದ್ದರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಟಿ ರವಿಯವರಿಗೆ ಆರ್‌ಎಸ್‌ಎಸ್‌ನ ಇತಿಹಾಸವೇ ಗೊತ್ತಿಲ್ಲ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇವರ ಸಂಚಾಲಕರೇ ಪತ್ರ ಬರೆದಿದ್ದರು. ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಅಂದರೆ ಅವರಿಗೆ ಯಾಕಷ್ಟು ಭಯ? ಈ ಸಂವಿಧಾನದ ಅಡಿಯಲ್ಲಿ ಈ ಕಾನೂನಿಗೆ ನಾವು ಒಳಪಡೋದಿಲ್ಲ ಅಂತ ನಂಗೆ ಹೇಳಲಿ. ನಾನೇ ಅವರ
ಕೇಶವಕೃಪಗೆ ಹೋಗ್ತೀನಿ, ಇಲ್ಲ ಅವರೇ ನನ್ನ ಆಫೀಸ್‌ಗೆ ಬಂದು ತೋರಿಸಲಿ ಎಂದು ಕಿಡಿಕಾರಿದರು. ಈ ದೇಶದಲ್ಲಿ ಬೀದಿ ವ್ಯಾಪಾರಿಯೂ ರಿಜಿಸ್ಟರ್ ಮಾಡಿಕೊಳ್ಳಬೇಕು, ದೇವಸ್ಥಾನ ನೋಂದಣಿ ಮಾಡಬೇಕು. ದೇವರು ಲೆಕ್ಕ ಕೊಡಬೇಕು, ಜನರು ಲೆಕ್ಕ ಕೊಡಬೇಕು ಐಟಿ ಮುಂದೆ ಲೆಕ್ಕ ಕೊಡಲೇಬೇಕು. ಇವರು ಮಾತ್ರ ಯಾವ ಲೆಕ್ಕವನ್ನು ಕೊಡುವ ಹಾಗೆ ಇಲ್ವಾ? ಇವರ ದೇಣಿಗೆಗೆ ಯಾವುದೇ ಲೆಕ್ಕ ಕೊಡುವ ಹಾಗಿಲ್ವಾ? ಎಂದು ಪ್ರಶ್ನಿಸಿದರು.
ಇವರು ಯಾವ ರೀತಿ ಹೇಡಿಗಳ ರೀತಿ ಕೈಕಾಲಿಗೆ ಬೀಳುತ್ತಾರೆ ಗೊತ್ತಿಲ್ವಾ? ಅವರೇ ಬರೆದಿರೋ ಇತಿಹಾಸ ಇದೆ. ವೀರಸಾವರ್ಕರ್ 60 ರೂಪಾಯಿ ಪಿಂಚಣಿ ತೆಗೆದುಕೊಳ್ಳುತ್ತಿದ್ದರು. ಬ್ರಿಟಿಷರ ಬಳಿ ಪಿಂಚಣಿ ಪಡೆಯುತ್ತಾ ಇದ್ದರು ಎಂದು ವಾಗ್ದಾಳಿ ನಡೆಸಿದರು.