ರಾಜ್ಯ

ಕೊಲ್ಲೂರಿಗೆ ಬಂದು ಮರಳಿ ಮಂಗಳೂರು ಏರ್ ಪೋರ್ಟ್ ಗೆ ಸ್ವತಃ ಡ್ರೈವಿಂಗ್ ಮಾಡಿಕೊಂಡು ಹೋದ ದಳಪತಿ ವಿಜಯ್ ಕ್ರೇಜ್ ನೋಡಿ... Viral Video

ವಿಜಯ್ ಅವರು ಏರ್ಪೋರ್ಟ್​ಗೆ ಬರುತ್ತಿದ್ದಂತೆ ಅವರನ್ನು ಆರೋಗ್ಯ ಸಚಿವ ಯುಟಿ ಖಾದರ್ ಔಪಚಾರಿಕವಾಗಿ ಸರ್ಕಾರದ ಪರವಾಗಿ ಸ್ವಾಗತಿಸಿದ್ದಾರೆ. ಗಣ್ಯರು ಅವರನ್ನು ಸ್ವಾಗತಿಸಿದ ನಂತರ ವಿಜಯ್ ಅವರು ಕಾರನ್ನು ಹತ್ತಿ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.

ತಮಿಳುನಾಡಿನ ನೂತನ ಸಿಎಂ ಖ್ಯಾತ ನಟ ದಳಪತಿ ವಿಜಯ್ ನಿನ್ನೆ ಕರಾವಳಿಯ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ದೇವಿಗೆ ಬೆಳ್ಳಿ ಖಡ್ಗ ಹರಕೆ ಸಲ್ಲಿಸಿ ಹೋದರು.

ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ-ಚಪ್ಪಾಳೆ ಮುಗಿಲುಮುಟ್ಟಿತ್ತು. ದಾರಿಯುದ್ದಕ್ಕೂ ಅಭಿಮಾನಿಗಳು ಅವರಿಗೆ ವಿಶ್ ಮಾಡುತ್ತಿದ್ದರು, ದಳಪತಿ ವಿಜಯ್ ಗೆ ಕರ್ನಾಟಕದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ವಿಜಯ್ ಅವರು ಏರ್ಪೋರ್ಟ್​ಗೆ ಬರುತ್ತಿದ್ದಂತೆ ಅವರನ್ನು ಆರೋಗ್ಯ ಸಚಿವ ಯುಟಿ ಖಾದರ್ ಔಪಚಾರಿಕವಾಗಿ ಸರ್ಕಾರದ ಪರವಾಗಿ ಸ್ವಾಗತಿಸಿದ್ದಾರೆ. ಗಣ್ಯರು ಅವರನ್ನು ಸ್ವಾಗತಿಸಿದ ನಂತರ ವಿಜಯ್ ಅವರು ಕಾರನ್ನು ಹತ್ತಿ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.

ಟೊಯೋಟಾ ಲ್ಯಾಂಡ್ ಕ್ರ್ಯೂಸರ್

ವಿಜಯ್ ಅವರು ಟೊಯೋಟೋ ಲ್ಯಾಂಡ್ ಕ್ರ್ಯೂಸರ್ ಹತ್ತಿ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ. ಟೊಯೋಟೋ ಲ್ಯಾಂಡ್ ಕ್ರೂಸರ್ 300 ಲಕ್ಷುರಿ ಕಾರುಗಳಲ್ಲಿ ಒಂದು.

ಕಾರಿನ ಕ್ರೇಸ್ ಹೊಂದಿರುವ ವಿಜಯ್

ನಟ ವಿಜಯ್ ಗೆ ಕಾರುಗಳೆಂದರೆ ಅಪಾರ ಹುಚ್ಚು. ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಹೇಳುವಂತೆ, ದಳಪತಿ ವಿಜಯ್ ಅವರು ಆಟೋಮೊಬೈಲ್‌ಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಅವರ ಬಳಿ 10ರಿಂದ 12 ವಿವಿಧ ಕಾರುಗಳಿವೆ. ಅಲ್ಲದೆ, ಅವರು ದೂರದ ಪ್ರಯಾಣಕ್ಕಾಗಿ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದನ್ನು ತುಂಬಾ ಇಷ್ಟಪಡುತ್ತಾರೆ.

ಅವರ ತಾಯಿ ಹೇಳಿದ್ದು ನಿಜ ಎನಿಸುತ್ತದೆ. ಅವರು ತಮಿಳು ನಾಡು ಸಿಎಂ ಆದರೂ ನಿನ್ನೆ ಕೊಲ್ಲೂರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮರಳಿ ಮಂಗಳೂರು ವಿಮಾನ ನಿಲ್ದಾಣದವರೆಗೆ 130 ಕಿಲೋಮೀಟರ್‌ಗಿಂತ ಹೆಚ್ಚು ದೂರವನ್ನು ಸ್ವತಃ ಬೆಂಗಾವಲು ಪಡೆ ಕಾರು ಚಲಾಯಿಸಿ ಪ್ರಯಾಣಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

Gen-Z ಗಳಿಗೆ ʻಜನರೇಷನ್‌ ಗಟರ್‌ʼಎಂದ ಕಂಗನಾ ರಣಾವತ್; ಅವರನ್ನು ಬಿಜೆಪಿಯೇ ಗಂಭೀರವಾಗಿ ಪರಿಗಣಿಸಿಲ್ಲ, ಸಿಜೆಪಿ ತಿರುಗೇಟು! Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

NEET ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ಮುಂದು!