ಡಿ.ಕೆ ಶಿವಕುಮಾರ್ 
ರಾಜ್ಯ

ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ: ಸಿಎಂ ಡಿ.ಕೆ. ಶಿವಕುಮಾರ್

ಪ್ರತಿ ಬಾರಿಯಂತೆ ನಗರದ ನಾಲ್ಕು ಕೆಂಪೇಗೌಡ ಗೋಪುರಗಳಿಂದ ಪ್ರತ್ಯೇಕ ತಂಡಗಳು ಆಗಮಿಸಲಿವೆ. ನಾಲ್ಕು ಗೋಪುರಗಳ ಪೈಕಿ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಬೈರತಿ ಸುರೇಶ್ ಅವರು ಜವಾಬ್ದಾರಿ ವಹಿಸಲಿದ್ದಾರೆ.

ಬೆಂಗಳೂರು: ನೂತನವಾಗಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಇದೇ 27ರಂದು ಬೆಳಗ್ಗೆ 11.30ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿ ನಡೆಸಲು ತೀರ್ಮಾನಿಸಲಾಗಿದೆ. ಬಿಡಿಎ ವತಿಯಿಂದ ಅಧ್ಯಕ್ಷರಾದ ಹ್ಯಾರೀಸ್ ಅವರ ನೇತೃತ್ವದಲ್ಲಿ ನಗರದಲ್ಲಿ 15 ಲಕ್ಷ ಗಿಡಗಳನ್ನು ನೆಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಪೂರ್ವಭಾವಿ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಪ್ರತಿ ವರ್ಷದಂತೆ ಕೆಂಪೇಗೌಡ ಜಯಂತಿ ಆಚರಣೆ ಕುರಿತಾಗಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಕಾರ್ಯಕ್ರಮದ ರೂಪುರೇಷೆ ಬಗ್ಗೆ ಎಲ್ಲಾ ಸಂಘಟನೆಗಳ ಜತೆ ಚರ್ಚೆ ಮಾಡಲಾಗಿದೆ. ಪ್ರತಿ ಬಾರಿಯಂತೆ ನಗರದ ನಾಲ್ಕು ಕೆಂಪೇಗೌಡ ಗೋಪುರಗಳಿಂದ ಪ್ರತ್ಯೇಕ ತಂಡಗಳು ಆಗಮಿಸಲಿವೆ. ನಾಲ್ಕು ಗೋಪುರಗಳ ಪೈಕಿ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಬೈರತಿ ಸುರೇಶ್ ಅವರು ಜವಾಬ್ದಾರಿ ವಹಿಸಲಿದ್ದಾರೆ.

ಇನ್ನು ಮಾಗಡಿ ತಂಡವನ್ನು ಸ್ಥಳೀಯ ಶಾಸಕರಾದ ಬಾಲಕೃಷ್ಣ, ಹುಲಿಯೂರು ದುರ್ಗ ಕಡೆಯಿಂದ ರಂಗನಾಥ್ ಅವರು ಮುನ್ನಡೆಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಕ್ರಮವನ್ನು ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರಿಂದ ನಡೆಸಲಾಗುವುದು. ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ತಯಾರಿ ಮಾಡಲಾಗುವುದು” ಎಂದು ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಅದರ ಸಿದ್ಧತೆ ನಡೆಸಲಾಗುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಜಯಂತಿ ಆಚರಿಸಲಾಗುವುದು. ಇದಕ್ಕಾಗಿ 1 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬೇರೊಂದು ದಿನ ಬೆಂಗಳೂರಿನ 369 ವಾರ್ಡ್ ಗಳಲ್ಲಿ ಈ ಕಾರ್ಯಕ್ರಮ ನಡೆಸಲು ಜಿಬಿಎ ವತಿಯಿಂದ ತಲಾ 1 ಲಕ್ಷ ಅನುದಾನ ನೀಡಲಾಗುವುದು.

ಈ ಕಾರ್ಯಕ್ರಮದ ದಿನಾಂಕವನ್ನು ಬೆಂಗಳೂರು ನಗರದ ಸಚಿವರು ತೀರ್ಮಾನ ಮಾಡಲಿದ್ದಾರೆ. ಈ ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ” ಎಂದರು.“ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಥೀಮ್ ಪಾರ್ಕ್ ಪೂರ್ಣಗೊಂಡಿದ್ದು, ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ತಯಾರಿ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಗಣ್ಯರು, ಸ್ವಾಮೀಜಿಗಳು ಹಾಗೂ ನಾಯಕರ ಆಹ್ವಾನದ ಜವಾಬ್ದಾರಿಯನ್ನು ಕೃಷ್ಣ ಬೈರೇಗೌಡರು ವಹಿಸಿಕೊಂಡಿದ್ದಾರೆ. ಸಂಘಟನೆಗಳು ಹಾಗೂ ಒಕ್ಕಲಿಗರ ಸಂಘ ತಮ್ಮದೇ ಆದ ಜವಾಬ್ದಾರಿ ಹೊತ್ತುಕೊಂಡಿವೆ. ಈ ಕಾರ್ಯಕ್ರಮ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ.

ಕೆಂಪೇಗೌಡರು ಬೆಂಗಳೂರು ನಗರ ಹಾಗೂ ರಾಜ್ಯದ ಆಸ್ತಿ. ಎಲ್ಲಾ ಧರ್ಮ, ಜಾತಿ, ಸಂಘಟನೆಯವರು ಸೇರಿ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಿ 7 ಸಭೆ: ಸಂಬಂಧಗಳಲ್ಲಿನ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ-ಡೊನಾಲ್ಡ್ ಟ್ರಂಪ್ ಪರಸ್ಪರ ಶುಭಾಶಯ ವಿನಿಮಯ; ಜೂ.17 ರಂದು ದ್ವಿಪಕ್ಷೀಯ ಸಭೆ

'ನಾನಿಲ್ಲದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ': ನೆತನ್ಯಾಹು ವಿರುದ್ಧ ಟ್ರಂಪ್ ಅಸಮಾಧಾನ; 'ಅವರಿಗೆ' ಸಾಧ್ಯವಾಗದಿದ್ದರೆ ಹಿಜ್ಬೊಲ್ಲಾನ ಸಿರಿಯಾ ನೋಡಿಕೊಳ್ಳುತ್ತೆ; Video

ಸಿಎಂ ಡಿಕೆ ಶಿವಕುಮಾರ್ ವಿಶೇಷ ಕರ್ತವ್ಯಾಧಿಕಾರಿಯಾಗಿ ಬಿ.ಎಸ್. ಶ್ರೀಧರ್ ನೇಮಕ

'ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಹಲವು ವರ್ಷಗಳಷ್ಟು ಮುಂದಿದೆ': ಸ್ಲೋವೇನಿಯಾದ ಪ್ರವಾಸಿ ಮಹಿಳೆ ಮೆಚ್ಚುಗೆ

ಶ್ವೇತಭವನದ UFC ಕಾರ್ಯಕ್ರಮದ ಮೇಲೆ ಯೋಜಿತ ದಾಳಿ ಸಂಚು ವಿಫಲ, ತಪ್ಪಿದ ಭಾರಿ ಅನಾಹುತ: ಐವರ ಬಂಧನ

SCROLL FOR NEXT