ಸಾಂದರ್ಭಿಕ ಚಿತ್ರ 
ರಾಜ್ಯ

ಧಾರವಾಡ ಕೋರ್ಟ್ ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ಪರಿಶೀಲನೆ

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನುಮಾನಾಸ್ಪದ ಇ-ಮೇಲ್ ಬಂದಿದ್ದು, ಅದರಲ್ಲಿ ಬಾಂಬ್ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದೆ.

ಧಾರವಾಡ: ಇಲ್ಲಿನ ಆವರಣದಲ್ಲಿ ‘ಸೈನೈಡ್ ಗ್ಯಾಸ್ ಬಾಂಬ್‘ ಸ್ಫೋಟವಾಗಲಿದೆ ಎಂಬ ಬೆದರಿಕೆ ಸಂದೇಶ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶರ ಇಮೇಲ್‌ಗೆ ಬಂದಿದ್ದು, ಪೋಲೀಸರು ಕೋರ್ಟ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಿ, ಎಲ್ಲರನ್ನೂ ಹೊರಗೆ ಕಳಿಸಲಾಗಿದೆ. ಶ್ವಾನ ದಳ ಮತ್ತು ವಿಧ್ವಂಸಕ ಕೃತ್ಯ ತಪಾಸಣೆ ತಂಡದವರು ತಪಾಸಣೆ ನಡೆಸುತ್ತಿದ್ದಾರೆ. karunanidhi.kundi@underworld.dog ಇಮೇಲ್ ನಿಂದ ಸಂದೇಶ ಬಂದಿದೆ. ಸಂದೇಶದ ಕೊನೆಯಲ್ಲಿ 'ಜೈ ಕನಿಮೊಳಿ' ಎಂದು ಬರೆಯಲಾಗಿದೆ.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನುಮಾನಾಸ್ಪದ ಇ-ಮೇಲ್ ಬಂದಿದ್ದು, ಅದರಲ್ಲಿ ಬಾಂಬ್ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದೆ.

ನಿನ್ನೆ ಮಧ್ಯಾಹ್ನ 2 ಗಂಟೆಗೆ ನಿಮ್ಮ ನ್ಯಾಯಾಲಯದಲ್ಲಿ 23 ಸರಣಿ ಗುಂಡುಗಳು ಸ್ಫೋಟಗೊಂಡಿವೆ. ನಿನ್ನೆ ನಡೆದಿದ್ದು ಸ್ಯಾಂಪಲ್ ಪರೀಕ್ಷೆ. ಇಂದು ನಡೆಯುವುದು ನಿಜ ಎಂದು ಉಲ್ಲೇಖಿಸಲಾಗಿದೆ. ಬೆದರಿಕೆ ಮೇಲ್ ಬಂದ ತಕ್ಷಣ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದೊಳಗಿದ್ದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಲೆಬನಾನ್: 16 ಮಂದಿ ಬಲಿ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌; ಪುಡಾರಿ ವಿರುದ್ಧ FIR

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ಪಶ್ಚಿಮ ಬಂಗಾಳದಲ್ಲಿ ತೃಣಮೂಲಕ್ಕೆ ಕುಸಿದ ಮಮತಾ (ನೇರ ನೋಟ)