ಹೈಕೋರ್ಟ್  online desk
ರಾಜ್ಯ

DRDO ಕ್ಯಾಂಪಸ್‌ನಿಂದ 21 ಶ್ವಾನಗಳು ನಾಪತ್ತೆ ಪ್ರಕರಣ: ತನಿಖೆಗೆ ಹೈಕೋರ್ಟ್ ಒಪ್ಪಿಗೆ

ಮಾರ್ಚ್ 9ರಂದು ಡಿಆರ್‌ಡಿಒ ಕ್ಯಾಂಪಸ್‌ನ ಒಳ ರಸ್ತೆಗಳಲ್ಲಿದ್ದ 21 ಬೀದಿ ನಾಯಿಗಳನ್ನು ಅನೈತಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ನಾಯಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಬೆಂಗಳೂರು: ನಗರದ ಡಿಆರ್‌ಡಿಒ (DRDO) ಕ್ಯಾಂಪಸ್‌ನಿಂದ 21 ಬೀದಿ ನಾಯಿಗಳು ನಾಪತ್ತೆಯಾಗಿರುವ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಇದೇ ವೇಳೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಡಿಆರ್‌ಡಿಒನ ಇಬ್ಬರು ಅಧಿಕಾರಿಗಳಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದೂ ತನಿಖಾ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, ಈ ಹಿಂದೆ ಮಾರ್ಚ್ 25ರಂದು ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಡಿಆರ್‌ಡಿಒ ಎಸ್ಟೇಟ್ ಮ್ಯಾನೇಜರ್ ರಾಕೇಶ್ ಕುಮಾರ್ ಸಾಹು ಮತ್ತು ಕ್ಲೀನಿಂಗ್ ಸೂಪರ್‌ವೈಸರ್ ಟಿ.ಜಿ. ಸುಧಾಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಂಡಿದೆ.

ಪ್ರಕರಣದ ತನಿಖೆ ಅಗತ್ಯವಾಗಿದ್ದು, ತನಿಖೆಯಿಂದ ಹೊರಬರುವ ನಿಜಾಂಶಗಳ ಆಧಾರದ ಮೇಲೆ ಮಾತ್ರ ಅಪರಾಧಗಳ ಸ್ವರೂಪ ನಿರ್ಧಾರವಾಗಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅರ್ಜಿದಾರ ಅಧಿಕಾರಿಗಳಿಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಆದರೆ, ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಿದೆ. ಅಲ್ಲದೆ, ತನಿಖೆಯನ್ನು ಆರು ವಾರಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಮಾರ್ಚ್ 9ರಂದು ಡಿಆರ್‌ಡಿಒ ಕ್ಯಾಂಪಸ್‌ನ ಒಳ ರಸ್ತೆಗಳಲ್ಲಿದ್ದ 21 ಬೀದಿ ನಾಯಿಗಳನ್ನು ಅನೈತಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ನಾಯಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಅರ್ಜಿದಾರರ ಪರ ವಕೀಲರು, ಡಿಆರ್‌ಡಿಒ ಕ್ಯಾಂಪಸ್‌ಗೆ ಯಾರು ಪ್ರವೇಶಿಸಿ ನಾಯಿಗಳನ್ನು ಕೊಂಡೊಯ್ದರು ಎಂಬುದರ ಬಗ್ಗೆ ತನಿಖೆ ನಡೆಯಬೇಕು. ನಾಯಿಗಳ ನಾಪತ್ತೆಗೆ ನಮ್ಮ ಕಕ್ಷಿದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ವಾದಿಸಿದರು.

ಇನ್ನೊಂದೆಡೆ, ಪ್ರಾಣಿ ಕಲ್ಯಾಣ ಸಂಘಟನೆ ಪರ ವಕೀಲರಾದ ವೈಶಾಲಿ ಹೆಗಡೆ, ಡಿಆರ್‌ಡಿಒ ಕ್ಯಾಂಪಸ್‌ಗೆ ಅನುಮತಿ ಇಲ್ಲದೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ಅಗತ್ಯ ಎಂದು ನ್ಯಾಯಾಲಯದ ಗಮನ ಸೆಳೆದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ತನಿಖೆಗೆ ಅನುಮತಿ ನೀಡಿ ಮುಂದಿನ ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ರಾಮ ಮಂದಿರ ದೇಣಿಗೆ ಕಳ್ಳತನ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಉತ್ತರಪ್ರದೇಶ SIT ಕ್ಲೀನ್ ಚಿಟ್!

PM CARES ನಿಧಿ ವಿವರ ಬಹಿರಂಗ; ದೇಣಿಗೆಗಳಲ್ಲಿ ತೀವ್ರ ಕುಸಿತ ವಿದೇಶಿ ದೇಣಿಗಗಳ ಬಗ್ಗೆ ಕೇಂದ್ರ ಹೇಳಿದ್ದೇನು?

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ