ಕೃಷಿ ತಾಪಂಡ 
ರಾಜ್ಯ

ಗೆಳೆಯನ ಅಂತ್ಯಕ್ರಿಯೆಗೆ ಕಣ್ಣೀರಿಡುತ್ತ ಓಡಿಬಂದ ಕೃಷಿ ತಾಪಂಡ; ವೈಶಾಕ್ ಕುಟುಂಬಸ್ಥರಿಂದ ನಟಿಗೆ ತೀವ್ರ ತರಾಟೆ!

ಇಂದು ಸಂಜೆ ಚಾಮರಾಜಪೇಟೆಯ ಚಿತಾಗಾರದಲ್ಲಿ ವೈಶಾಕ್‌ ಅವರ ಅಂತ್ಯಕ್ರಿಯೆ ನಡೆಯಿತು.

ಬೆಂಗಳೂರು: ನಟಿ ಕೃಷಿ ತಾಪಂಡ ಅವರು ವಾಸವಿರುವ ಆರ್.ಆರ್. ನಗರದ ಎಲಿಗೇಟ್ ಅಪಾರ್ಟ್‌ಮೆಂಟ್‌ನ ಬೆಡ್​ರೂಮ್​​ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

ಇಂದು ಸಂಜೆ ಚಾಮರಾಜಪೇಟೆಯ ಚಿತಾಗಾರದಲ್ಲಿ ವೈಶಾಕ್‌ ಅವರ ಅಂತ್ಯಕ್ರಿಯೆ ನಡೆಯಿತು. ಗೆಳೆಯ ಸಾವಿಗೆ ಶರಣಾದಾಗ ಮನೆಯಲ್ಲಿ ಇರದ ನಟಿ ಕೃಷಿ ಅವರು ವೈಶಾಖ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕಣ್ಣೀರಿಡುತ್ತ ಓಡೋಡಿ ಬಂದರು.

ಆದರೆ ಸ್ಥಳಕ್ಕೆ ನಟಿ ಕೃಷಿ ತಪಾಂಡ ಬಂದಿರುದನ್ನ ಗಮನಿಸಿದ ವೈಶಾಕ್ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಬಂಧಿಕರ ವಿರೋಧದ ಹಿನ್ನೆಲೆಯಲ್ಲಿ ಕೃಷಿ ತಾಪಂಡ ಅವರು ಕೊನೆಯ ಗಳಿಗೆಯಲ್ಲೂ ಗೆಳೆಯನ ಮುಖ ನೋಡಲಾಗದೇ ಕಣ್ಣೀರಿಟ್ಟಿದ್ದಾರೆ.

ಈ ವೇಳೆ ವೈಶಾಕ್‌ ಕುಟುಂಬಸ್ಥರು, ಕೃಷಿ ತಾಪಂಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನೀನು ಅವನ ಮುಖ ನೋಡೋ ಅವಶ್ಯತಕೆ ಇಲ್ಲ. ಇಲ್ಲಿಂದ ಮೊದಲು ಹೊರಡು ಎಂದಿದ್ದಾರೆ. ಇದರಿಂದ ಬೇಸತ್ತ ಕೃಷಿ ಹಾಗೆಯೇ ವಾಪಸ್ಸಾಗಿದ್ದು, ಕಾರಿನಲ್ಲಿ ಕುಳಿತು ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.

ವೈಶಾಕ್ ಅವರು ಆತ್ಮಹತ್ಯೆಗೂ ಮುನ್ನ ನೆಲಮಂಗಲದಲ್ಲಿದ್ದ ಕೃಷಿ ತಾಪಂಡ ಅವರಿಗೆ ಹಲವು ಬಾರಿ ಕರೆ ಮಾಡಿದ್ದರು. ಆದರೂ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ಹೀಗಾಗಿ ವಾಟ್ಸಾಪ್ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದರು. ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂದು ನಿನ್ನೆ ರಾತ್ರಿ ನಟಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮನೆಗೆ ಬರುತ್ತಿದ್ದಂತೆ ವಿಚಾರ ತಿಳಿದ ಕೃಷಿ, ವೈಶಾಕ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅನೇಕ‌ ದಿನಗಳಿಂದ ಕೃಷಿ ಮನೆಯಲ್ಲಿ ವೈಶಾಕ್ ವಾಸವಾಗಿದ್ದರು. ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಮೊಬೈಲ್‌ನಲ್ಲೂ ಯಾವುದೇ ವಿಡಿಯೋವನ್ನೂ ಮಾಡಿಲ್ಲ. ಪೊಲೀಸರು ವೈಶಾಕ್ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

ಪೋಕ್ಸೋ ಪ್ರಕರಣ: ವಚನಾನಂದ ಶ್ರೀಗೆ ಹೈಕೋರ್ಟ್​ ಬಿಗ್ ಶಾಕ್; ನಿರೀಕ್ಷಣಾ ಜಾಮೀನು ರದ್ದು

ಬಾಂಗ್ಲಾದೇಶ: ದೀಪು ದಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ?, Video!

ಶಾಶ್ವತ ವಿದ್ಯುತ್ ಸಂಪರ್ಕ: ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ 1,094 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆ!

Karisma Kapoor Birthday: ಮದುವೆಗೂ ಮುನ್ನ ಅಭಿಷೇಕ್ ಬಚ್ಚನ್ ಜೊತೆ ಕರಿಷ್ಮಾ ನಿಶ್ಚಿತಾರ್ಥ ಮುರಿದುಬೀಳಲು ಕಾರಣವೇನು?