ಶಾಲಾ ವಾಹನದಿಂದ ಬಿದ್ದ ಮಕ್ಕಳು 
ರಾಜ್ಯ

Bengaluru: ಚಲಿಸುತ್ತಿದ್ದ ಶಾಲಾ ವಾಹನದಿಂದ ಕೆಳಗೆ ಬಿದ್ದ ಮಕ್ಕಳು, ಹಲವರಿಗೆ ಗಾಯ, Video ವೈರಲ್!

ಅತಿಯಾಗಿ ತುಂಬಿದ್ದ ವಾಹನವು ರಸ್ತೆಯ ಗುಂಡಿಗೆ ಇಳಿದಾಗ ಹಿಂಭಾಗದ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಮಕ್ಕಳು ವಾಹನದಲ್ಲಿ ಒತ್ತೊತ್ತಾಗಿ ಕುಳಿತಿದ್ದು, ಬಾಗಿಲು ತೆರೆದ ಕೂಡಲೇ ಮೂಟೆಗಳಂತೆ ರಸ್ತೆಗೆ ಬಿದ್ದಿದ್ದಾರೆ.

ಬೆಂಗಳೂರು: ಚಲಿಸುತ್ತಿದ್ದ ಶಾಲಾ ವಾಹನವೊಂದರಿಂದ ಮಕ್ಕಳು ಕೆಳಕ್ಕೆ ಬಿದ್ದು ಗಾಯಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನ ಕೆಆರ್ ಪುರಂ ಪ್ರದೇಶದ ಗಾಯತ್ರಿ ಲೇಔಟ್‌ನಲ್ಲಿ ನಿನ್ನೆ (ಜೂ.25) ನಡೆದ ಈ ಘಟನೆಯಲ್ಲಿ, ಚಲಿಸುತ್ತಿದ್ದ ಓಮಿನಿ (OMNI) ವಾಹನದಿಂದ ಕೆಳಕ್ಕೆ ಬಿದ್ದ ಐವರು ಶಾಲಾ ಮಕ್ಕಳು ರಸ್ತೆಗೆ ಬಿದ್ದಿದ್ದಾರೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಅತಿಯಾಗಿ ತುಂಬಿದ್ದ ವಾಹನವು ರಸ್ತೆಯ ಗುಂಡಿಗೆ ಇಳಿದಾಗ ಹಿಂಭಾಗದ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ.

ಮಕ್ಕಳು ವಾಹನದಲ್ಲಿ ಒತ್ತೊತ್ತಾಗಿ ಕುಳಿತಿದ್ದು, ಬಾಗಿಲು ತೆರೆದ ಕೂಡಲೇ ಮೂಟೆಗಳಂತೆ ರಸ್ತೆಗೆ ಬಿದ್ದಿದ್ದಾರೆ. ಈ ಘಟನೆ ಆರಸ್ತೆಯಲ್ಲಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಅದೃಷ್ಟವಶಾತ್, ಹಿಂಭಾಗದಲ್ಲಿ ಯಾವುದೇ ವಾಹನ ಬರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ.

ಈ ಅಪಘಾತವು ಶಾಲಾ ಮಕ್ಕಳ ಸಾರಿಗೆ ವ್ಯವಸ್ಥೆಯ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ. ಶಾಲಾ ವಾಹನಗಳಲ್ಲಿ ಮಕ್ಕಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿಕೊಂಡು ಸಾಗಿಸುವುದು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ವ್ಯಾನ್‌ಗಳನ್ನು ಮಕ್ಕಳ ಸಾರಿಗೆಗೆ ಬಳಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಮತ್ತು ಪೋಷಕರು ಪ್ರಶ್ನೆ ಎತ್ತಿದ್ದಾರೆ.

ಈ ಘಟನೆ ಶಾಲಾ ಸಾರಿಗೆ ವಾಹನಗಳಿಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಜಾರಿಗಾಗಿ ಮತ್ತೊಮ್ಮೆ ಆಗ್ರಹ ಹೆಚ್ಚಿಸಿದೆ. ವಾಹನಗಳ ನಿಯಮಿತ ನಿರ್ವಹಣೆ, ನಿಗದಿತ ಆಸನ ಸಾಮರ್ಥ್ಯದ ಪಾಲನೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ತಪಾಸಣೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ರಾಮ ಮಂದಿರ ದೇಣಿಗೆ ಲೂಟಿ: ಚಂಪತ್ ರಾಯ್ ಆಪ್ತ ಟಿನ್ನು ಯಾದವ್ ಸೇರಿ 8 ಮಂದಿ ಬಂಧನ

ಅಯೋಧ್ಯೆ ದೇಣಿಗೆ ಲೂಟಿ: FIR ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಮುನೀರ್ ಹತ್ಯೆಗೆ ಮುಂದಾಗಿತ್ತಾ ಇಸ್ರೇಲ್, ಸ್ವಿಟ್ಜರ್‌ಲ್ಯಾಂಡ್‌ ಒಪ್ಪಂದದ ವೇಳೆ ಹೆದರಿದ್ನಾ ಫೀಲ್ಡ್ ಮಾರ್ಷಲ್? ನೆತನ್ಯಾಹುಗೆ Pak ಧಮ್ಕಿ ಹಾಕಿತ್ತಾ!

80 ಲಕ್ಷದ ದುಬಾರಿ ವಾಚ್ ಆರೋಪ: ಪ್ರದೀಪ್ ಈಶ್ವರ್ ಆರೋಪಕ್ಕೆ HDK ತಿರುಗೇಟು, ಅಂಬೇಡ್ಕರ್ ಚಿತ್ರವಿರುವ HMT ವಾಚ್ ಬೆಲೆಯೆಷ್ಟು?