ಬೆಂಗಳೂರು: ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದ ಮೇಲೂ ಕದ್ದುಮುಚ್ಚಿ ಕಾವೇರಿ ನೀರು ಬಿಡಲಾಗುತ್ತಿದೆ. ಅಂದಾಜು 2000 ಕ್ಯುಸೆಕ್ ನೀರು ಬಿಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಇರೋದು ಅವರ ಮೈತ್ರಿ ಸರ್ಕಾರ. ಮೈತ್ರಿ ಮೆಚ್ಚಿಸಲು ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ನಮ್ಮಲ್ಲಿ ನೀರು ಎಷ್ಟಿದೆ? ಯಾಕೆ ನಮಗೆ ಬಿಡಲು ಆಗುತ್ತಿಲ್ಲ ಎಂದು ರೈತರಿಗೂ ಸರ್ಕಾರ ಮಾಹಿತಿ ಕೊಟ್ಟಿಲ್ಲ. ಸರ್ವ ಪಕ್ಷ ಸಭೆಯನ್ನೂ ಸರ್ಕಾರ ಕರೆದಿಲ್ಲ ಎಂದು ಕಿಡಿಕಾರಿದ್ದಾರೆ.
ಅವನು ನಿನ್ನೆ ಮೊನ್ನೆ ಬಂದ ರಾಜಕಾರಣಿ, ರಾಜಕೀಯದ ಗಂಧಗಾಳಿ ಗೊತ್ತಿಲ್ಲ, ಮುಖ್ಯಮಮಂತ್ರಿಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ತಮಿಳುನಾಡಿನಲ್ಲಿ ಸದನ ಕರೆದು ಮೇಕೆದಾಟು ಯೋಜನೆಗೆ ನಾವು ತಡೆ ಮಾಡುತ್ತೇವೆ, ಮಾಡಿ ನೋಡೋಣ ಅಂತಾ ಧಮ್ಕಿ ಹಾಕಿ ರೆಸಲ್ಯೂಷನ್ ಮಾಡಿದ್ದಾರೆ.
ನಮ್ಮ ಮುಖ್ಯಮಂತ್ರಿ ದಿನ ಯಾವುದಾದ್ರು ದೇವಸ್ಥಾನಕ್ಕೆ ಹೋಗೋದು, ನಾಮ ಹಾಕಿಕೊಳ್ಳೋದು, ವಿಭೂತಿ ಹಾಕಿಕೊಂಡು ಬರೋದು ಇಷ್ಟೆ, ಅವ್ರಿಗೆ ನಾನು ಹಿಂದೂ ಅಂತಾ ತೋರಿಸಿಕೊಳ್ಳಬೇಕು ಅಷ್ಟೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಜಿ ವರದಿ ಹೇಳಿದೆ. ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು. 225 ಕೋಟಿ ರೂ. ಹಣವನ್ನು ನಕಲಿ ಖಾತೆಗಳಿಗೆ ಹಾಕಲಾಗಿದೆ. ನಕಲಿ ಖಾತೆಗಳು ರದ್ದಾದ ಮೇಲೂ ಅವೇ ಖಾತೆಗಳಿಗೆ ಹಣ ಹೋಗಿದೆ. ಇದು ಅಧಿಕಾರಿಗಳ ಕರ್ಮಕಾಂಡ. ಗ್ಯಾರಂಟಿ ಜಾರಿ ಸಮಿತಿ ಏನು ಮಾಡುತ್ತಿದೆ ಎಂದು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಆದಾಯ ತೆರಿಗೆ ಪಾವತಿಸುವ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ 1,94,560 ಮಹಿಳೆಯರನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ಗುರುತಿಸಲಾಗುತ್ತಿದೆ ಎಂದು ಅದು ಹೇಳಿದೆ. ಒಟ್ಟಾರೆಯಾಗಿ, ಈ ಯೋಜನೆಯಡಿ ನೋಂದಾಯಿಸಲಾದ 2,88,376 ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತ ಫಲಾನುಭವಿಗಳ ಬಗ್ಗೆ ಮಾಹಿತಿಯನ್ನು ಇ-ಜನ್ಮ/ಕುಟುಂಬ ಸಾಫ್ಟ್‌ವೇರ್ ಮಾಹಿತಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಿಡಿಒಗಳ ಮೂಲಕ ಪಡೆಯಲಾಗುತ್ತಿದೆ. ಅಂತಹ ಫಲಾನುಭವಿಗಳ ಹೆಸರುಗಳನ್ನು ಶೀಘ್ರದಲ್ಲೇ ಅಳಿಸಲಾಗುವುದು.
ಮೃತ ಫಲಾನುಭವಿಗಳಲ್ಲಿ, ನಿಯಮಗಳ ಪ್ರಕಾರ 1,03,922 ಜನರ ಹೆಸರುಗಳನ್ನು ಪಡಿತರ ಚೀಟಿಗಳಲ್ಲಿ ಬದಲಾಯಿಸಲಾಗಿದೆ ಮತ್ತು ಮರು ನೋಂದಣಿಯ ನಂತರ ಹೊಸ ಕುಟುಂಬ ಮುಖ್ಯಸ್ಥರಿಗೆ ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದಿದ್ದಾರೆ.
ಫಲಾನುಭವಿಗಳ ಸಾವಿನ ಬಗ್ಗೆ ಸರಿಯಾದ ಸಮಯಕ್ಕೆ ಮಾಹಿತಿ ಲಭ್ಯವಿಲ್ಲದ ಕಾರಣ, 1,08,755 ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 115 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಈ ಮೊತ್ತದಲ್ಲಿ, 15.24 ಕೋಟಿ ರೂ.ಗಳನ್ನು ಬ್ಯಾಂಕುಗಳ ಮೂಲಕ ಸರ್ಕಾರದ ಖಾತೆಗೆ ಹಿಂತಿರುಗಿಸಲಾಗಿದೆ. ಉಳಿದ ಹಣವನ್ನು ಮರುಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಲಾಖೆ ತಿಳಿಸಿದೆ.