ಪ್ರತಾಪ್ ಸಿಂಹ 
ರಾಜ್ಯ

ಕುಮಾರಣ್ಣ ಹೇಳ್ದಂಗೆ ರೈತರ ಎದುರಿಗೆ ಚರ್ಚಿಸೋದಕ್ಕೆ ಸಮಸ್ಯೆಯೇನು ಡಿಕೆಶಿಯವ್ರೆ ? ಪ್ರತಾಪ್ ಸಿಂಹ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಚರ್ಚೆಗೆ ಆಹ್ವಾನಿಸಿರುವುದನ್ನು ಉಲ್ಲೇಖಿಸಿದ ಪ್ರತಾಪ್‌ ಸಿಂಹ, ಚರ್ಚೆ ನಡೆಯಬೇಕಿರುವುದು ವಿಧಾನಸೌಧದಲ್ಲಲ್ಲ. ರೈತರ ಮಧ್ಯೆ ಹೋಗಿ ಮಾತುಕತೆ ನಡೆಸಬೇಕು ಎಂದರು.

ಹಾಸನ: ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರು ಸ್ವಇಚ್ಛೆಯಿಂದ ಜಮೀನು ನೀಡಿದರೆ ಸಮಸ್ಯೆಯಿಲ್ಲ. ಆದರೆ ಅವರ ಹಕ್ಕುಗಳನ್ನು ಗೌರವಿಸಬೇಕು. ರೈತರೊಂದಿಗೆ ನೇರವಾಗಿ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಬಲವಂತದ ಭೂಸ್ವಾಧೀನ ಬೇಡ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಚರ್ಚೆಗೆ ಆಹ್ವಾನಿಸಿರುವುದನ್ನು ಉಲ್ಲೇಖಿಸಿದ ಪ್ರತಾಪ್‌ ಸಿಂಹ, ಚರ್ಚೆ ನಡೆಯಬೇಕಿರುವುದು ವಿಧಾನಸೌಧದಲ್ಲಲ್ಲ. ರೈತರ ಮಧ್ಯೆ ಹೋಗಿ ಮಾತುಕತೆ ನಡೆಸಬೇಕು ಎಂದರು.

ನಾಗಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಉದ್ದೇಶ ಸ್ವಾಗತಾರ್ಹ. ಆದರೆ ಕೈಗಾರಿಕೆಗಳನ್ನು ಸರ್ಕಾರಿ ಅಥವಾ ಬಂಜರು ಭೂಮಿಯಲ್ಲಿ ಸ್ಥಾಪಿಸಬೇಕು. ರೈತರ ಜಮೀನನ್ನು ಅಧಿಕಾರದ ಬಲದಿಂದ ಕಿತ್ತುಕೊಳ್ಳುವುದು ಸರಿಯಲ್ಲ ಎಂದರು.

ಕೈಗಾರಿಕಾ ಅಭಿವೃದ್ಧಿ ಅಗತ್ಯವಾದರೂ, ಅದರಲ್ಲೂ ರೈತರಿಗೆ ಪಾಲುದಾರಿಕೆ ನೀಡಬೇಕು. ನಾನು ಮಾಡಿಯೇ ತೀರುತ್ತೇನೆ ಎನ್ನುವ ಧೋರಣೆ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಡ್ರೋನ್ ದಾಳಿಗೆ ಅಮೆರಿಕ ತಿರುಗೇಟು; ಇರಾನ್ ಮೇಲೆ ವಾಯುದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

ಮೂರ್ಖತನದ ಯಾವುದೇ ಕೃತ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ: ಅಮೆರಿಕ ದಾಳಿಗೆ ಇರಾನ್ ಕಠಿಣ ಎಚ್ಚರಿಕೆ

Israel-Lebanon ಸಂಘರ್ಷಕ್ಕೆ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ ತ್ರಿಪಕ್ಷೀಯ ಒಪ್ಪಂದ, Hezbollah ಮಣಿಸುವವರೆಗೆ ಹಿಂದೆ ಸರಿಯಲ್ಲ ಎಂದ ನೆತನ್ಯಾಹು..!

ಹೈದರಾಬಾದ್‌ ರಸ್ತೆಗೆ ಅಮೆರಿಕಾ ಅಧ್ಯಕ್ಷನ ಹೆಸರು: ‘ನನ್ನ ಪಾಲಿಗಿದು ಐತಿಹಾಸಿಕ ಗೌರವ’ ಎಂದು ಭಾರತಕ್ಕೆ ಧನ್ಯವಾದ ತಿಳಿಸಿದ ಟ್ರಂಪ್

ಶಂಕಿತ ಉಗ್ರ ಸುಹೇಲ್‌ 10 ದಿನ ಪೊಲೀಸ್ ಕಸ್ಟಡಿಗೆ; ತನಿಖೆ ಚುರುಕುಗೊಳಿಸಿದ NIA, ತೀವ್ರ ವಿಚಾರಣೆ