ಮೊಹರಂ ಆಚರಣೆ ವೇಳೆ ಅಗ್ನಿ ದುರಂತ 
ರಾಜ್ಯ

ಬಳ್ಳಾರಿ: ಮೊಹರಂ ಆಚರಣೆ ವೇಳೆ ಅಗ್ನಿಕುಂಡಕ್ಕೆ ಬಿದ್ದು ವ್ಯಕ್ತಿ ಸಾವು, Video

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕ್ಯಾದಿಗೆಹಾಳ್‌ನಲ್ಲಿ ಮುಸ್ಲಿಮರ ಹಬ್ಬ ಮೊಹರಂ ಆಚರಣೆಗಾಗಿ ನಿರ್ಮಿಸಿದ್ದ ಅಲಾಯಿ ಕುಣಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.

ಬಳ್ಳಾರಿ: ಮೊಹರಂ ಆಚರಣೆ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ವ್ಯಕ್ತಿಯೋರ್ವ ಅಗ್ನಿಕುಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕ್ಯಾದಿಗೆಹಾಳ್‌ನಲ್ಲಿ ಮುಸ್ಲಿಮರ ಹಬ್ಬ ಮೊಹರಂ ಆಚರಣೆಗಾಗಿ ನಿರ್ಮಿಸಿದ್ದ ಅಲಾಯಿ ಕುಣಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.

ಮೊಹರಂ ಆಚರಣೆಗಾಗಿ ಪೀರಲು ದೇವರ ಪ್ರತಿಷ್ಠಾಪಿಸಿ ಅಲಾಯಿ ಕುಣಿ (ಬೆಂಕಿ ಉರಿಸುವ ಹೊಂಡ) ತೋಡಿ ಬೆಂಕಿ ಹಾಕಲಾಗಿತ್ತು. ಶುಕ್ರವಾರ ಹಬ್ಬದ ಆಚರಣೆ ಸಂದರ್ಭ ಈ ಕುಣಿಯ ಬೆಂಕಿಗೆ ಬಿದ್ದು ಮಡಿವಾಳ ದೇವರಾಜ್ (28) ಗಂಭೀರವಾಗಿ ಗಾಯಗೊಂಡಿದ್ದ.

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾನೆ. ಮೃತನಿಗೆ ತಂದೆ ತಾಯಿ, ಪತ್ನಿ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ: ಮುಂಗಾರು ಅಧಿವೇಶನಕ್ಕೂ ಮುನ್ನ ಹಲವು ಸಚಿವರ ಖಾತೆ ಬದಲಾವಣೆ, BJP ಸಂಘಟನೆಯಲ್ಲೂ ಭಾರೀ ಬದಲಾವಣೆ..?

Venezuelaಗೆ ಭಾರತದ ಮಾನವೀಯ ನೆರವು: 'Operation Amistad' ಅಡಿಯಲ್ಲಿ ಫೀಲ್ಡ್ ಆಸ್ಪತ್ರೆ, ವೈದ್ಯಕೀಯ ತಂಡ ರವಾನೆ

ಟ್ರಂಪ್ ಆದೇಶ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ: 10 ಪ್ರಮುಖ ಸೇನಾ ನೆಲೆಗಳು ಧ್ವಂಸ, ಕದನ ವಿರಾಮ ಮತ್ತೆ ಪ್ರಶ್ನಾರ್ಥಕ..!

ಪ್ರವಾಸ ದುರಂತ: ರೆಸಾರ್ಟ್‌ನ ಈಜುಕೊಳದಲ್ಲಿ ಕೊಲ್ಹಾಪುರದ 25 ವರ್ಷದ ಯುವಕ ಮುಳುಗಿ ಸಾವು, Video

‘ಉಲ್ಟಾ ಪಲ್ಟಾ’ಖ್ಯಾತಿಯ ನಿರ್ದೇಶಕ, ಹಿರಿಯ ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ!