ಸ್ವಾತಿ 
ರಾಜ್ಯ

ಶಿವಮೊಗ್ಗ: ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ; ಕಾರಣ ನಿಗೂಢ!

ಆತ್ಮಹತ್ಯೆಗೆ ಶರಣಾದ ಯುವತಿಯನ್ನು 24 ವರ್ಷದ ಸ್ವಾತಿ ಎಂದು ಗುರುತಿಸಲಾಗಿದ್ದು, ಎರಡು ತಿಂಗಳ ಹಿಂದಷ್ಟೇ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್‌ ಅವರನ್ನು ಮದುವೆಯಾಗಿದ್ದಳು.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಣಜಿ ಗ್ರಾಮದಲ್ಲಿ ಮದುವೆಯಾದ ಕೇವಲ ಎರಡೇ ತಿಂಗಳಿಗೆ ನವಾವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ನಿಗೂಢವಾಗಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು 24 ವರ್ಷದ ಸ್ವಾತಿ ಎಂದು ಗುರುತಿಸಲಾಗಿದ್ದು, ಎರಡು ತಿಂಗಳ ಹಿಂದಷ್ಟೇ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್‌ ಅವರನ್ನು ಮದುವೆಯಾಗಿದ್ದಳು.

ಗರ್ಭಿಣಿಯಾಗಿದ್ದ ಸ್ವಾತಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. 20 ದಿನಗಳ ಹಿಂದೆ ಹಣಜಿ ಗ್ರಾಮದ ತವರು ಮನೆಗೆ ಸ್ವಾತಿ ಬಂದಿದ್ದಳು.

ತಂದೆ ಹಾಗೂ ತಾಯಿ ಜಮೀನು ಕೆಲಸಕ್ಕೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸ್ವಾತಿ, ಸೀರೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಹೊಲದಲ್ಲಿದ್ದ ಮೃತರ ತಂದೆ ತಾಯಿಗೆ ವಿಷಯ ತಿಳಿಸಿ, ಮನೆಯ ಬಾಗಿಲು ಮುರಿದಿದ್ದಾರೆ. ಬಾಗಿಲು ಮುರಿದು ಸ್ವಾತಿಯನ್ನ ಸೀರೆ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೂ ರವಾನಿಸಿದ್ದಾರೆ. ಆದರೆ ಆಕೆಯನ್ನು ಉಳಿಸುವ ಪ್ರಯತ್ನ ವಿಫಲವಾಗಿದೆ.

ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಟುಂಬದವರ ಮಾಹಿತಿಯಂತೆ ಆರೋಗ್ಯ ಸಮಸ್ಯೆಯಿಂದ ತುಂಬಾ ವಾಂತಿಯಾಗುತ್ತಿತ್ತು. ಸರಿಯಾಗಿ ಊಟ, ತಿಂಡಿ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಸದ್ಯ ಇದೇ ಕಾರಣಕ್ಕೆ ಆಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಪ್ಪಲಿ ಎಸೆತ ಪ್ರಕರಣ: ನನ್ನ ಕುಟುಂಬವನ್ನು ಕೀಳಾಗಿ ನಿಂದಿಸಿದರು; ಸಿದ್ದರಾಮಯ್ಯ ಮುಂದೆ ಪ್ರದೀಪ್ ಈಶ್ವರ್ ಕಣ್ಣೀರು!

"ಎರಡೇ ನಿಮಿಷ ಅಷ್ಟೇ": ಕಾರಿನಲ್ಲೇ ಸೆಕ್ಸ್​​ಗೆ ಒತ್ತಾಯಿಸಿದ ಕಾಮುಕ; ವಿಡಿಯೋ ಮಾಡಿದ ಯುವತಿ!

ಮೊದಲ ಬಾರಿಗೆ ಸಿನಿಮಾ ಹಾಡಿಗೆ 'ರೀಲ್ಸ್ ರಾಣಿ' ಸೋನು ಶ್ರೀನಿವಾಸ್ ಗೌಡ ಡ್ಯಾನ್ಸ್! ಕೇಕೆ' ಐಟಂ ಸಾಂಗ್ ಬಿಡುಗಡೆ, Video

ಮಂಗಳೂರು: ಸಮುದ್ರದಲ್ಲಿ ಬಿರುಗಾಳಿಗೆ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದ ದೋಣಿಯಿಂದ 6 ಮೀನುಗಾರರ ರಕ್ಷಣೆ! Video

ರಾಜಕೀಯ ನಾಯಕರ ಮಾತಿನಿಂದ ಆತಂಕ ಸೃಷ್ಟಿಯಾಗಿದ್ದು SIR ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್