ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ 
ರಾಜ್ಯ

ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕನ್ನಡಿಗನ ಬಾಳಲ್ಲಿ ಹೊಸ ಭರವಸೆ ಮೂಡಿಸಲು ನಮ್ಮ ಸರ್ಕಾರ ಬದ್ಧ: ಡಿ.ಕೆ ಶಿವಕುಮಾರ್

'ಅಭಿವೃದ್ಧಿಯ ಮಂತ್ರ, ಸಮೃದ್ಧಿಯ ಗುರಿ. ಪ್ರತಿಯೊಂದು ವಲಯಕ್ಕೂ ಸಮಾನ ಆದ್ಯತೆ ನೀಡಿ, ಸಮೃದ್ಧ ಕರ್ನಾಟಕದ ನಿರ್ಮಾಣಕ್ಕಾಗಿ 4.48 ಲಕ್ಷ ಕೋಟಿ ರೂ. ಮೊತ್ತದ 2026-2027 ಸಾಲಿನ ಬೃಹತ್ ಬಜೆಟ್ ಮಂಡಿಸಲಾಗಿದೆ.

ಬೆಂಗಳೂರು: ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕನ್ನಡಿಗನ ಬಾಳಿನಲ್ಲಿ ಹೊಸ ಭರವಸೆ ಮೂಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ,

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಿದ್ದು, ಬಜೆಟ್‌ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 'ಅಭಿವೃದ್ಧಿಯ ಮಂತ್ರ, ಸಮೃದ್ಧಿಯ ಗುರಿ. ಪ್ರತಿಯೊಂದು ವಲಯಕ್ಕೂ ಸಮಾನ ಆದ್ಯತೆ ನೀಡಿ, ಸಮೃದ್ಧ ಕರ್ನಾಟಕದ ನಿರ್ಮಾಣಕ್ಕಾಗಿ ₹4.48 ಲಕ್ಷ ಕೋಟಿ ಮೊತ್ತದ 2026-2027 ಸಾಲಿನ ಬೃಹತ್ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಮೂಲಭೂತ ಸೌಕರ್ಯಗಳಿಗೆ ವಿಶೇಷ ಒತ್ತು ನೀಡುವ ಜೊತೆಗೆ, ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕನ್ನಡಿಗನ ಬಾಳಿನಲ್ಲಿ ಹೊಸ ಭರವಸೆ ಮೂಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಲಿ ಎಂಬ ಆಶಯ ನಮ್ಮದು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

"ವಾವ್!! ನನ್ನ ಮಟ್ಟಿಗೆ ಅವರು ಚೆನ್ನಾಗಿ ವಿವರಿಸಿದ್ದಾರೆ": 'ನಾನು ಹೆಮ್ಮೆಯ ಅಂಧಭಕ್ತೆ' ಎಂದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್'ಗೆ ಕಂಗನಾ ಬೆಂಬಲ

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು