ಗೃಹ ಸಚಿವ ಡಾ.ಜಿ.ಪರಮೇಶ್ವರ್ 
ರಾಜ್ಯ

ಡಿಜಿಟಲ್ ಭದ್ರತೆಗೆ ಒತ್ತು: ಸೈಬರ್ ಅಪರಾಧ ತಡೆಗೆ ಕಠಿಣ ಕ್ರಮ; ಡಾ.ಜಿ.ಪರಮೇಶ್ವರ್

ಕರ್ನಾಟಕವು ಕೇವಲ ಒಂದು ರಾಜ್ಯವಲ್ಲ, ಅದು ಜಾಗತಿಕ ಬ್ರ್ಯಾಂಡ್. ಜಗತ್ತು ಬೆಂಗಳೂರು ನಗರವನ್ನು ಭವಿಷ್ಯದ ನವೀನತೆಗಳ ಕೇಂದ್ರವಾಗಿ ನೋಡುತ್ತಿದೆ. ಇಲ್ಲಿ ಬಲಿಷ್ಠ ಹಾಗೂ ಅತ್ಯಂತ ಸುರಕ್ಷಿತ ಡಿಜಿಟಲ್ ಪರಿಸರವನ್ನು ನಿರ್ಮಿಸಲಾಗಿದೆ.

ಬೆಂಗಳೂರು: ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕರ್ನಾಟಕವು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಶನಿವಾರ ಹೇಳಿದರು.

ನಗರದಲ್ಲಿ ಸಿಐಡಿ ಹಾಗೂ ಸೈಬರ್ ಕ್ರೈಂ ಇನ್‌ವೆಸ್ಟಿಗೇಶನ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಆಯೋಜಿಸಿದ್ದ ಮೂರನೇ ವಾರ್ಷಿಕ ಸೈಬರ್ ಅಪರಾಧ ತನಿಖಾ ಶೃಂಗಸಭೆ ‘CIDECODE’ ಅನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಕರ್ನಾಟಕವು ಕೇವಲ ಒಂದು ರಾಜ್ಯವಲ್ಲ, ಅದು ಜಾಗತಿಕ ಬ್ರ್ಯಾಂಡ್. ಜಗತ್ತು ಬೆಂಗಳೂರು ನಗರವನ್ನು ಭವಿಷ್ಯದ ನವೀನತೆಗಳ ಕೇಂದ್ರವಾಗಿ ನೋಡುತ್ತಿದೆ. ಇಲ್ಲಿ ಬಲಿಷ್ಠ ಹಾಗೂ ಅತ್ಯಂತ ಸುರಕ್ಷಿತ ಡಿಜಿಟಲ್ ಪರಿಸರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಸೈಬರ್ ಅಪರಾಧಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ವಿಶೇಷ ಘಟಕಗಳನ್ನು ಸ್ಥಾಪಿಸಿದ್ದು, ಅವುಗಳಿಗೆ ಅಗತ್ಯ ಕೌಶಲ್ಯ, ತರಬೇತಿ ಹಾಗೂ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಜೊತೆಗೆ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತಾ ಅನುಸರಣೆ ಮತ್ತು ಅಪಾಯ ನಿರ್ವಹಣೆ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳೊಂದಿಗೆ ಸಹಭಾಗಿತ್ವದ ಮೂಲಕ ಸೈಬರ್ ಭದ್ರತಾ ನವೀನತೆಗಳಿಗೆ ಅನುಕೂಲಕರ ಪರಿಸರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಡಾರ್ಕ್ ವೆಬ್ ಚಟುವಟಿಕೆಗಳು, ಕ್ರಿಪ್ಟೋಕರೆನ್ಸಿ ಹಾದಿ ಪತ್ತೆ, ಹಣಕಾಸು ವಂಚನೆ ತಡೆ ಮತ್ತು ಡಿಜಿಟಲ್ ಫರೆನ್ಸಿಕ್ ಪ್ರಯೋಗಾಲಯಗಳ ಬಲವರ್ಧನೆ ಕುರಿತ ಚರ್ಚೆಗಳು ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಸೂಕ್ತವಾಗಿವೆ. ಸೈಬರ್ ಅಪರಾಧಗಳು ಭೌಗೋಳಿಕ ಮಿತಿಗಳನ್ನು ಮೀರಿ ತಂತ್ರಜ್ಞಾನ ಆಧಾರಿತವಾಗಿ ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಅಪರಾಧಗಳಾಗಿವೆ.

ಹಣಕಾಸು ವಂಚನೆಗಳಿಂದ ಹಿಡಿದು ಕ್ರಿಪ್ಟೋಕರೆನ್ಸಿ ಸಂಬಂಧಿತ ಅಪರಾಧಗಳು, ಡಾರ್ಕ್ ವೆಬ್ ಮೂಲಕ ನಡೆಯುವ ಮಾದಕ ದ್ರವ್ಯ ಜಾಲಗಳು ಹಾಗೂ ಡೇಟಾ ಸೋರಿಕೆಗಳಂತಹ ಸವಾಲುಗಳು ವೇಗವಾಗಿ ಹೆಚ್ಚುತ್ತಿವೆ. ಇವುಗಳನ್ನು ಎದುರಿಸಲು ತಂತ್ರಜ್ಞಾನ ಸಾಮರ್ಥ್ಯ ಮಾತ್ರವಲ್ಲ, ಕಾನೂನು ವ್ಯವಸ್ಥೆಯನ್ನೂ ಮತ್ತಷ್ಟು ಬಲಪಡಿಸುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಮಾರ್ ಧರೆಶ್ವರ್ ಹಾಗೂ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಿಇಒ ವಿನಾಯಕ್ ಗೋಡ್ಸೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳು ನಾಡು ಮಹಿಳೆಯರಿಗೆ TVK ಮುಖ್ಯಸ್ಥ ವಿಜಯ್ ಭರಪೂರ ಘೋಷಣೆ: ಅಧಿಕಾರಕ್ಕೆ ಬಂದರೆ ಏನೇನು ಕೊಡ್ತಾರಂತೆ ನೋಡಿ!-Video

T20 World Cup 2026 Final: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ನ್ಯೂಜಿಲೆಂಡ್; ವಿಶ್ವದ ನಂ.1 ಬೌಲರ್ ಔಟ್?

T20 World Cup 2026 Final: 'ಕಿವೀಸ್ ಶಾಪ'ದಿಂದ ಪಾರಾಗಲು ಭಾರತ ಈ ಮೂರು ತಪ್ಪುಗಳನ್ನು ಮಾಡಲೇಬಾರದು...

ಬೆಂಗಳೂರಿನಲ್ಲಿ ತಾಪಮಾನ ಏರಿಕೆ: ಬಿಸಿಲ ಝಳಕ್ಕೆ ಜನತೆ ತತ್ತರ, ‘AC City’ ಹೆಗ್ಗಳಿಕೆಗೆ ದಕ್ಕೆ..!

SCROLL FOR NEXT