ಪೆಟ್ರೋಲ್ ಸುರಿದು ಕೊಲೆ ಯತ್ನ (ಸಂಗ್ರಹ ಚಿತ್ರ) online desk
ರಾಜ್ಯ

ಸ್ಕೂಟರ್ ನೀಡಲು ನಿರಾಕರಣೆ: ಗೆಳತಿ, ಆಕೆಯ ಪೋಷಕರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ!

ನಂದಿನಿ ಲೇಔಟ್ ನಿವಾಸಿ ಪಾಂಡುರಂಗ ಈ ಕುಕೃತ್ಯ ಎಸಗಿರುವ ವ್ಯಕ್ತಿಯಾಗಿದ್ದು, ಆತನನ್ನು ಬಂಧಿಸಿದ ಪೊಲೀಸರು ಕೊಲೆಯ ಪ್ರಯತ್ನದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು: ಸ್ಕೂಟರ್ ನೀಡಲು ಮಾಡಿದ್ದ ಮನವಿಯನ್ನು ನಿರಾಕರಿಸಿದ್ದಾಗಿ ವ್ಯಕ್ತಿಯೋರ್ವ ತನ್ನ ಗೆಳತಿ ಹಾಗೂ ಆಕೆಯ ಪೋಷಕರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ನಂದಿನಿ ಲೇಔಟ್ ನಿವಾಸಿ ಪಾಂಡುರಂಗ ಈ ಕುಕೃತ್ಯ ಎಸಗಿರುವ ವ್ಯಕ್ತಿಯಾಗಿದ್ದು, ಆತನನ್ನು ಬಂಧಿಸಿದ ಪೊಲೀಸರು ಕೊಲೆಯ ಪ್ರಯತ್ನದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತರಬನಹಳ್ಳಿಯಲ್ಲಿ ವಾಸವಾಗಿರುವ ಸುಮಲತಾ (27) ಮತ್ತು ಪಾಂಡುರಂಗ ಪ್ರೇಮಿಗಳಾಗಿದ್ದರು. ಸೋಮವಾರ ಸುಮಲತಾ ಮನೆಗೆ ಬಂದ ಪಾಂಡುರಂಗ, ಆಕೆಯ ದ್ವಿಚಕ್ರ ವಾಹನವನ್ನು (ಸ್ಕೂಟರ್) ನೀಡುವಂತೆ ಕೇಳಿದ್ದಾನೆ. ಸುಮಲತಾ ಸ್ಕೂಟರ್ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಸುಮಲತಾ ಪೋಷಕರು ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪಾಂಡುರಂಗ, ತನ್ನ ಬಳಿ ಇದ್ದ ಪೆಟ್ರೋಲ್ ಬಾಟಲಿಯನ್ನು ಸುಮಲತಾ ಮತ್ತು ಆಕೆಯ ಪೋಷಕರ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.

ತಕ್ಷಣವೇ ಧಾವಿಸಿದ ನೆರೆಹೊರೆಯವರು ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಲದೇವನಹಳ್ಳಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೌರಿಂಗ್ ಆಸ್ಪತ್ರೆ ದುರಂತ: ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಧಾರವಾಡ ವಿದ್ಯಾಗಿರಿ ಠಾಣೆ ಇನ್ಸ್​​ಪೆಕ್ಟರ್ ರಫೀಕ್​​ ಅಮಾನತು!

'ಅಮೆರಿಕನ್ನರಿಗೆ ಗಲ್ಫ್ ನೀರಿನ ಕೆಳಭಾಗವೇ ಗತಿ': 'ಪರಮಾಣು, ಕ್ಷಿಪಣಿ ಸಾಮರ್ಥ್ಯ' ರಕ್ಷಣೆಗೆ ಬದ್ಧ- ಖಮೇನಿ ಪ್ರತಿಜ್ಞೆ

ಟ್ರಂಪ್ ಯೋಜನೆ ಬುಡಮೇಲು ಮಾಡಿದ ಪಾಕಿಸ್ತಾನ: ನಿರ್ಬಂಧಕ್ಕೆ Dont Care; ರಷ್ಯಾ, ಚೀನಾ ಜೊತೆ ವ್ಯಾಪಾರಕ್ಕೆ ಇರಾನ್ ಗೆ ನೆರವು!

ಸಾರ್ವಜನಿಕವಾಗಿ ನನ್ನನ್ನು ಬಂಧಿಸಿ ಅವಮಾನಿಸುವ ಅಗತ್ಯವಿಲ್ಲ: ಪವನ್ ಖೇರಾ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

SCROLL FOR NEXT