ಕೈಲಾಸ ಮಾನಸ ಸರೋವರ online desk
ರಾಜ್ಯ

ಹಿಮಾಲಯದ ಮಧ್ಯೆ ಆಧ್ಯಾತ್ಮಿಕ ಅನುಭವ: ಅಡಿಗಾಸ್ ಯಾತ್ರಾದಿಂದ ಕೈಲಾಸ ಮಾನಸ ಸರೋವರ ಯಾತ್ರೆ; ಪ್ರವಾಸದ ಬಗ್ಗೆ ಇಲ್ಲಿದೆ ಮಾಹಿತಿ...

ಇತ್ತೀಚಿನ ವರ್ಷಗಳಲ್ಲಿ ಈ ಯಾತ್ರೆ ಹಿಂದೆಂದಿಗಿಂತ ಸುಲಭವಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ಸೌಲಭ್ಯಗಳ ಕಾರಣದಿಂದ ಈಗ ಕಡಿಮೆ ದಿನಗಳಲ್ಲಿ ಈ ಪವಿತ್ರ ತೀರ್ಥಯಾತ್ರೆಯನ್ನು ಪೂರ್ಣಗೊಳಿಸುವ ಅವಕಾಶ ಸಿಗುತ್ತಿದೆ.

ಹಿಮಾಲಯದ ಮಧ್ಯದಲ್ಲಿರುವ ಕೈಲಾಸ ಮಾನಸ ಸರೋವರ ವಿಶ್ವದ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದಲ್ಲಿ ಕೈಲಾಸ ಪರ್ವತವನ್ನು ಭಗವಾನ್ ಶಿವನ ವಾಸಸ್ಥಳವೆಂದು ಭಕ್ತರು ನಂಬುತ್ತಾರೆ. ಆದ್ದರಿಂದ ಜೀವನದಲ್ಲಿ ಒಮ್ಮೆಯಾದರೂ ಕೈಲಾಸ–ಮಾನಸಸರೋವರ ಯಾತ್ರೆ ಮಾಡಬೇಕು ಎಂಬುದು ಅನೇಕ ಭಕ್ತರ ಕನಸಾಗಿದೆ.

ಮಾನಸ ಸರೋವರವು ಆಧ್ಯಾತ್ಮಿಕ ಮಹತ್ವದ ಜೊತೆಗೆ ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಹೊಂದಿದೆ. ಈ ಸರೋವರದಲ್ಲಿ ಸ್ನಾನ ಮಾಡಿದರೆ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಮಾನಸಸರೋವರದ ಸಮೀಪದಲ್ಲೇ ಇರುವ ರಾಕ್ಷಸ್ ತಾಲ್ ಸರೋವರವೂ ಪುರಾಣಗಳಲ್ಲಿ ಮಹತ್ವ ಪಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಯಾತ್ರೆ ಹಿಂದೆಂದಿಗಿಂತ ಸುಲಭವಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ಸೌಲಭ್ಯಗಳ ಕಾರಣದಿಂದ ಈಗ ಕಡಿಮೆ ದಿನಗಳಲ್ಲಿ ಈ ಪವಿತ್ರ ತೀರ್ಥಯಾತ್ರೆಯನ್ನು ಪೂರ್ಣಗೊಳಿಸುವ ಅವಕಾಶ ಸಿಗುತ್ತಿದೆ.

ಕೇಂದ್ರ ಸರ್ಕಾರ ಮಾನ್ಯತೆ ಪಡೆದ ಪ್ರವಾಸ ಸಂಸ್ಥೆ ಅಡಿಗಾಸ್ ಯಾತ್ರಾ ಕಂಪನಿಯು ಕೈಲಾಸ ಮಾನಸ ಸರೋವರ ಯಾತ್ರೆ ಆಯೋಜಿಸಲು ಮುಂದಾಗಿದೆ.

ಈ ಯಾತ್ರೆ ಸುಮಾರು 10 ದಿನಗಳ ಪ್ಯಾಕೇಜ್ ಆಗಿದ್ದು, ಬೆಂಗಳೂರಿನಿಂದ ಲಖನೌವರೆಗೆ ವಿಮಾನ ಪ್ರಯಾಣದ ಮೂಲಕ ಆರಂಭವಾಗುತ್ತದೆ. ಬಳಿಕ ಲಖನೌದಿಂದ ಸುಮಾರು 180 ಕಿಲೋಮೀಟರ್ ರಸ್ತೆ ಮಾರ್ಗವಾಗಿ ನೇಪಾಳದ ನೇಪಾಳಗಂಜ್ ತಲುಪಲಾಗುತ್ತದೆ. ಅಲ್ಲಿ ರಾತ್ರಿ ವಾಸದ ನಂತರ ನೇಪಾಳಗಂಜ್‌ನಿಂದ ಸಿಮಿಕೋಟ್‌ವರೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿ, ಅಲ್ಲಿಂದ ಟಿಬೆಟ್–ನೇಪಾಳ ಗಡಿ ತಲುಪುತ್ತಾರೆ.

ಅದಾದ ಬಳಿಕ ಪುರಾಂಗ್ ಮೂಲಕ ಪವಿತ್ರ ಮಾನಸ ಸರೋವರಕ್ಕೆ ಭೇಟಿ ನೀಡಲಾಗುತ್ತದೆ. ಅಲ್ಲಿ ರಾತ್ರಿ ತಂಗಿದ ನಂತರ ಯಾತ್ರಿಕರು ಸಮೀಪದಲ್ಲಿರುವ ರಾಕ್ಷಸ್ ತಾಲ್ ಸರೋವರಕ್ಕೂ ಭೇಟಿ ನೀಡುತ್ತಾರೆ. ನಂತರ ಕೈಲಾಸ ಪರ್ವತದ ತಟದಲ್ಲಿರುವ ದರ್ಚೆನ್‌ಗೆ ತೆರಳಿ ಅಲ್ಲಿಂದ ಮೂರು ದಿನಗಳ ಕೈಲಾಸ ಯಾತ್ರೆ ಆರಂಭವಾಗುತ್ತದೆ.

ಈ ಯಾತ್ರೆಯ ಅತ್ಯಂತ ಪ್ರಮುಖ ಹಂತವಾಗಿದೆ. ಯಾತ್ರಿಕರು ಮೊದಲ ದಿನ ವಾಹನದಲ್ಲಿ ಯಮದ್ವಾರವರೆಗೆ ತೆರಳಿ, ಅಲ್ಲಿಂದ ಸುಮಾರು 12 ಕಿಲೋಮೀಟರ್ ಮೂಲಕ ದಿರಾಪುಕ್ ತಲುಪುತ್ತಾರೆ. ಎರಡನೇ ದಿನ ದಿರಾಪುಕ್‌ನಿಂದ ಝುತುಲ್ಪುಕ್‌ವರೆಗೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಮೂರನೇ ದಿನ ದರ್ಚೆನ್‌ಗೆ ಮರಳುವುದರೊಂದಿಗೆ ಕೈಲಾಸ ಯಾತ್ರೆ ಪೂರ್ಣಗೊಳ್ಳುತ್ತದೆ.

ಯಾತ್ರಿಕರಿಗೆ ಶುದ್ಧ ಸಸ್ಯಾಹಾರಿ ಆಹಾರ, ತಜ್ಞ ಮಾರ್ಗದರ್ಶನ, ಡಿಲಕ್ಸ್ ಬಸ್ ವ್ಯವಸ್ಥೆ, ವಸತಿ ಹಾಗೂ ಪ್ರಯಾಣ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಪ್ಯಾಕೇಜ್‌ನಲ್ಲಿ ಒದಗಿಸಲಾಗುತ್ತದೆ.

ಹಿಮಾಲಯದ ಶಾಂತ ವಾತಾವರಣದಲ್ಲಿ ದೇವರ ಸಾನ್ನಿಧ್ಯವನ್ನು ಅನುಭವಿಸುವ ಅವಕಾಶ ನೀಡುವ ಕೈಲಾಸ–ಮಾನಸಸರೋವರ ಯಾತ್ರೆ ಭಕ್ತರಿಗೆ ಕೇವಲ ಪ್ರವಾಸವಲ್ಲ, ಅದು ಜೀವನದಲ್ಲಿ ಮರೆಯಲಾಗದ ಆಧ್ಯಾತ್ಮಿಕ ಅನುಭವವಾಗಿದೆ.

ವಿವರಗಳಿಗಾಗಿ, ಕರೆ ಮಾಡಿ: 7022259008 / 9449478944/ 080-26616678 ಅಥವಾ ವೆಬ್‌ಸೈಟ್‌ www.adigasyatra.com ಗೆ ಭೇಟಿ ನೀಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

'ಜಸ್ಪ್ರೀತ್ ಬುಮ್ರಾ ನನ್ನಿಂದ ನಿಧಾನಗತಿಯ ಬೌಲಿಂಗ್ ಕಲಿತರು': ಚರ್ಚೆಗೆ ಗ್ರಾಸವಾದ ಪಾಕ್ ಮೂಲದ ವೇಗಿಯ ಹೇಳಿಕೆ!

ಬೆಂಗಳೂರು: ಹಾಡಹಗಲೇ ಕೊಲೆ ಆರೋಪಿ ಮೇಲೆ ಮಾರಣಾಂತಿಕ ದಾಳಿ, 68 ಬಾರಿ ಮಚ್ಚೇಟು, ಕುಣಿದು ಕುಪ್ಪಳಿಸಿದ ದುಷ್ಕರ್ಮಿಗಳು!

ನನಗೆ ಅನ್ಯಾಯವಾಗಿದೆ: BJP ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ ರಾಜೀನಾಮೆ!

ರಣಾಂಗಣದಲ್ಲಿ ಅಮೆರಿಕಕ್ಕೆ ಹಿನ್ನಡೆಯಾಗಿರಬಹುದು, ಆದರೆ ಇಸ್ರೇಲಿಗಲ್ಲ! (ತೆರೆದ ಕಿಟಕಿ)

SCROLL FOR NEXT