ಸಾಂದರ್ಭಿಕ ಚಿತ್ರ 
ರಾಜ್ಯ

ಇ-ಖಾತಾ ಪಡೆಯುವುದು ಇನ್ಮುಂದೆ ಮತ್ತಷ್ಟು ಸುಲಭ: ಕಚೇರಿ ಸುತ್ತಾಟವಿಲ್ಲದೆ, 3–4 ದಿನಗಳಲ್ಲಿ ಆನ್‌ಲೈನ್'ನಲ್ಲೇ ಮಂಜೂರು..!

ಖಾತಾ ಸಂಬಂಧಿತ ಸಮಸ್ಯೆಗಳಿಗಾಗಿ ನಾಗರಿಕರು ಕಚೇರಿಗಳಿಗೆ ಹೋಗುವುದಾಗಲಿ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯ ಬೇಡ. ಇ-ಖಾತಾ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನೀಡಲಾಗುವುದರಿಂದ ಮಧ್ಯವರ್ತಿಗಳ ಸಹಾಯ ಪಡೆಯಬಾರದು.

ಬೆಂಗಳೂರು: ಇ-ಖಾತಾ ಪಡೆಯಲು ನಾಗರಿಕರು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸರಳ ಆನ್‌ಲೈನ್ ಪ್ರಕ್ರಿಯೆಯ ಮೂಲಕ 3–4 ದಿನಗಳಲ್ಲಿ ಇ-ಖಾತಾ ನೀಡಲಾಗುತ್ತಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರು ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ಟೌನ್ ಹಾಲ್‌ನಲ್ಲಿ ಸ್ಥಳೀಯ ಖಾಸಗಿ ಉದ್ಯಮಿಗಳಿಗೆ (ಎಲ್‌ಪಿಇ) ಇ-ಖಾತಾ ಸೇವೆಗಳ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ಅರ್ಜಿಗಳ ದೋಷ-ಮುಕ್ತ ಆನ್‌ಲೈನ್ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ನಾಗರಿಕರಿಗೆ ಸಹಾಯ ಮಾಡುವುದು ನಿಮ್ಮ ಪಾತ್ರ ಪ್ರಮುಖ ಎಂದು ಒತ್ತಿ ಹೇಳಿದರು.

ಖಾತಾ ಸಂಬಂಧಿತ ಸಮಸ್ಯೆಗಳಿಗಾಗಿ ನಾಗರಿಕರು ಕಚೇರಿಗಳಿಗೆ ಹೋಗುವುದಾಗಲಿ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯ ಬೇಡ. ಇ-ಖಾತಾ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನೀಡಲಾಗುವುದರಿಂದ ಮಧ್ಯವರ್ತಿಗಳ ಸಹಾಯ ಪಡೆಯಬಾರದು ಎಂದು ತಿಳಿಸಿದರು.

ಪ್ರಸ್ತುತ ಸುಮಾರು 99 ಶೇಕಡಾ ಇ-ಖಾತಾ ಅರ್ಜಿಗಳು ನಾಲ್ಕು ರಿಂದ ಐದು ದಿನಗಳೊಳಗೆ ಪ್ರಕ್ರಿಯೆಗೊಳಿಸಿ ಅನುಮೋದನೆ ಪಡೆಯುತ್ತಿವೆ. ಐದು ದಿನಗಳಲ್ಲಿ ಅಂತಿಮ ಅರ್ಜಿಯನ್ನು ಪರಿಶೀಲಿಸದಿದ್ದರೆ ವ್ಯವಸ್ಥೆ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಆರಂಭಿಸುತ್ತದೆ ಎಂದು ಹೇಳಿದರು.

ಇದಲ್ಲದೆ, ಸ್ಥಳೀಯ ಖಾಸಗಿ ಉದ್ಯಮಿಗಳೊಂದಿಗೆ ಪ್ರತಿ ತಿಂಗಳು ಸಮನ್ವಯ ಸಭೆ ನಡೆಸಿ ಸಮಸ್ಯೆಗಳು ಮತ್ತು ಕಾರ್ಯಾಚರಣಾ ಸವಾಲುಗಳನ್ನು ಚರ್ಚಿಸಲಾಗುತ್ತದೆ. ತಿರಸ್ಕೃತ ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಲು ವಿಶೇಷ ‘ರಿಜೆಕ್ಷನ್ ಆಡಿಟ್ ತಂಡ’ವನ್ನೂ ರಚಿಸಲಾಗಿದೆ ಎಂದು ಹೇಳಿದರು.

ನಾಗರಿಕರು ಹಾಗೂ LPEಗಳು ಇ-ಖಾತಾ ಸಂಬಂಧಿತ ಅಹವಾಲುಗಳನ್ನು ಸಲ್ಲಿಸಲು ವಿಶೇಷ ಪೋರ್ಟಲ್‌ ಅನ್ನು ಕೂಡ ಆರಂಭಿಸಲಾಗಿದೆ. ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ ವಾಟ್ಸಾಪ್ ಸಹಾಯವಾಣಿ ಸಂಖ್ಯೆ 9480683695 ಅನ್ನು ಸಂಪರ್ಕಿಸಬಹುದು ಅಥವಾ ಆನ್‌ಲೈನ್ ಮೂಲಕ ಅಹವಾಲು ಸಲ್ಲಿಸಬಹುದು.

ಕಾರ್ಯಕ್ರಮದಲ್ಲಿ ಉಪ ಆಯುಕ್ತ (ಐಟಿ–ಇ-ಆಸ್ತಿ) ಮದನ್ ಮೋಹನ್ ಸಿ ಮತ್ತು ಜಂಟಿ ಆಯುಕ್ತರು (ಕಂದಾಯ) ಲಕ್ಷ್ಮಿದೇವಿ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ!

S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!

Pak ನಲ್ಲಿ ರಕ್ತದೋಕುಳಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ; ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ!

SCROLL FOR NEXT