ರಶೀದ್ ಪಾಷಾ 
ರಾಜ್ಯ

ಬೆಂಗಳೂರು: ಹಫ್ತಾ ಕೊಡದಿದ್ದಕ್ಕೆ ಬ್ಯಾಟ್‌ನಿಂದ ಹಲ್ಲೆ; ಮಕ್ಕಳ ಎದುರೇ ನರಳಿ ಪ್ರಾಣಬಿಟ್ಟ Muslim ವ್ಯಕ್ತಿ, Video

ಬೆಂಗಳೂರಿನಲ್ಲಿ ಹಫ್ತಾ ನೀಡದಿದ್ದಕ್ಕೆ ಗ್ಯಾರೇಜ್ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ನ ಬಡಾ ಮಖಾನ್ ಬಳಿ ನಡೆದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಹಫ್ತಾ ನೀಡದಿದ್ದಕ್ಕೆ ಗ್ಯಾರೇಜ್ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ನ ಬಡಾ ಮಖಾನ್ ಬಳಿ ನಡೆದಿದೆ. ಬಡಾ ಮಖಾನ್ ಬಳಿ ಗ್ಯಾರೇಜ್ ನಡೆಸುತ್ತಿದ್ದ ರಶೀದ್ ಪಾಷಾ ಇತ್ತೀಚೆಗಷ್ಟೇ ಅಂಗಡಿಯ ಮೇಲ್ಭಾಗದಲ್ಲಿ ಮೋಲ್ಡ್ ಹಾಕಿಸಿದ್ದನು. ಹೀಗಾಗಿ ಕೆಲ ಗೂಂಡಾಗಳು 50 ಸಾವಿರ ಹಣ ನೀಡುವಂತೆ ರಶೀದ್ ಪಾಷಾಗೆ ಬೆದರಿಸಿದ್ದಾರೆ.

ಹಫ್ತಾ ಕೊಡಲ್ಲ ಎಂದು ಆರೋಪಿಗಳಿಗೆ ಭಾನುವಾರ ಬೆಳಗ್ಗೆ ರಶೀದ್ ಹೇಳಿದ್ದನು. ಇದರಿಂದ ಕೆರಳಿದ ಗುಂಪು ರಾತ್ರಿ 8.30ಕ್ಕೆ ಮತ್ತೆ ಬಂದು ಹಫ್ತಾ ಕೊಡುವಂತೆ ಬೆದರಿಸಿದ್ದಾರೆ. ಈ ವೇಳೆ ಇಬ್ಬರು ಮಕ್ಕಳ ಎದುರೇ ರಶೀದ್ ಪಾಷಾ ಮೇಲೆ ಬ್ಯಾಟ್ ಮತ್ತು ದೊಣ್ಣೆಯಿಂದ ಗುಂಪು ಮನಬಂದಂತೆ ಥಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ರಶೀದ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆ ಕಲಾಪ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಗಳ ತಲೆದಂಡ!

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, 'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ!

ಹಾರ್ಮುಜ್ ನಿಂದ ದೇಶಕ್ಕೆ ತೈಲ ಹಡಗುಗಳ ಸುಗಮ ಸಂಚಾರ: ಇರಾನ್ ನ ಭಾರತ ಒಪ್ಪಿಸಿದ್ದು ಹೇಗೆ?: ಜೈಶಂಕರ್ ಬಿಚ್ಚಿಟ್ಟ ಮಾಹಿತಿ ಇದು...

ಅಡೆತಡೆಗಳು ದೂರ, ಸರ್ಕಾರ ಗ್ರೀನ್ ಸಿಗ್ನಲ್; RCB Unboxing ಕಾರ್ಯಕ್ರಮ ಸೇರಿ ಚಿನ್ನಸ್ವಾಮಿಯಲ್ಲೇ ನಡೆಯಲಿವೆ IPL ಪಂದ್ಯಗಳು!

SCROLL FOR NEXT