ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್  
ರಾಜ್ಯ

ಬೆಳಗಾವಿ: 'ಕಪ್ಪು ನೋಟು' ಕರೆನ್ಸಿ ವಂಚನೆ ಜಾಲ ಪತ್ತೆ: ಏಳು ಮಂದಿ ಬಂಧನ

ಗೋಕಾಕ ನಗರದ ಹನುಮಾನ ದೇವಸ್ಥಾನದ ಬಳಿ ಇರುವ ಮನೆಯೊಂದರ ಮೇಲೆ ಗೋಕಾಕ ನಗರ ಠಾಣೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಗ್ಯಾಂಗ್ ನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಒಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ: ರಾಸಾಯನಿಕಗಳು ಮತ್ತು ಕಪ್ಪು ಬಣ್ಣದ ಕಾಗದ ಬಳಸಿ ನಿಜವಾದ ನೋಟು ಮುದ್ರಿಸಬಹುದು ಎಂದು ಜನರನ್ನು ವಂಚಿಸುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಏಳು ಜನರನ್ನು ಬೆಳಗಾವಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಗೋಕಾಕ ನಗರದ ಹನುಮಾನ ದೇವಸ್ಥಾನದ ಬಳಿ ಇರುವ ಮನೆಯೊಂದರ ಮೇಲೆ ಗೋಕಾಕ ನಗರ ಠಾಣೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಗ್ಯಾಂಗ್ ನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಒಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಬೆಳಗಾವಿ ಜಿಲ್ಲೆಯ ಗೋಕಾಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಹಣ ದ್ವಿಗುಣ (money doubling)ಅಪರಾಧಿಗಳನ್ನು ಬಂಧಿಸಲಾಗಿದೆ. ಈ ಅಪರಾಧದಲ್ಲಿ ಆಸ್ತಿ ವಂಚನೆಯೂ ಸೇರಿದೆ. ಗೋಕಾಕಿನ ಮೂವರು ಆರೋಪಿಗಳು ಮಹಾರಾಷ್ಟ್ರದ ಜಯಶ್ರೀ ಬಾಬು ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಈತ ಜನರನ್ನು ವಂಚಿಸಲು ವಂಚಕರನ್ನು ಬಳಸುತ್ತಿದ್ದ. ಈ ಬಾರಿ ಅವರು ಬ್ಲಾಕ್ ನೋಟ್ ಹಗರಣ ಬಳಸಿ ತಗುಲಿ ಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಬಂಧಿತರು ಮೂಲ ಕರೆನ್ಸಿ ನೋಟುಗಳನ್ನು ತೆಗೆದುಕೊಂಡು ಅವುಗಳಿಗೆ ಕಪ್ಪು ಬಣ್ಣದ ರಾಸಾಯನಿಕ ಹಾಕುತ್ತಿದ್ದರು. ಅವುಗಳನ್ನು ಡ್ರೈ ಮಾಡಿ ಸರಳ ಕಪ್ಪು ಕಾಗದದಂತೆ ಕಾಣುವಂತೆ ಮಾಡುತ್ತಿದ್ದರು. ಅವುಗಳನ್ನು ಅಮಾಯಕರಿಗೆ ತೋರಿಸಿ, ನೀವು ಅದನ್ನು ಬಿಸಿ ಮಾಡಿ ನಿರ್ದಿಷ್ಟ ರಾಸಾಯನಿಕ ದ್ರಾವಣದಲ್ಲಿ ಹಾಕಿದರೆ ಅದು ಮೂಲ ಕರೆನ್ಸಿಗೆ ಬದಲಾಗುತ್ತದೆ ಎಂದು ಹೇಳುತ್ತಿದ್ದರು. ವಾಸ್ತವದಲ್ಲಿ ಅವುಗಳು ನೈಜ ನೋಟುಗಳೇ. ಕಪ್ಪು ನೋಟುಗಳು ನೈಜ ನೋಟುಗಳಾಗುತ್ತವೆ ಎಂದು ವಂಚಕರನ್ನು ನಂಬಿಸಿ ಬಂಡಲ್ ಗಟ್ಟಲೇ ಕಪ್ಪು ಪೇಪರ್ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಉದಾಹರಣೆಗೆ ಸಂತ್ರಸ್ತರಿಂದ ₹ 50,000 ಸ್ವೀಕರಿಸುತ್ತಿದ್ದ ಆರೋಪಿಗಳು ₹ 2 ಲಕ್ಷ ಮೌಲ್ಯದ 'ಮ್ಯಾಜಿಕ್'ಕಾಗದದ ಭರವಸೆ ನೀಡುತ್ತಿದ್ದರು. ಇವುಗಳು 'ಮ್ಯಾಜಿಕ್ ನೋಟುಗಳು ಅಂತಾ ಹೇಳುತ್ತಿದ್ದರು.ಈ ಹಗರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳು ಭಾಗಿಯಾಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಎಂಟು ಕ್ರಿಮಿನಲ್‌ಗಳು ಭಾಗಿಯಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದ್ದು, ಓರ್ವ ಸ್ಥಳೀಯ ಕ್ರಿಮಿನಲ್‌ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಬಿಸಿಮಾಡುವ ಯಂತ್ರ, ದ್ರಾವಣ ಮತ್ತು ಕಪ್ಪು ಕಾಗದಗಳನ್ನು ವಶಪಡಿಸಿಕೊಂಡಿದ್ದೇವೆ. ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!