ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ದಾರಿ ವಿವಾದಕ್ಕೆ ಸಂಬಂಧಿಕನಿಂದಲೇ ಕೊಲೆ; ಆರೋಪಿ ಬಂಧನ

ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಕೊಲೆ ನಡೆದಿದೆ. ಆರೋಪಿ ಮೊದಲಿನಿಂದಲೂ ದಾರಿ ವಿಚಾರವಾಗಿ ಮೃತನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಬೆಳಗಾವಿ: ಕ್ಷುಲ್ಲಕ ದಾರಿ ವಿಚಾರವಾಗಿ ನಡೆದ ಸಣ್ಣ ಗಲಾಟೆಯಲ್ಲಿ ಸಂಬಂಧಿಯನ್ನು ಕೊಂದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೃತರನ್ನು ದೊಡವಾಡದ ಕೊಪ್ಪ ಅಗಸಿ ನಿವಾಸಿ ಮಹೇಶ ಬಸಯ್ಯ ಉಪ್ಪಿನಮಠ ಎಂದು ಗುರುತಿಸಲಾಗಿದ್ದು, ಆರೋಪಿ ರುದ್ರಯ್ಯ ಬಸಯ್ಯ ಉಪ್ಪಿನಮಠ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಕೊಲೆ ನಡೆದಿದೆ. ಆರೋಪಿ ಮೊದಲಿನಿಂದಲೂ ದಾರಿ ವಿಚಾರವಾಗಿ ಮೃತನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಮಾರ್ಚ್ 17 ರಂದು ಸಂಜೆ ಕೋಳಿ ಅಂಗಡಿಯೊಂದರ ಬಳಿ ನಡೆದ ಗಲಾಟೆ ವೇಳೆ ಕುಡುಗೋಲಿನಿಂದ ಮಹೇಶನ ಕುತ್ತಿಗೆಗೆ ಆರೋಪಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಬಳಿಕ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಅವಕಾಶ: ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಆದೇಶ!

TVK ಪರ ಮತ: ಸಿವಿ ಷಣ್ಮುಗಂ ಸೇರಿ 24 ಶಾಸಕರ ಅನರ್ಹತೆಗೆ AIADMK ಪತ್ರ!

ವಿಧಾನಸೌಧದ ಮೇಲೆ ಹಾರಾಡಿದ ಹೆಲಿಕಾಪ್ಟರ್‌: ಉಗ್ರರ ವಿರುದ್ಧ NSG ಮಾಕ್‌ ಡ್ರಿಲ್‌; ಮೈನವಿರೇಳಿಸುವ Video ನೋಡಿ

NEET UG ಪ್ರಶ್ನೆ ಪತ್ರಿಕೆ ಸೋರಿಕೆ: ದೇಶಾದ್ಯಂತ ಸಿಬಿಐ ದಾಳಿ, ಐವರ ಬಂಧನ!

ಗ್ರಾಹಕರಿಗೆ ಮತ್ತೊಂದು ಬರೆ: ಈ ಹಾಲಿನ ದರ ಏರಿಕೆ; ನಾಳೆಯಿಂದಲೇ ಹೊಸ ರೇಟ್​ ಅನ್ವಯ!

SCROLL FOR NEXT