ಪ್ರೊಫೆಸರ್ ಗೆ ಥಳಿಸಿದ ವಿದ್ಯಾರ್ಥಿಗಳು 
ರಾಜ್ಯ

ಬೆಂಗಳೂರು: ಐ ಲವ್ ಯೂ... ಕ್ಲಾಸ್​ ರೂಮ್​​ನಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್​​- ವಿಡಿಯೋ ವೈರಲ್

ಕ್ಲಾಸ್​​ ರೂಮ್​​ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಇದ್ದ ಸಮಯದಲ್ಲೇ ಪ್ರೊಫೆಸರ್​ ಅಬ್ದುಲ್ ಎಂಬುವವರು ವಿದ್ಯಾರ್ಥಿನಿಗೆ ಐ ಲವ್​ ಯೂ ಎಂದು ಪ್ರಪೋಸ್​ ಮಾಡಿದ್ದು, ಸ್ಟೂಡೆಂಟ್​ ಮೊಬೈಲ್​ನಲ್ಲಿ ಈ ದೃಶ್ಯ ಸೆರೆಯಾಗಿದೆ.

ಬೆಂಗಳೂರು: ನೆಲಮಂಗಲದ ಪ್ರತಿಷ್ಠಿತ ಕಾಲೇಜಿನಲ್ಲಿ ತರಗತಿಯಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೊಫೆಸರ್ ಒಬ್ಬರು ಪ್ರಪೋಸ್ ಮಾಡಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಅವರಿಗೆ ಥಳಿಸಿರುವ ಘಟನೆ ನಡೆದಿದೆ.

ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾಳೆ.

ನೆಲಮಂಗಲ ತಾಲೂಕಿನ ಟಿ. ಬೇಗೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕ್ಲಾಸ್​​ ರೂಮ್​​ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಇದ್ದ ಸಮಯದಲ್ಲೇ ಪ್ರೊಫೆಸರ್​ ಅಬ್ದುಲ್ ಎಂಬುವವರು ವಿದ್ಯಾರ್ಥಿನಿಗೆ ಐ ಲವ್​ ಯೂ ಎಂದು ಪ್ರಪೋಸ್​ ಮಾಡಿದ್ದು, ಸ್ಟೂಡೆಂಟ್​ ಮೊಬೈಲ್​ನಲ್ಲಿ ಈ ದೃಶ್ಯ ಸೆರೆಯಾಗಿದೆ.

ಲೆಕ್ಚರರ್​ ಪ್ರಪೋಸ್ ಮಾಡಿದ ವೇಳೆ ವಿದ್ಯಾರ್ಥಿನಿ ಅಲ್ಲೇ ವಿರೋಧ ಮಾಡಿದ್ದಾಳೆ. ಈ ಹಿಂದೆ ನೀನು ನನಗೆ ಪ್ರಪೋಸ್​ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಕೇಳಿದ್ದು, ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದಿದ್ದಾರೆ. ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸಿ ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತಾಡುವೆ ಎಂದು ಲೆಕ್ಚರರ್​ ಕ್ಲಾಸ್​​ನಿಂದ ಹೊರಗೆ ಹೋಗಿದ್ದಾರೆ.

ಕ್ಲಾಸ್ ರೂಮ್​​ನಲ್ಲಿ ಚಾಕಲೇಟ್ ಕೊಟ್ಟು ಪ್ರಪೋಸ್ ಮಾಡುವುದಾಗಿ ಪ್ರಾಧ್ಯಾಪಕ ಅಬ್ದುಲ್ ಹೇಳಿಕೊಂಡಿದ್ದರಂತೆ. ಈ ವೇಳೆ ರೊಚ್ಚಿಗೆದ್ದ ಇತರೆ ಸ್ಟೂಡೆಂಟ್ಸ್​​ ವಿದ್ಯಾರ್ಥಿನಿ ಪರ ನಿಂತು ಪ್ರಾಧ್ಯಾಪಕನ ಜೊತೆ ಗಲಾಟೆ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪುಣೆಯಲ್ಲಿ ಕಟ್ಟಡದ ಮೇಲೆ ಬಿದ್ದ ಕಸದ ರಾಶಿ, ಬಿಲ್ಡಿಂಗ್ ಕುಸಿತ; ಅವಶೇಷಗಳಡಿ ಸಿಲುಕಿದ 16 ಮಂದಿ

ಭೇಟಿಯಾದ 20 ದಿನಕ್ಕೆ ಪುಟ್ಟ ಅಭಿಮಾನಿನ ಕಳೆದುಕೊಂಡ DCM: ಹೃದಯ ಒಡೆದಂತಾಗಿದೆ Pawan Kalyan ಭಾವುಕ ಪೋಸ್ಟ್!

'' ಬೆದರಿಕೆ ಯುಗ ಮುಗಿಯಿತು'' ಯಾವುದೇ ದುಷ್ಟತನ ಎದುರಿಸಲು ಸಿದ್ಧ, ಡೊನಾಲ್ಡ್ ಟ್ರಂಪ್ ಗೆ ಇರಾನ್ ನಾಯಕರ ತಿರುಗೇಟು!

ಅಮೆರಿಕ-ಇರಾನ್ ಒಪ್ಪಂದ "ಮುಗಿದಿದೆ": ಟ್ರಂಪ್ ಘೋಷಣೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್ 1,650 ಅಂಕಗಳ ಕುಸಿತ

ಮುಸ್ಲಿಂರು ಬಾಂಗ್ಲಾದವರು: ಒಂದು ಕೋಮಿನ ಮೇಲೆ ಗೂಬೆ ಕೂರಿಸುವ ಪ್ರಯತ್ನ- ಕುಮಾರಸ್ವಾಮಿ ವಿರುದ್ಧ ಶಾಸಕ ಹೆಚ್. ಸಿ. ಬಾಲಕೃಷ್ಣ ಕಿಡಿ!