ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ 
ರಾಜ್ಯ

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟ.. ಅಷ್ಟರಮಟ್ಟಿಗೆ ಅಗತ್ಯವಸ್ತುಗಳು ದುಬಾರಿಯಾಗಿದೆ.

ಬೆಂಗಳೂರು: ದೇಶದ ದುಬಾರಿ ನಗರಗಳಲ್ಲಿ ಪ್ರಮುಖವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ವರ್ಷದ ಯುವತಿಯೊಬ್ಬಳು ತನ್ನ ಮಾಸಿಕ ಖರ್ಚುವೆಚ್ಚಗಳನ್ನು ಲೆಕ್ಕಾ ಹಾಕಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟ.. ಅಷ್ಟರಮಟ್ಟಿಗೆ ಅಗತ್ಯವಸ್ತುಗಳು ದುಬಾರಿಯಾಗಿದೆ. ಇನ್ನು ಹೊಸ ತಲೆಮಾರಿನ ಯುವ ಪೀಳಿಗೆಯ ದುಬಾರಿ ಜೀವನಶೈಲಿ ಅಚ್ಚರಿಗೆ ಕಾರಣವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಯುವತಿಯೊಬ್ಬರ ಮಾಸಿಕ ಖರ್ಚುವೆಚ್ಚಗಳ ವಿವರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಶ್ರದ್ಧಾ (shradhawhat) ಎಂಬ ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರು ತಮ್ಮ ಮಾಸಿಕ ಖರ್ಚುವೆಚ್ಚಗಳನ್ನು ಪಟ್ಟಿ ಮಾಡಿ ವಿಡಿಯೋ ಹಾಕಿದ್ದು, ಈ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಒಂಟಿಯಾಗಿ ವಾಸ ಮಾಡುತ್ತಿರುವ ಯುವತಿ ಮಾನಸಿಕ ನೆಮ್ಮದಿ ಹಾಗೂ ಸ್ವಯಂ ಆರೈಕೆಗಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಿದ್ದಾರೆ.

ಯುವತಿ ನೀಡಿರುವ ಪಟ್ಟಿಯ ಅನ್ವಯ, 'ಮಾನಸಿಕ ಆರೋಗ್ಯಕ್ಕಾಗಿ ತಿಂಗಳಿಗೆ 10,000 ರೂಪಾಯಿಯನ್ನು ಯುವತಿ ಮೀಸಲಿಟ್ಟಿದ್ದು, ಅದೇ ರೀತಿ ವಾರಾಂತ್ಯದ ಮಸಾಜ್‌ ಮತ್ತು ಪೆಡಿಕ್ಯೂರ್‌ಗಳಿಗಾಗಿ ತಿಂಗಳಿಗೆ ಸುಮಾರು 5,000 ರೂ. ಹಾಗೂ ಉಗುರುಗಳ ವಿನ್ಯಾಸ ಕ್ಕೆ 3000 ರೂಪಾಯಿ ಖರ್ಚು ಮಾಡುತ್ತಾರೆ‌. ಪ್ರತಿ ಭಾನುವಾರ ಡೇಟ್ ಗಾಗಿ 2,000 ರೂಪಾಯಿ ವ್ಯಯಿಸುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.

ಇದಲ್ಲದೆ ತಿಂಗಳಿಗೆ ಇತರ ಖರ್ಚಿಗಾಗಿ 2,000 ಹೂವುಗಳ ಖರೀದಿ ಹಾಗೂ ಪರ್ಸನಲ್ ಖರ್ಚಿಗೆ 3,000 ರೂ ಖರ್ಚು ಮಾಡುತ್ತೇನೆ ಎಂದು ಯುವತಿ ಹೇಳಿದ್ದಾಳೆ. ಹಿಂದಿ‌ನ ತಲೆಮಾರಿನವರು ಎಷ್ಟು ಹಣ ವಿನಿ‌ ಯೋಗಿಸುತ್ತಾರೆ ಎಂದು ತನಗೆ ತಿಳಿದಿಲ್ಲ. ಆದರೆ ತನಗೆ ಇದು ಮುಖ್ಯ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ಕೆಲವರು ಆಕೆಯ ದುಬಾರಿ ಜೀವನ ಶೈಲಿಯನ್ನು ಪ್ರಶ್ನಿಸಿದರೆ, ಇತರರು ಅದು ಆಕೆಯ ಆಯ್ಕೆ ಎಂದು ಬೆಂಬಲಿಸಿದ್ದಾರೆ‌.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!