ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅನೈತಿಕ ಸಂಬಂಧ ವಿಚಾರವಾಗಿ ಗಲಾಟೆ; ಮಹಿಳೆ, ಆಕೆಯ ತಮ್ಮನನ್ನು ಕೊಂದಿದ್ದ ಅಪ್ರಾಪ್ತ ಬಾಲಕನ ಬಂಧನ!

ಮೃತರನ್ನು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ. ಮಲ್ಲೇಗೌಡ ಮತ್ತು ಯಮುನಾ ಮದುವೆಯಾಗಿ 20 ವರ್ಷವಾಗಿತ್ತು. ದಂಪತಿಗೆ 19 ವರ್ಷದ ಮಗಳು ಮತ್ತು 17 ವರ್ಷದ ಮಗ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಅನೈತಿಕ ಸಂಬಂಧದ ವಿಚಾರವಾಗಿ ಜಗಳ ನಡೆದು 36 ವರ್ಷದ ಮಹಿಳೆ ಹಾಗೂ ಆಕೆಯ ತಮ್ಮನಿಗೆ ಚಾಕುವಿನಿಂದ ಇರಿದು ಕೊಂದಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ. ಮಲ್ಲೇಗೌಡ ಮತ್ತು ಯಮುನಾ ಮದುವೆಯಾಗಿ 20 ವರ್ಷವಾಗಿತ್ತು. ದಂಪತಿಗೆ 19 ವರ್ಷದ ಮಗಳು ಮತ್ತು 17 ವರ್ಷದ ಮಗ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ 16 ವರ್ಷದ ಬಾಲಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಏನಿದು ಗಲಾಟೆ: ಯಮುನಾ ಅವರ ಪತಿ ಮಲ್ಲೇಗೌಡ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಷಯವನ್ನು ಪ್ರಶ್ನಿಸಲು ಯಮುನಾ ಮತ್ತು ಆಕೆಯ ತಮ್ಮ ಆರೋಪಿ ಮಹಿಳೆಯ ಮನೆಗೆ ಹೋಗಿದ್ದ ವೇಳೆ ತೀವ್ರ ವಾಗ್ವಾದ ನಡೆದಿದೆ.

ಈ ಸಂದರ್ಭದಲ್ಲಿ ಆ ಮಹಿಳೆಯ ಅಪ್ರಾಪ್ತ ಬಾಲಕ ಯುಮುನಾ ಹಾಗೂ ಸುದೀಪ್ ಗೆ ಚಾಕುವಿನಿಂದ ಇರಿದಿದ್ದಾನೆ. ಇಬ್ಬರಿಗೂ ಕುತ್ತಿಗೆ, ದೇಹ, ಕೈ ಮತ್ತು ಬೆನ್ನಿನ ಮೇಲೆ ಎಲ್ಲೆಂದರಲ್ಲಿ ಅನೇಕ ಬಾರಿ ಚಾಕುವಿನಿಂದ ಇರಿದಿದ್ದು, ಅವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಅಕ್ರಮ ಸಂಬಂಧದ ಆರೋಪದ ಮೇಲೆ ತನ್ನ ಕುಟುಂಬ ಮತ್ತು ಮಹಿಳೆ ನಡುವೆ ನಡುವೆ ಜಗಳ ನಡೆದಿತ್ತು ಎಂದು ಮಲ್ಲೇಗೌಡ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಎರಡೂ ಕುಟುಂಬಗಳು ರಾಜಿ ಮಾಡಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದರು. ಆರು ತಿಂಗಳ ಹಿಂದೆ ಆಪಾದಿತ ಮಹಿಳೆಗೆ 2 ಲಕ್ಷ ರೂಪಾಯಿ ಸಾಲ ನೀಡಿದ್ದು, ಆಕೆ 20 ದಿನಗಳ ಹಿಂದೆ ಮರುಪಾವತಿ ಮಾಡಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಪತ್ನಿ ಜಗಳ ಮುಂದುವರಿಸಿದ್ದಳು. ಇತ್ತೀಚೆಗೆ, ಅಂತಹ ಯಾವುದೇ ವಿವಾದಗಳಿರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆಪಾದಿತ ಮಹಿಳೆ, ಆಕೆಯ ಮಗ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಮನೆ ಮುಂದೆ ನಿಲ್ಲಿಸೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕಕ್ಕೆ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ; CM ಡಿಕೆಶಿಗೆ ಪತ್ರ