ನಾಲ್ವರು ನೀರುಪಾಲು 
ರಾಜ್ಯ

ಆಂಧ್ರಪ್ರದೇಶ: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

ಕರ್ನೂಲು ಜಿಲ್ಲೆಯ ಕೋಸಿಗಿ ಆರ್‌ಡಿಎಸ್ ಅಣೆಕಟ್ಟಿಗೆ ಸ್ನಾನ ಮಾಡಲು ಹೋಗಿದ್ದ ಕರ್ನಾಟಕ ಮೂಲದ ನಾಲ್ವರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ 15 ಸದಸ್ಯರ ತಂಡ ಮದುವೆ ಕಾರ್ಯಕ್ರಮ ನಿಮಿತ್ತ ಆಂಧ್ರಪ್ರದೇಶಕ್ಕೆ ಹೋಗಿತ್ತು.

ಕರ್ನೂಲು ಜಿಲ್ಲೆಯ ಕೋಸಿಗಿ ಆರ್‌ಡಿಎಸ್ ಅಣೆಕಟ್ಟಿಗೆ ಸ್ನಾನ ಮಾಡಲು ಹೋಗಿದ್ದ ಕರ್ನಾಟಕ ಮೂಲದ ನಾಲ್ವರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ 15 ಸದಸ್ಯರ ತಂಡ ಮದುವೆ ಕಾರ್ಯಕ್ರಮ ನಿಮಿತ್ತ ಆಂಧ್ರಪ್ರದೇಶಕ್ಕೆ ಹೋಗಿತ್ತು. ಕಾರ್ಯಕ್ರಮ ಮುಗಿದ ನಂತರ ಅವರೆಲ್ಲರೂ ಈಜಾಡಲು ಕೋಸಗಿಯ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದಲ್ಲಿರುವ ಸಾತುನೂರು ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಇಳಿದಿದ್ದಾರೆ. ಅಲ್ಲಿ ಅವರ ಪೈಕಿ ನಾಲ್ವರು ಆಳವಾದ ನೀರಿಗೆ ಇಳಿದು ಈಜಲು ಸಾಧ್ಯವಾಗದೇ ಮುಳುಗಿ ಸಾವನ್ನಪ್ಪಿದರು. ಮೃತರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಾದ ಉಮಾವತಿ(35), ರತ್ನ(24), ಮಹೇಶ್(28) ಮತ್ತು ಶಿವಾನಂದ(24) ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನನಗೆ ಸಾಯುವುದೊಂದೇ ದಾರಿ’: ಐಫೋನ್ EMI 'ಮಹಾ' ದುರಂತ, ಇಡೀ ಕುಟುಂಬ ಬಲಿ

ಮಗನನ್ನು ರಕ್ಷಿಸಲು ಹೋಗಿ ಬೆಟ್ಟದಿಂದ ಕೆಳಗೆ ಬಿದ್ದ ತಂದೆ; ಇಬ್ಬರು ಇಲ್ಲದೆ ನಾನೇಕೆ ಅಂತ ತಾಯಿಯೂ ಆತ್ಮಹತ್ಯೆ, Video

‘FIR ದಾಖಲಿಸಿದರೂ ಹೆದರಬೇಡಿ, NICE ರಸ್ತೆ ಟೋಲ್ ಕಟ್ಟಬೇಡಿ’: ಕೇಂದ್ರ ಸಚಿವ HD ಕುಮಾರಸ್ವಾಮಿ

ವಿದ್ಯಾರ್ಥಿಗೆ ಪೆಲೆಟ್ ಗನ್ ಪೆಟ್ಟು: ರಾಹುಲ್ ಧರಣಿ ಬೆನ್ನಲ್ಲೇ FIR ದಾಖಲಿಸಿದ ದೆಹಲಿ ಪೊಲೀಸ್

ಜಂತರ್ ಮಂತರ್ ಪ್ರತಿಭಟನೆಗಳು ಭ್ರಷ್ಟಾಚಾರ ಮಾತ್ರವಲ್ಲ, ವ್ಯವಸ್ಥೆಯ ವೈಫಲ್ಯಗಳನ್ನೂ ಎತ್ತಿ ತೋರಿಸಿದೆ: RSS