ಕಂಟೈನರ್ ಗೆ ಕಾರು ಡಿಕ್ಕಿ  
ರಾಜ್ಯ

ಪ್ರವಾಸಕ್ಕೆ ಹೊರಟಿದ್ದ ಕುಟುಂಬಕ್ಕೆ ದುರಂತ: ನಿಂತಿದ್ದ ಕಂಟೈನರ್​ಗೆ ಕಾರು ಡಿಕ್ಕಿ; ಬಾಲಕಿ ಸೇರಿ ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ

ಮಮತಾ(36ವ) ಹಾಗೂ ಮಗಳು ಧೃತಿಕಾ(14ವ) ಸ್ಥಳದಲ್ಲಿಯೇ ಅಸುನೀಗಿದರೆ, ಪತಿ ರಾಘು(40ವ), ಮಕ್ಕಳಾದ ಜಾಹ್ನವಿ(12ವ), ಚಾರ್ವಿ(10ವ) ಹಾಗೂ ಕಾರು ಚಾಲಕ ಕಿರಣ್​​ ಸ್ಥಿತಿ ಗಂಭೀರವಾಗಿದೆ.

ಉಡುಪಿ: ನಿಂತಿದ್ದ ಕಂಟೈನರ್​ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಬಳಿ ಭಾನುವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದರೆ, ಪತಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಮಮತಾ(36ವ) ಹಾಗೂ ಮಗಳು ಧೃತಿಕಾ(14ವ) ಸ್ಥಳದಲ್ಲಿಯೇ ಅಸುನೀಗಿದರೆ, ಪತಿ ರಾಘು(40ವ), ಮಕ್ಕಳಾದ ಜಾಹ್ನವಿ(12ವ), ಚಾರ್ವಿ(10ವ) ಹಾಗೂ ಕಾರು ಚಾಲಕ ಕಿರಣ್​​ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟವರು ಬೆಂಗಳೂರು ಮೂಲದ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು. ಬಳಿಕ ಮುರುಡೇಶ್ವರ ಮತ್ತು ಗೋಕರ್ಣ ಕ್ಷೇತ್ರಗಳ ದರ್ಶನದ ಉದ್ದೇಶದಿಂದ ಬೈಂದೂರು ಮಾರ್ಗವಾಗಿ ಪ್ರಯಾಣ ನಡೆಸುತ್ತಿದ್ದರು. ಗಾಯಾಳು ತಂದೆ ಮತ್ತು ಇಬ್ಬರು ಮಕ್ಕಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದ್ದರೆ, ಕಾರು ಚಾಲಕ ಕಿರಣ್​​ನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ: ದೇವರ ಹೆಸರಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಪ್ರಮಾಣವಚನ ಸ್ವೀಕಾರ..!

'Lack Of Knowledge': ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಡಚ್ ಪ್ರಧಾನಿ ಹೇಳಿಕೆ ತಿರಸ್ಕರಿಸಿದ ಭಾರತ!

COVID ಬಳಿಕ ವಿಶ್ವಕ್ಕೆ ಮತ್ತೊಂದು ಹೆಮ್ಮಾರಿ ಕಂಟಕ: ಕೆನಡಾದಲ್ಲಿ ಮಾರಣಾಂತಿಕ 'Hantavirus' ಮತ್ತೊಂದು ಸೋಂಕು ದೃಢ, ಹೆಚ್ಚಿದ ಆತಂಕ..!

ಅಧಿಕಾರ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್: CM ಗಾದಿ ಕನಸು ಜೀವಂತ..!

94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಕೇವಲ 1 ರೂ.ಗೆ ಭೋಜನ ವ್ಯವಸ್ಥೆ..!

SCROLL FOR NEXT