ಸಾಂದರ್ಭಿಕ ಚಿತ್ರ 
ರಾಜ್ಯ

ಶಿಕ್ಷಣ ಕ್ಷೇತ್ರಕ್ಕೆ ಬಲ: 10,419 ಅತಿಥಿ ಉಪನ್ಯಾಸಕರ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!

ಯುಜಿಸಿ ಮಾನದಂಡಗಳನ್ನು ಪೂರೈಸದ 3,853 ಅತಿಥಿ ಉಪನ್ಯಾಸಕರನ್ನು “ಶಿಕ್ಷಣ ಸಂಯೋಜಕರು” (Education Coordinators) ಆಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ ನಿವಾರಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉನ್ನತ ಶಿಕ್ಷಣ ಇಲಾಖೆಯು 10,419 ಅತಿಥಿ ಉಪನ್ಯಾಸಕರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲು ನಿರ್ಧರಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸರ್ಕಾರವು 11,100 ಅತಿಥಿ ಉಪನ್ಯಾಸಕರನ್ನು ನೇಮಿಸಲು ನಮಗೆ ಅನುಮತಿ ನೀಡಿದ್ದು, ನಾವು 10,419 ಅಭ್ಯರ್ಥಿಗಳನ್ನು ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿದ್ದೇವೆ. ಈ ನೇಮಕಾತಿ ತಾತ್ಕಾಲಿಕವಾಗಿದ್ದು, ಶಾಶ್ವತ ಹುದ್ದೆಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಯುಜಿಸಿ ಮಾನದಂಡಗಳನ್ನು ಪೂರೈಸದ 3,853 ಅತಿಥಿ ಉಪನ್ಯಾಸಕರನ್ನು “ಶಿಕ್ಷಣ ಸಂಯೋಜಕರು” (Education Coordinators) ಆಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ.

ಈ ಹುದ್ದೆಗಳನ್ನು 2026–27 ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತದೆ. ಇವರಿಗೆ ಪ್ರಯೋಗಾಲಯ ಕಾರ್ಯಗಳಲ್ಲಿ ಸಹಾಯ ಮಾಡುವುದು ಹಾಗೂ ಶೈಕ್ಷಣಿಕ ಮತ್ತು ಅಶೈಕ್ಷಣಿಕ ಚಟುವಟಿಕೆಗಳಲ್ಲಿ ಬೆಂಬಲ ನೀಡುವ ಜವಾಬ್ದಾರಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕ್ರಮವನ್ನು ಮಾನವೀಯ ದೃಷ್ಟಿಕೋನದಿಂದ ಕೈಗೊಳ್ಳಲಾಗಿದ್ದು, ಅನುಭವ ಆಧಾರಿತ ವೇತನ ವ್ಯವಸ್ಥೆಯಡಿ 5–10 ವರ್ಷ ಅನುಭವ ಹೊಂದಿರುವವರಿಗೆ ರೂ.28,000, 10–15 ವರ್ಷ ಅನುಭವಿಗಳಿಗೆ ರೂ.29,000 ಹಾಗೂ 15 ವರ್ಷಕ್ಕಿಂತ ಹೆಚ್ಚು ಅನುಭವಿಗಳಿಗೆ ರೂ.30,000 ವೇತನ ನಿಗದಿಪಡಿಸಲಾಗಿದೆ. ಜೊತೆಗೆ ಇವರಿಗೆ ವೈದ್ಯಕೀಯ ವಿಮೆ ಸೌಲಭ್ಯವೂ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ: ಪವನ್ ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ಬುದ್ದ- ಜಗವೆಲ್ಲಾ ಮಲಗಿರಲು ಅವನೊಬ್ಬ ಎದ್ದ: ಬೌದ್ಧ ಪೌರ್ಣಮಿ ಮಹತ್ವ, ಆಚರಣೆ - ಸಂದೇಶ

ಜಾಗತಿಕ ಅಸ್ಥಿರತೆ ನಡುವೆಯೂ ಇಂಧನ ದರ ಸ್ಥಿರ: ಬೆಲೆ ಏರಿಕೆ ಹೊರೆ ಹೊತ್ತ ತೈಲ ಕಂಪನಿಗಳು, ಗ್ರಾಹಕರಿಗೆ ರಿಲೀಫ್..!

SCROLL FOR NEXT