ಪೀಣ್ಯ 
ರಾಜ್ಯ

ಲೋಡ್ ಪರೀಕ್ಷೆ: ಪೀಣ್ಯ ಎಲಿವೇಟೆಡ್ ಫ್ಲೈಓವರ್ 3 ದಿನಗಳ ಕಾಲ ಬಂದ್..!

ನಗರ ಸಂಚಾರಕ್ಕೆ ಪ್ರಮುಖವಾದ ಈ ಫ್ಲೈಓವರ್‌ನಲ್ಲಿ ಕೇಬಲ್ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಂತಿಮ ಲೋಡ್ ಟೆಸ್ಟ್ ನಡೆಸಲಾಗುತ್ತಿದೆ. ಇದರಿಂದಾಗಿ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಬೆಂಗಳೂರು: ಲೋಡ್ ಟೆಸ್ಟಿಂಗ್ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನ್ನು (Dr Sri Shivakumar Swamiji Flyover) ಮೂರು ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.

ಮೇ 5ರ ಬೆಳಿಗ್ಗೆ 5 ಗಂಟೆಯಿಂದ ಮೇ 8ರ ಬೆಳಿಗ್ಗೆ 11 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನ್ನು ಬಂದ್ ಮಾಡಲಾಗುತ್ತಿದೆ.

ನಗರ ಸಂಚಾರಕ್ಕೆ ಪ್ರಮುಖವಾದ ಈ ಫ್ಲೈಓವರ್‌ನಲ್ಲಿ ಕೇಬಲ್ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಂತಿಮ ಲೋಡ್ ಟೆಸ್ಟ್ ನಡೆಸಲಾಗುತ್ತಿದೆ. ಇದರಿಂದಾಗಿ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಕೆನ್ನಮೆಟಲ್ ವಿಡಿಯಾ ಮೇಲ್ಸೇತುವೆ ರ್ಯಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರ್ಯಾಂಪ್‌ವರೆಗೆ, ಹಾಗೆಯೇ ಸಿಎಂಟಿಐ ಜಂಕ್ಷನ್‌ನಿಂದ ಪಾರ್ಲೆ-ಜಿ ಟೋಲ್‌ವರೆಗೆ ಫ್ಲೈಓವರ್ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಈ ಅವಧಿಯಲ್ಲಿ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ನೆಲಮಂಗಲದಿಂದ ಬೆಂಗಳೂರಿನತ್ತ ಬರುವವರು ಕೆನ್ನಮೆಟಲ್ ಕಾರ್ಖಾನೆ ಸಮೀಪ ಡೈವರ್ಷನ್ ಪಡೆದು ಎನ್‌ಎಚ್-4 ಕೆಳಭಾಗದ ರಸ್ತೆ ಮತ್ತು ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲು, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಹಾಗೂ ಗೋರಗುಂಟೆಪಾಳ್ಯ ಮೂಲಕ ಸಂಚರಿಸಬಹುದು.

ಇನ್ನೂ ಸಿಎಂಟಿಐ ಭಾಗದಿಂದ ನೆಲಮಂಗಲದತ್ತ ಹೋಗುವವರು ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲು ಮೂಲಕ ಪಾರ್ಲೆ-ಜಿ ಟೋಲ್‌ವರೆಗೆ ಎನ್‌ಎಚ್-4 ಕೆಳಭಾಗದ ರಸ್ತೆಯನ್ನು ಬಳಸಬೇಕು ಎಂದು ಸೂಚಿಸಲಾಗಿದೆ.

ಮೂರು ದಿನಗಳ ಈ ನಿರ್ಬಂಧದಿಂದ ಟ್ರಾಫಿಕ್ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಚಿತವಾಗಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ಸಂಪುಟ ವಿಸ್ತರಣೆ ಮುನಿಸು ಕೊನೆಗೂ ಶಮನ: ರಾಜೀನಾಮೆ ವಾಪಸ್ ಪಡೆದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್

ರಾಜ್‌ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!