ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿದ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತಿತರರು 
ರಾಜ್ಯ

ರಾಮನಗರ ಜನರಿಗೆ ಗುಡ್ ನ್ಯೂಸ್: ಇನ್ಮುಂದೆ ಒಡೆಯರ್ ಎಕ್ಸ್ ಪ್ರೆಸ್ ರೈಲು ನಿಲುಗಡೆ!

ರಾಮನಗರ ರೈಲು ನಿಲ್ದಾಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ಮೈಸೂರು ಒಡೆಯರ್ ಎಕ್ಸ್ ಪ್ರೆಸ್ ನಿಲುಗಡೆಗೆ ಚಾಲನೆ ನೀಡಿದರು.

ರಾಮನಗರ: ರಾಮನಗರ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೆಎಸ್‌ಆರ್‌ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಒಡೆಯರ್‌ ಎಕ್ಸ್‌ಪ್ರೆಸ್‌ ರೈಲು ಇನ್ಮುಂದೆ ರಾಮನಗರದಲ್ಲೂ ನಿಲುಗಡೆ ನೀಡಲಿದೆ.

ಮೈಸೂರು–ಕೆಎಸ್ಆರ್ ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 12613/12614) ರೈಲುಗಳಿಗೆ ರಾಮನಗರಂ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ರಾಮನಗರ ರೈಲು ನಿಲ್ದಾಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ಮೈಸೂರು ಒಡೆಯರ್ ಎಕ್ಸ್ ಪ್ರೆಸ್ ನಿಲುಗಡೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ವಿ. ಸೋಮಣ್ಣ, ಸ್ಥಳೀಯ ನಾಗರಿಕರ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಒಡೆಯರ್ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವುದರಿಂದ ವಿದ್ಯಾರ್ಥಿಗಳು, ಸ್ಥಳೀಯ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಸುಗಮವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದರು.

ರಾಮನಗರದಿಂದ ಬೆಂಗಳೂರು ಮತ್ತು ಮೈಸೂರಿಗೆ ಶೀಘ್ರವಾಗಿ ಪ್ರಯಾಣಿಸಬಹುದಾದ ಕಾರಣ ಇಲ್ಲಿನ ಸಾಮಾಜಿಕ-ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುವುದು ಹಾಗೂ ರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯ ಸೇವೆಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕೆಎಸ್ಆರ್ ಬೆಂಗಳೂರು - ಮಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಬೆಂಗಳೂರು - ಮೈಸೂರು ರೈಲು ಮಾರ್ಗದ ಚತುಷ್ಪಥೀಕರಣ ಹಾಗೂ ಬೆಂಗಳೂರು ಮತ್ತು ಕೋಲಾರ ನಡುವೆ ಹೊಸ ನೇರ ರೈಲು ಮಾರ್ಗದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ನಮ್ಮ ದೇಶದ ಜೀವನಾಡಿಯಾದ ಭಾರತೀಯ ರೈಲ್ವೆ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳ ನಡುವೆ ಸಂಪರ್ಕವನ್ನು ಏರ್ಪಡಿಸುವುದಲ್ಲದೆ, ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಹಾಗೂ ಸಾವಿರಾರು ಟನ್ ಗಳಷ್ಟು ಸರಕುಗಳನ್ನು ಸಾಗಿಸುವುದರ ಜೊತೆಗೆ ವಿವಿಧ ಪ್ರದೇಶಗಳ ಜನರನ್ನು ಬೆಸೆಯುವ ಮೂಲಕ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ರಾಮನಗರದ ಜನರಿಗೆ ಅತ್ಯಗತ್ಯವಾಗಿರುವ 2-3 ಅಂಡರ್ ಪಾಸ್ ಒದಗಿಸುವಂತೆ ಕೇಂದ್ರ ಸಚಿವರ ಬಳಿ ಮನವಿ ಮಾಡಿದರು. ಸಂಸದ ಡಾ. ಸಿ. ಎನ್. ಮಂಜುನಾಥ್ , ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: ನಿರ್ಮಾಣ ಹಂತದ ಆಂಜನೇಯ ದೇವಸ್ಥಾನದ ಛಾವಣಿ ಕುಸಿತ; 4 ಭಕ್ತರು ಸಾವು, 20 ಮಂದಿಗೆ ಗಾಯ

ಶೀಘ್ರದಲ್ಲೇ ಬಸ್ ಪ್ರಯಾಣ ದರ ಹೆಚ್ಚಳ? ರಾಜ್ಯದ ಹಿತಕ್ಕಾಗಿ ಕ್ರಮ ಎಂದ CM ಡಿಕೆ ಶಿವಕುಮಾರ್

ಬೆಳಗಾವಿ: 2 ಕೋಟಿ ವಿಮೆ ಹಣಕ್ಕಾಗಿ ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದ ಮಗಳು; ಮರ್ಯಾದೆಗೆ ಅಂಜಿ ತಾಯಿ ಆತ್ಮಹತ್ಯೆ!

3rd ODI: ಏಕದಿನದಲ್ಲಿ ಮೊದಲ 5 ವಿಕೆಟ್ ಗೊಂಚಲು, ಎಲೈಟ್ ಗ್ರೂಪ್ ಸೇರಿದ ಕನ್ನಡಿಗ Prasidh Krishna, ವಿಶಿಷ್ಟ ದಾಖಲೆ

Tamil Nadu:'Circumstances Changed'; ಸುಮಾರು 60 ವರ್ಷಗಳ ಮೈತ್ರಿಗೆ ಅಂತ್ಯ! DMK ಮೈತ್ರಿಕೂಟದಿಂದ IUML ಹೊರಗೆ!