ಹೈಕೋರ್ಟ್ 
ರಾಜ್ಯ

ಪ್ರವಾಸಿ ವೀಸಾವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ: ಹೈಕೋರ್ಟ್

ಫ್ರಾನ್ಸ್ ಪ್ರಜೆ 54 ವರ್ಷದ ಕ್ರಿಸ್ಟೋಫ್ ಸ್ಟೆಫಾನ್ ಮೊನ್ಶಿಯನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ವೇಳೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು: ಪ್ರವಾಸಿ ವೀಸಾದ ಮೇಲೆ ದೇಶಕ್ಕೆ ಬರುವ ವಿದೇಶಿ ನಾಗರಿಕರು ಅದನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಥವಾ ಸಮಾಜದ ಶಾಂತಿ ಭಂಗಕ್ಕೆ ಕಾರಣವಾಗುವ ರೀತಿಯಲ್ಲಿ ವರ್ತಿಸಲು ಅನುಮತಿ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಫ್ರಾನ್ಸ್ ಪ್ರಜೆ 54 ವರ್ಷದ ಕ್ರಿಸ್ಟೋಫ್ ಸ್ಟೆಫಾನ್ ಮೊನ್ಶಿಯನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ವೇಳೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಹಿಟ್ಟಲಮಕ್ಕಿಯಲ್ಲಿ ಹಲವು ವರ್ಷಗಳಿಂದ ರೆಸ್ಟೋರೆಂಟ್ ನಡೆಸುತ್ತಿದ್ದ ಮೊನ್ಶಿಯನ್ ಅವರಿಗೆ ವಿದೇಶಿಗರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) ನೀಡಿದ್ದ ‘ಲೀವ್ ಇಂಡಿಯಾ ನೋಟಿಸ್’ ನ್ನು ಅವರು ಪ್ರಶ್ನಿಸಿದ್ದರು.

ಕಳೆದ ಮಾರ್ಚ್ 16ರ ಈ ನೊಟೀಸ್ ನ್ನು ವಾಟ್ಸ್ಆಪ್ ಮೂಲಕ ಅವರಿಗೆ ಕಳುಹಿಸಲಾಗಿತ್ತು. ನವೆಂಬರ್ 24, 2026ರವರೆಗೆ ಮಾನ್ಯತೆ ಹೊಂದಿರುವ ಪ್ರವಾಸಿ ವೀಸಾ ಹೊಂದಿರುವ ಕಾನೂನು ಪಾಲಕ ನಾಗರಿಕನಾದ ತಮಗೆ ಯಾವುದೇ ವಿಚಾರಣೆಗೆ ಅವಕಾಶ ನೀಡದೆ ದೇಶ ತೊರೆಯಲು ಸೂಚಿಸಿರುವುದು ಅಕ್ರಮ ಹಾಗೂ ಏಕಪಕ್ಷೀಯ ಕ್ರಮವಾಗಿದೆ ಎಂದು ಅವರು ವಾದಿಸಿದ್ದರು.

ಆದರೆ ನ್ಯಾಯಾಲಯ, ಅರ್ಜಿದಾರರು ತಮ್ಮ ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ಸಂಸ್ಥೆಗಳಿಂದ ಪ್ರತಿಕೂಲ ವರದಿಗಳು ಬಂದಿರುವುದಾಗಿ ಗಮನಿಸಿ, ಅವರಿಗೆ ನ್ಯಾಯಸಮ್ಮತ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

“ಲೀವ್ ಇಂಡಿಯಾ ನೊಟೀಸ್” ಕಾನೂನುಬದ್ಧ ಅಧಿಕಾರದ ಸರಿಯಾದ ಉಪಯೋಗವಾಗಿದ್ದು, ಇದರಲ್ಲಿ ಯಾವುದೇ ಏಕಪಕ್ಷೀಯತೆ ಅಥವಾ ಅಕ್ರಮವಿಲ್ಲ. ಇದು ವಿದೇಶಿ ನಾಗರಿಕರನ್ನು ನಿಯಂತ್ರಿಸುವ ಸಂವಿಧಾನಾತ್ಮಕ ಮತ್ತು ಕಾನೂನು ವ್ಯವಸ್ಥೆಗೆ ಅನುಗುಣವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವಿದೇಶಿ ನಾಗರಿಕರು ಭಾರತದಲ್ಲಿ ಉಳಿಯುವ ಹಕ್ಕನ್ನು ಸ್ವಯಂಪ್ರೇರಿತವಾಗಿ ಕೇಳಲು ಸಾಧ್ಯವಿಲ್ಲ. ವೀಸಾ ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದರೆ ತಪ್ಪು ಎಂದು ನ್ಯಾಯಾಲಯ ಹೇಳಿದೆ.

ದಾಖಲೆಗಳ ಪ್ರಕಾರ, ಅರ್ಜಿದಾರರು ಪ್ರವಾಸಿ ವೀಸಾದ ಮಿತಿಯನ್ನು ಮೀರಿ ರೆಸ್ಟೋರೆಂಟ್ ನಡೆಸುವುದರ ಮೂಲಕ ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿದ್ದಷ್ಟೇ ಅಲ್ಲದೆ, ಸ್ಥಳೀಯ ಶಾಂತಿಗೆ ಧಕ್ಕೆ ಉಂಟಾಗಿದೆ ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel