ಸಾಂದರ್ಭಿಕ ಚಿತ್ರ 
ರಾಜ್ಯ

ನಿಮ್ಮ ಐಡಿ ಸುರಕ್ಷಿತವೇ?: ಕೊಲೆ ಕೇಸ್'ನಲ್ಲಿ ಪೊಲೀಸ್ ನೋಟಿಸ್ ನೋಡಿ ಹೌಹಾರಿದ ವ್ಯಕ್ತಿ, ಏನೂ ಅರಿಯದ ಸಾಮಾನ್ಯನೀಗ ಹತ್ಯೆ ಆರೋಪಿ..!

ಇಂತಹ ಆಘಾತಕಾರಿ ಸನ್ನಿವೇಶವೊಂದು ಹೊಸಕೋಟೆ ತಾಲ್ಲೂಕಿನ ಲಕ್ಕೊಂಡನಹಳ್ಳಿ ನಿವಾಸಿ ಎಲ್.ಎಸ್. ಪುನೀತ್ ಅವರಿಗೆ ಎದುರಾಗಿದೆ. ಈ ಘಟನೆ ಕೇವಲ ಒಂದು ಸಾಮಾನ್ಯ ಪ್ರಕರಣವಲ್ಲ, ಪ್ರತೀಯೊಬ್ಬರಿಗೂ ಎಚ್ಚರಿಕೆಯ ಗಂಟೆಯೂ ಹೌದು.

ಬೆಂಗಳೂರು: ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲದಿದ್ದರು, ಇದ್ದಕ್ಕಿದ್ದಂತೆ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ, ವಿಚಾರಣೆಗೆ ಹಾಜರಾಗಿ ಎಂದು ಪೊಲೀಸ್ ನೋಟಿಸ್ ಬಂದರೆ ಹೇಗಿರುತ್ತೆ..?

ಇಂತಹ ಆಘಾತಕಾರಿ ಸನ್ನಿವೇಶವೊಂದು ಹೊಸಕೋಟೆ ತಾಲ್ಲೂಕಿನ ಲಕ್ಕೊಂಡನಹಳ್ಳಿ ನಿವಾಸಿ ಎಲ್.ಎಸ್. ಪುನೀತ್ ಅವರಿಗೆ ಎದುರಾಗಿದೆ. ಈ ಘಟನೆ ಕೇವಲ ಒಂದು ಸಾಮಾನ್ಯ ಪ್ರಕರಣವಲ್ಲ, ಪ್ರತೀಯೊಬ್ಬರಿಗೂ ಎಚ್ಚರಿಕೆಯ ಗಂಟೆಯೂ ಹೌದು.

ಪುನೀತ್ ಅವರ 2009ರ ವೋಟರ್ ಐಡಿಯನ್ನು ಬಳಸಿಕೊಂಡು 2024ರ ಹತ್ಯೆ ಪ್ರಕರಣದ ಆರೋಪಿಗಳು ಸಿಮ್ ಕಾರ್ಡ್ ಪಡೆದು, ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಪುನೀತ್ ಅವರ ಐಡಿಯಲ್ಲಿ ತಮ್ಮ ಫೋಟೋ ಬಳಸಿ ಕೃತ್ಯಕ್ಕೆ ಸಿಮ್ ಕಾರ್ಡ್ ಪಡೆದಿದ್ದು, ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣವೊಂದರ ತನಿಖೆ ವೇಳೆ ಹೊಸಕೋಟೆ ತಾಲೂಕಿನ ಎಲ್.ಎಸ್. ಪುನೀತ್ (36) ಅವರಿಗೆ ಪೊಲೀಸರು ನೋಟಿಸ್ ನೀಡಿದಾಗ, ಗುರುತಿನ ಚೀಟಿ (Voter ID) ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.

2024ರ ಸೆಪ್ಟೆಂಬರ್ 18ರಂದು ವರ್ತೂರಿನ ಸುಲಿಕುಂಟೆ ಕಾಲೋನಿಯ ರೇವಂತ್ ಕುಮಾರ್ (23) ಎಂಬುವವರನ್ನು ಒಂಬತ್ತು ಜನರ ತಂಡ ಅಪಹರಿಸಿ, ತಮಿಳುನಾಡಿನ ಬಾಗಲೂರು ಪೊಲೀಸ್ ವ್ಯಾಪ್ತಿಯಲ್ಲಿ ಕೊಲೆ ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ನಂತರ ಬೆಂಗಳೂರಿನ ವರ್ತೂರು ಪೊಲೀಸರಿಗೆ ವರ್ಗಾಯಿಸಲಾಯಿತು.

ಕೊಲೆ ಆರೋಪಿಗಳು ಬಳಸಿದ್ದ ಮೊಬೈಲ್ ಸಿಮ್ ಕಾರ್ಡ್‌ಗಳ ವಿವರಗಳನ್ನು ಪರಿಶೀಲಿಸಿದಾಗ, ಒಂದು ಸಿಮ್ ಕಾರ್ಡ್ ಪುನೀತ್ ಅವರ ವಿಳಾಸದಲ್ಲಿ ನೋಂದಣಿಯಾಗಿರುವುದು ಕಂಡುಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ಪುನೀತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಮೇ 2, 2026 ರಂದು ವಿಚಾರಣೆಗೆ ಹಾಜರಾದ ಪುನೀತ್ ಅವರಿಗೆ ಪೊಲೀಸರು ದಾಖಲೆಗಳನ್ನು ತೋರಿಸಿದಾಗ ಆಘಾತಕ್ಕೊಳಗಾಗಿದ್ದಾರೆ.

ಮುತ್ತನಲ್ಲೂರು ಕ್ರಾಸ್‌ನಲ್ಲಿರುವ ಅಂಗಡಿಯೊಂದರಲ್ಲಿ ಸಿಮ್ ಕಾರ್ಡ್ ಪಡೆಯಲು ಪುನೀತ್ ಅವರ 2009ರ ಮತದಾರರ ಗುರುತಿನ ಚೀಟಿಯನ್ನು ಬಳಸಲಾಗಿತ್ತು. ಆದರೆ, ಆ ಕಾರ್ಡ್‌ನಲ್ಲಿದ್ದ ವಿಳಾಸ ಪುನೀತ್ ಅವರದ್ದಾಗಿದ್ದರೂ, ಫೋಟೋ ಮಾತ್ರ ಆರೋಪಿಯದ್ದಾಗಿತ್ತು.

ತಮ್ಮ ದಾಖಲೆಗಳನ್ನು ಬಳಸಿಕೊಂಡು ಕ್ರಿಮಿನಲ್ ಕೃತ್ಯ ಎಸಗಿರುವುದರ ವಿರುದ್ಧ ಪುನೀತ್ ಈಗ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ವ್ಯಕ್ತಿತ್ವದ ವಂಚನೆ (Cheating by personation) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್​ ಟ್ವಿಸ್ಟ್: TVK ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ; DMK ಮೈತ್ರಿಗೆ ಭಾರಿ ಶಾಕ್, ಹೊಸ ಮೈತ್ರಿ ಸರ್ಕಾರ ಅಧಿಕಾರಕ್ಕೆ..!

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ 2 ಸ್ಥಾನಕ್ಕೆ 'ಕೈ' ಬೇಡಿಕೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

ಸಿಎಂ ಹುದ್ದೆ ತ್ಯಾಗಕ್ಕೆ ಸಿದ್ದರಾಮಯ್ಯ ಸಿದ್ದ: ಹೈಕಮಾಂಡ್ ಆದೇಶಕ್ಕೆ ಪರಮೇಶ್ವರ್ ಬದ್ಧ; ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದಿದ್ದೇಕೆ ಖರ್ಗೆ?

ಸೋಲು ಬಳಿಕವೂ ಹಠಕ್ಕೆ ಬಿದ್ದ ಮಮತಾ ಬ್ಯಾನರ್ಜಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ಎಂದು ಜೇಠ್ಮಲಾನಿ ಕಿಡಿ

ಹೈಕಮಾಂಡ್ ಕರೆದ ತಕ್ಷಣ ದೆಹಲಿಗೆ ಪ್ರಯಾಣ: 2028 ರಲ್ಲೂ ನಮ್ಮದೇ ಸರ್ಕಾರ ಫಿಕ್ಸ್; ಸಿಎಂ ಸಿದ್ದರಾಮಯ್ಯ

SCROLL FOR NEXT