ಕಾರ್ತಿಕ್ ಸಿಂಗ್ ಪರಿಹಾರ್ 
ರಾಜ್ಯ

ಬ್ಯಾಚುಲರ್ಸ್‌ಗಳಿಗೂ ಬೆಂಗಳೂರು ಬಲು ದುಬಾರಿ: ತಿಂಗಳ ಕನಿಷ್ಠ ಖರ್ಚುವೆಚ್ಚ ವಿವರಿಸಿದ ಅಮೆಜಾನ್ ಉದ್ಯೋಗಿ; Video viral

ಇದೀಗ ಬ್ಯಾಚುಲರ್ಸ್‌ಗೆಳಿಗೂ ಬೆಂಗಳೂರು ಬಲು ದುಬಾರಿಯಾಗಿದ್ದು, ಅಮೆಜಾನ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ತಿಂಗಳ ಖರ್ಚಿನ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೀವನ ಅತ್ಯಂತ ದುಬಾರಿ. ಮನೆ ಬಾಡಿಗೆ ಹಾಗೂ ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರು ಜೀವನ ನಡೆಸಲು ಪರದಾಡುವಂತಹ ಸ್ಥಿತಿ ಎದುರಾಗಿದೆ.

ಇದೀಗ ಬ್ಯಾಚುಲರ್ಸ್‌ಗೆಳಿಗೂ ಬೆಂಗಳೂರು ಬಲು ದುಬಾರಿಯಾಗಿದ್ದು, ಅಮೆಜಾನ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ತಿಂಗಳ ಖರ್ಚಿನ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ ಮತ್ತು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಅಮೆಜಾನ್ ಉದ್ಯೋಗಿಯೊಬ್ಬರು ನಗರದಲ್ಲಿ "ಯೋಗ್ಯ ಜೀವನ" ನಿರ್ವಹಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದರ ವಿವರವಾದ ಅಂದಾಜನ್ನು ಹಂಚಿಕೊಂಡಿದ್ದಾರೆ.

ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ 26 ವರ್ಷದ ಅವಿವಾಹಿತ ಕಾರ್ತಿಕ್ ಸಿಂಗ್ ಪರಿಹಾರ್, ತಮ್ಮ ತಿಂಗಳ ಖರ್ಚು ವೆಚ್ಚ 51,000 ರೂ. ಆಗಿದ್ದು, ಕನಿಷ್ಠ ಇಷ್ಟು ಬೇಕೆ ಬೇಕು ಎಂದು ಹೇಳಿದ್ದಾರೆ.

ಪರಿಹಾರ್ ಪ್ರಸ್ತುತ HSR ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 1ಬಿಎಚ್ ಕೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, 20,000 ರೂ ಬಾಡಿಗೆ ಪಾವತಿಸುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಇತರ ಪ್ರದೇಶಗಳಿಗೆ ಭೇಟಿ ನೀಡಿದ ನಂತರ, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೀಡುವ ಪ್ರತಿಯೊಂದು ರೂಪಾಯಿಗೂ ಬೆಲೆಯಿದೆ ಎಂದು ನನಗನಿಸುತ್ತಿದೆ" ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ, ಸೋಫಾ, ಫ್ರಿಡ್ಜ್ ಮತ್ತು ಹಾಸಿಗೆಯಂತಹ ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಬಾಡಿಗೆಗೆ ಪಡೆದಿದ್ದು, ಅದಕ್ಕಾಗಿ ತಿಂಗಳಿಗೆ 4,000 ರೂ. ಖರ್ಚು ಮಾಡುತ್ತಿದ್ದಾರೆ.

ಆಹಾರದ ವೆಚ್ಚದ ಬಗ್ಗೆ ವಿವರಿಸಿರುವ ಅವರು, ಪ್ರತಿದಿನ ಒಂದು ಹೊತ್ತಿನ ಊಟವನ್ನು ತಾವೇ ಬೇಯಿಸಿಕೊಳ್ಳುತ್ತಾರೆ. ದಿನಸಿಗಾಗಿ ವಾರಕ್ಕೆ 1,000 ರೂ. ಅಂದರೆ ತಿಂಗಳಿಗೆ 4,000 ರೂ. ಖರ್ಚಾಗುತ್ತದೆ. ಕಚೇರಿಯ ದಿನಗಳಲ್ಲಿ ಮಧ್ಯಾಹ್ನದ ಊಟ ಮತ್ತು ಸ್ನ್ಯಾಕ್ಸ್‌ಗಾಗಿ ದಿನಕ್ಕೆ 250 ರೂ.ನಂತೆ ತಿಂಗಳಿಗೆ 5,000 ರೂ. ವ್ಯಯಿಸುತ್ತಾರೆ. ಇನ್ನು ವಾರಾಂತ್ಯದಲ್ಲಿ ಒಮ್ಮೆ ಅಥವಾ ಎರಡು ಬಾರಿ ಹೊರಗಡೆ ಊಟ ಮಾಡುವುದರಿಂದ ತಿಂಗಳಿಗೆ 4,000 ರೂ. ಹೆಚ್ಚುವರಿ ವೆಚ್ಚವಾಗುತ್ತದೆ ಎಂದಿದ್ದಾರೆ.

ಕಾರ್ತಿಕ್ ಪರಿಹಾರ್ ಬಳಿ ಹೋಂಡಾ CB350 ಬೈಕ್ ಇದ್ದು, ಪ್ರತಿದಿನ 4-5 ಕಿ.ಮೀ ಪ್ರಯಾಣಿಸುತ್ತಾರೆ. ಇದಕ್ಕೆ ತಿಂಗಳಿಗೆ 1,500 ರೂ. ಪೆಟ್ರೋಲ್ ಖರ್ಚಿದೆ. ಜಿಮ್ ಸದಸ್ಯತ್ವಕ್ಕಾಗಿ ವಾರ್ಷಿಕ 16,000 ರೂ. ಪಾವತಿಸಿದ್ದು, ತಿಂಗಳ ಲೆಕ್ಕದಲ್ಲಿ ಇದು 1,300 ರೂ. ಆಗುತ್ತದೆ. ತಿಂಗಳಿಗೆ 10,000 ರೂ. ಮೌಲ್ಯದ ಪ್ರೋಟೀನ್ ಸಪ್ಲಿಮೆಂಟ್ ಬಳಸಿದರೂ, ಪ್ರಾಯೋಜಕತ್ವ ಇರುವ ಕಾರಣ ಅದು ಅವರಿಗೆ ಉಚಿತವಾಗಿ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ

ಮಿಸ್ ಆಯ್ತು ಸಚಿವ ಸ್ಥಾನ; ‘ಶಕ್ತಿ ಪ್ರದರ್ಶನ’ಕ್ಕೆ ಸಜ್ಜಾದ ಸಿದ್ದರಾಮಯ್ಯ ಆಪ್ತರು! ಮೈಸೂರಿನಲ್ಲಿ ‘ಅಸಮಾಧಾನ’ ಸಭೆ!