ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು ಉಪ ನಗರ ರೈಲು ಯೋಜನೆ: 153 ರೈಲು ಬೋಗಿಗಳಿಗೆ 1,513 ಕೋಟಿ ರೂ ಮೊತ್ತದ ವರ್ಕ್ ಆರ್ಡರ್ ನೀಡಿದ K-RIDE!

ಕಳೆದ ಡಿಸೆಂಬರ್‌ನಲ್ಲಿ ನಡೆದ ಪ್ರಧಾನಿಯವರ 'ಪ್ರಗತಿ' ಪರಿಶೀಲನಾ ಸಭೆಯಲ್ಲಿ ಹೊರಡಿಸಲಾದ ನಿರ್ದೇಶನಗಳೊಂದಿಗೆ ಸಮಯ ನಿಗದಿಪಡಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಗಾಗಿ 153 ಹವಾನಿಯಂತ್ರಿತ ಬ್ರಾಡ್-ಗೇಜ್ ಮೆಟ್ರೋ-ಮಾದರಿಯ ಬೋಗಿಗಳ ಖರೀದಿಗಾಗಿ 1,513.75 ಕೋಟಿ ರೂ.ಮೊತ್ತದ ವರ್ಕ್ ಆರ್ಡರ್ ನ್ನು ಯೋಜನೆ ಅನುಷ್ಟಾನಗೊಳಿಸುತ್ತಿರುವ ಕೆ-ರೈಡ್‌ನ ಅಂಗಸಂಸ್ಥೆಯಾದ Bi-RIDE ನೀಡಿದೆ.

ಮೇ 6 ರಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ 18 ತಿಂಗಳೊಳಗೆ ಬೋಗಿಗಳ ಪೂರೈಕೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಕಾರಿಡಾರ್ -2 ರ ಅಡಿಯಲ್ಲಿ ಚಿಕ್ಕಬಾಣಾವರ-ಯಶವಂತಪುರ ವಿಭಾಗದ ಉದ್ಘಾಟನೆ ದಿನಕ್ಕೆ ಅನುಕೂಲವಾಗುವಂತೆ ಬೋಗಿಗಳನ್ನು ಪೂರೈಸುವಂತೆ ಸೂಚಿಸಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಪ್ರಧಾನಿಯವರ 'ಪ್ರಗತಿ' ಪರಿಶೀಲನಾ ಸಭೆಯಲ್ಲಿ ಹೊರಡಿಸಲಾದ ನಿರ್ದೇಶನಗಳೊಂದಿಗೆ ಸಮಯ ನಿಗದಿಪಡಿಸಲಾಗಿದೆ.

ಈ ಒಪ್ಪಂದ ಬೋಗಿಗಳ ವಿನ್ಯಾಸ, ಉತ್ಪಾದನೆ, ಪರಿಶೀಲನೆ, ಪರೀಕ್ಷೆ, ಏಕೀಕರಣ ಮತ್ತು ಕಾರ್ಯಾರಂಭವನ್ನು ಒಳಗೊಂಡಿದೆ. ರೈಲುಗಳ ಬ್ರೇಕ್‌ಗಳು, ಚಕ್ರಗಳು, ಮತ್ತು ಬೋಗಿಗಳ ಸ್ಥಿತಿಯನ್ನು ಪರಿಶೀಲಿಸುವ ರೋಲಿಂಗ್ ಸ್ಟಾಕ್ ಪರೀಕ್ಷೆ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ICF ಹೊಂದಿದೆ.

ಈ ಕುರಿತು ಮಾಹಿತಿ ನೀಡಿದ ಕೆ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಲಕ್ಷ್ಮಣ್ ಸಿಂಗ್, ಈ ವರ್ಕ್ ಆರ್ಡರ್ ಯೋಜನೆಗೆ ಒಂದು ಮೈಲಿಗಲ್ಲು. ಐಸಿಎಫ್‌ನೊಂದಿಗಿನ ಈ ಪಾಲುದಾರಿಕೆಯ ಮೂಲಕ, ಕಾರಿಡಾರ್‌ಗಳು 2 ಮತ್ತು 4 ಗಾಗಿ ಟ್ರ್ಯಾಕ್ ಮತ್ತು ಸಿಸ್ಟಮ್ಸ್ ಮೂಲಸೌಕರ್ಯ ಕೆಲಸ ಪೂರ್ಣಗೊಳ್ಳುವ ಹೊತ್ತಿಗೆ ಅಗತ್ಯವಿರುವ ರೈಲು ಬೋಗಿಗಳು ಲಭ್ಯವಿರುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಎಂದರು.

ಬೋಗಿಗಳ ಖರೀದಿಗೆ ವರ್ಕ್ ಆರ್ಡರ್ ನಿಂದ ಬೆಂಗಳೂರಿನ ನಾಗರಿಕರಿಗೆ ಯಾವುದೇ ವಿಳಂಬವಿಲ್ಲದೆ ವಿಶ್ವ ದರ್ಜೆಯ ಉಪನಗರ ರೈಲು ಯೋಜನೆ ಅನುಷ್ಟಾನಕ್ಕೆ ನೆರವಾಗಲಿದೆ. ಈ ಯೋಜನೆ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಕೆ-ರೈಡ್ ಮತ್ತು ಐಸಿಎಫ್ ನಡುವೆ ಅಧಿಕೃತ ತಿಳುವಳಿಕೆ ಒಪ್ಪಂದ (ಎಂಒಯು) ಶೀಘ್ರದಲ್ಲೇ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?