ರಾಜ್ಯ

ಕೊಡಗು: ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾಳಗ; ಮಹಿಳೆ ಸಾವು!

ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಲು ಶುರು ಮಾಡಿದಾಗ, ಅಲ್ಲಿ ಇದ್ದ ಪ್ರವಾಸಿಗರು ಭಯಪಟ್ಟು ಓಡಲು ಪ್ರಯತ್ನಿಸಿದ್ದಾರೆ.

ಕೊಡಗು: ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಭೀಕರ ಆನೆ ಕಾಳಗ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ದುರ್ಘಟನೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಕುಟುಂಬದ ಮಹಿಳೆಯೊಬ್ಬರ ಜೀವ ಕಸಿದುಕೊಂಡಿದೆ.

ಚೆನ್ನೈ ಮೂಲದ ಜಿನ್ಶು (33) ಎಂಬ ಮಹಿಳೆ ಮದಗಜಗಳ ಕಾದಾಟಕ್ಕೆ ಸಿಲುಕಿ ಬಲಿಯಾಗಿರುವ ದುರ್ದೈವಿಯಾಗಿದ್ದಾರೆ. ಆನೆಗಳಿಗೆ ಸ್ನಾನ ಮಾಡಿಸುವ ಸಂದರ್ಭ ಅವುಗಳಿಗೆ ಆಹಾರ ಕೊಡುವುದು ಪ್ರವಾಸಿಗರಿಗೆ ಖುಷಿ ಕೊಡುವ ಸಂಗತಿ. ಇದೇ ರೀತಿ ತಮಿಳುನಾಡಿನಿಂದ ಬಂದಿದ್ದ ಜಿನ್ಶು ಸಹ "ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದಾಗ ಆಹಾರ ಕೊಡುವುದಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿ ಪಳಗಿಸಿದ್ದ 2 ಆನೆಗಳು ಏಕಾಏಕಿ ಕಾದಾಟ ಆರಂಭಿಸಿವೆ. ಆನೆಗಳ ಕಾಳಗದಿಂದ ಅಲ್ಲಿ ಗೊಂದಲ ಉಂಟಾಗಿತ್ತು.

ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಲು ಶುರು ಮಾಡಿದಾಗ, ಅಲ್ಲಿ ಇದ್ದ ಪ್ರವಾಸಿಗರು ಭಯಪಟ್ಟು ಓಡಲು ಪ್ರಯತ್ನಿಸಿದ್ದಾರೆ. ಈ ಗೊಂದಲದ ನಡುವೆ ಜಿನ್ಶು ಅವರು ಕೂಡ ಆತಂಕದಿಂದ ಓಡುವ ವೇಳೆ ಸಮತೋಲನ ಕಳೆದುಕೊಂಡು ನೀರಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸುವುದು ಕಷ್ಟವಾಯಿತು. ನೀರಿನಲ್ಲಿ ಬಿದ್ದ ಜಿನ್ಶು ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ನೀರಿಗೆ ಇಳಿದು ಅವರನ್ನು ಹೊರತೆಗೆಯಲು ಪ್ರಯತ್ನುಸಿದ್ದಾರೆ. ಜಿನ್ಶು ಅವರನ್ನು ನದಿಯಿಂದ ಹೊರಗೆ ತಂದು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ ಆಕೆ ಬದುಕುಳಿಯಲಿಲ್ಲ. ಈ ಘಟನೆ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂತರ ಕಾಯ್ದುಕೊಳ್ಳಲು ಸಚಿವರ ಸೂಚನೆ

ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳೆಯರಿಗೆ ಬಂಪರ್ ಗಿಫ್ಟ್: ಮೊದಲ ಸಂಪುಟ ಸಭೆಯಲ್ಲೇ ಉಚಿತ ಬಸ್ ಪ್ರಯಾಣ, ಆಶಾ ವೇತನ ಹೆಚ್ಚಳಕ್ಕೆ ಕೇರಳ ಅನುಮೋದನೆ

ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ: ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ..!

"ಜಾಮೀನು ಸಾಮಾನ್ಯ ನಿಯಮ; ಜೈಲು ವಿನಾಯಿತಿ ತತ್ವ UAPA ಪ್ರಕರಣಗಳಿಗೂ ಅನ್ವಯ": ಉಗ್ರ ಆರೋಪಿಗೆ ಜಾಮೀನು ನೀಡಿದ 'ಸುಪ್ರೀಂ'

NEET ಪ್ರತಿಭಟನೆ ಸಂಬಂಧ ಕರೆಯಲಾಗಿದ್ದ ಸಭೆ ರಣಾಂಗಣ: ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ!

KSRTC-BMTC Strike: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; 'ನೋ ವರ್ಕ್ ನೋ ಪೇ' ನಿಯಮ ಜಾರಿಗೆ ಸರ್ಕಾರ ಮುಂದು, ಕಠಿಣ ಕ್ರಮದ​​ ಎಚ್ಚರಿಕೆ..!

SCROLL FOR NEXT