ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ವಿವಸ್ತ್ರಗೊಳಿಸಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಮೇಲೆ ಹಲ್ಲೆ; ಹಲವರ ಬಂಧನ

ಮೊಟ್ಟಪ್ಪನಪಾಳ್ಯದ ಧರ್ಮರಾಯ ದೇವಸ್ಥಾನದ ಬಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಐಷಾರಾಮಿ ಜೆಂಟ್ಸ್ ಪೇಯಿಂಗ್ ಗೆಸ್ಟ್ ನಲ್ಲಿದ್ದ ಎಸ್.ಸೂರಜ್ ರೈ ಸಂತ್ರಸ್ತ ವ್ಯಕ್ತಿ.

ಬೆಂಗಳೂರು: ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಥಳಿಸಿ, ವಿವಸ್ತ್ರಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಂಗಳವಾರ ಬೆಳಗಿನ ಜಾವ 1.30 ರ ಸುಮಾರಿಗೆ ಇಂದಿರಾನಗರದಲ್ಲಿರುವ ಪುರುಷರ ಪೇಯಿಂಗ್ ಗೆಸ್ಟ್ (ಪಿಜಿ) ನಲ್ಲಿ 25 ವರ್ಷದ ವ್ಯಕ್ತಿಯ ಮೇಲೆ 10 ಸದಸ್ಯರ ತಂಡವೊಂದು ಹಲ್ಲೆ ನಡೆಸಿದೆ.

ಮೊಟ್ಟಪ್ಪನಪಾಳ್ಯದ ಧರ್ಮರಾಯ ದೇವಸ್ಥಾನದ ಬಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಐಷಾರಾಮಿ ಜೆಂಟ್ಸ್ ಪೇಯಿಂಗ್ ಗೆಸ್ಟ್ ನಲ್ಲಿದ್ದ ಎಸ್.ಸೂರಜ್ ರೈ ಸಂತ್ರಸ್ತ ವ್ಯಕ್ತಿ. ಪೊಲೀಸ್ ಮೂಲಗಳ ಪ್ರಕಾರ, ಎರಡು ಮೊಬೈಲ್ ಫೋನ್‌ಗಳನ್ನು ಕದ್ದಿದ್ದಾನೆಂದು ಶಂಕಿಸಿ ತಂಡವು ಕೇಬಲ್‌ಗಳು ಮತ್ತು ಚರ್ಮದ ಬೆಲ್ಟ್‌ಗಳಿಂದ ಅವರ ಮೇಲೆ ಹಲ್ಲೆ ನಡೆಸಿದೆ.

ಮೊಬೈಲ್ ಫೋನ್‌ಗಳನ್ನು ಕದ್ದಿರುವ ಶಂಕೆಯ ಮೇಲೆ ವ್ಯಕ್ತಿಗೆ ಚಿತ್ರಹಿಂಸೆ ನೀಡಲಾಗಿದೆ. ರೈ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಂದಿರಾನಗರದ 100-ಅಡಿ ರಸ್ತೆಯಲ್ಲಿರುವ ಜನಪ್ರಿಯ ಬ್ರೂವರಿ ಮತ್ತು ರೆಸ್ಟೊ ಬಾರ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಎರಡು ತಿಂಗಳ ಹಿಂದೆ ತಮ್ಮ ಕೆಲಸವನ್ನು ತೊರೆದು 10 ದಿನಗಳ ಹಿಂದೆ ಪೇಯಿಂಗ್ ಗೆಸ್ಟ್ ನಲ್ಲಿದ್ದರು.

ಆರೋಪಿಗಳು ಸಹ ಅದೇ ಪಿಜಿಯಲ್ಲಿ ವಾಸಿಸುತ್ತಿದ್ದು, ಇಂದಿರಾನಗರದ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.ಆರೋಪಿಗಳಲ್ಲಿ ಚಾನ್ ಕೋ ಮತ್ತು ಬಿಶಾಲ್ ಸುರೇಶ್ ಎಂಬ ಇಬ್ಬರು ಆರೋಪಿಗಳ ಮೊಬೈಲ್ ಫೋನ್‌ಗಳು ಕಳುವಾಗಿದ್ದವು. ಸೂರಜ್ ರೈ ಮೊಬೈಲ್ ಕದ್ದಿದ್ದಾನೆಂದು ಶಂಕಿಸಿ, ಆರೋಪಿಗಳು ಇತರರೊಂದಿಗೆ ಅವರನ್ನು ಹಿಂಸಿಸಿದ್ದಾರೆ ಎಂದು ವರದಿಯಾಗಿದೆ.

ಸೂರಜ್ ನನ್ನು ವಿವಸ್ತ್ರಗೊಳಿಸಿದ ನಂತರ, ಆರೋಪಿಗಳು ಪಿಜಿಯ 5 ನೇ ಮಹಡಿಯಲ್ಲಿರುವ ಅವರ ಕೋಣೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆತನ ಕೈ ಮತ್ತು ಕಾಲುಗಳನ್ನು ಕಟ್ಟಿ, ಮೊಬೈಲ್ ಫೋನ್‌ಗಳನ್ನು ಹಿಂತಿರುಗಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಫೋನ್‌ಗಳನ್ನು ಕದ್ದಿಲ್ಲ ಎಂದು ಬೇಡಿಕೊಂಡರೂ, ಕೇಬಲ್‌ಗಳು ಮತ್ತು ಚರ್ಮದ ಬೆಲ್ಟ್‌ಗಳಿಂದ ಹಲ್ಲೆ ಮಾಡಿದ್ದಾರೆ. ಕೇಬಲ್‌ನಿಂದ ಅವರ ಕತ್ತು ಹಿಸುಕಲು ಪ್ರಯತ್ನಿಸಿದ್ದಾರೆ.

ಆರೋಪಿಗಳು ತಮ್ಮ ಕೋಣೆಗಳಿಗೆ ಹೋದ ನಂತರ, ರಕ್ತಸ್ರಾವದ ಗಾಯಗಳಿಂದ ಬಳಲುತ್ತಿದ್ದ ರೈ, ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಪಿಜಿಯಲ್ಲಿರುವ ತನ್ನ ಸ್ನೇಹಿತನ ಸಹಾಯದಿಂದ, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಪರಾಸ್, ಭುವನ್, ಸಂತು, ರಾಣಾ ಮತ್ತು ಮಾಧವ್ ಇತರ ಆರೋಪಿಗಳು. ಅವರಲ್ಲಿ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಆಸ್ಪತ್ರೆಯಲ್ಲಿ ರೈ ಹೇಳಿಕೆಯನ್ನು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ತೀವ್ರ ಲಾಬಿ: ಕಾಂಗ್ರೆಸ್ ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಬೀಡುಬಿಟ್ಟ ಹಲವು ಶಾಸಕರು!

ಮೇ. 31ರಂದು IPL Final: ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಲಗಾಮು; ಮಾರ್ಗಸೂಚಿ ಪ್ರಕಟಿಸಿದ ಪೊಲೀಸರು!

IPL 2026: ಗಿಲ್ ಸ್ಫೋಟಕ ಶತಕ; RR ವಿರುದ್ಧ GT ರೋಚಕ ಗೆಲುವು; ಫೈನಲ್​​ಗೆ ಎಂಟ್ರಿ

ಬೆಂಗಳೂರಿನಲ್ಲಿ ವರುಣಾರ್ಭಟ: ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು

'ನ್ಯೂಕ್ಲಿಯರ್ ಬಾಂಬ್' ಹೊಂದುವಂತಿಲ್ಲ, ಕೂಡಲೇ ಹಾರ್ಮುಜ್ ಜಲಸಂಧಿ ಓಪನ್ ಮಾಡ್ಬೇಕು: ಇರಾನ್ ಗೆ ಟ್ರಂಪ್ ಷರತ್ತು!

SCROLL FOR NEXT