ಪ್ರಿಯಾಂಕ್ ಖರ್ಗೆ 
ರಾಜ್ಯ

ಸಚಿವ ಸಂಪುಟ ರಚನೆಗೆ ಭಾರೀ ಕಸರತ್ತು: ಪ್ರಿಯಾಂಕ್ ಖರ್ಗೆಗೆ DCM ಸ್ಥಾನ ನೀಡಲು ಒತ್ತಾಯ!

ನಮ್ಮ ಪ್ರಿಯಾಂಕ್ ಖರ್ಗೆ ಸಾಹೇಬ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಪಕ್ಷ ಬಲಗೊಳ್ಳುತ್ತದೆ. ವಿರೋಧ ಪಕ್ಷಗಳು ನಮ್ಮ ಪಕ್ಷದ ಮೇಲೆ ದಾಳಿ ಮಾಡಿದಾಗ ತಕ್ಷಣ ಪ್ರತಿಕ್ರಿಯಿಸುವ ವ್ಯಕ್ತಿ ಪ್ರಿಯಾಂಕ್ ಖರ್ಗೆ" ಎಂದು ಗುತ್ತೇದಾರ್ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಯ ಕಸರತ್ತು ನಡೆಯುತ್ತಿರುವಂತೆಯೇ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.

ANI ಜೊತೆ ಮಾತನಾಡಿದ ಕಾಂಗ್ರೆಸ್ ಎಂಎಲ್‌ಸಿ ಜಗದೇವ್ ಗುತ್ತೇದಾರ್, ವಿರೋಧ ಪಕ್ಷದ ದಾಳಿಯಿಂದ ಪಕ್ಷವನ್ನು ನಿರಂತರವಾಗಿ ಸಮರ್ಥಿಸಿಕೊಳ್ಳುವ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇದರಿಂದ ರಾಜ್ಯದಲ್ಲಿ ಪಕ್ಷ ಬಲಗೊಳ್ಳುತ್ತದೆ ಎಂದು ಒತ್ತಾಯಿಸಿದರು.

ನಮ್ಮ ಪ್ರಿಯಾಂಕ್ ಖರ್ಗೆ ಸಾಹೇಬ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಪಕ್ಷ ಬಲಗೊಳ್ಳುತ್ತದೆ. ವಿರೋಧ ಪಕ್ಷಗಳು ನಮ್ಮ ಪಕ್ಷದ ಮೇಲೆ ದಾಳಿ ಮಾಡಿದಾಗ ತಕ್ಷಣ ಪ್ರತಿಕ್ರಿಯಿಸುವ ವ್ಯಕ್ತಿ ಪ್ರಿಯಾಂಕ್ ಖರ್ಗೆ" ಎಂದು ಗುತ್ತೇದಾರ್ ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ , ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು, ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆ ಬಗ್ಗೆ ತಿಳಿಸಿದ್ದಾರೆ.

ಈ ಮಧ್ಯೆ ವಿರೋಧ ಪಕ್ಷ ಬಿಜೆಪಿ ಕಾಂಗ್ರೆಸ್ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ "ಒಳಜಗಳ ರಾಜ್ಯದಲ್ಲಿ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇಕೆದಾಟು ಯೋಜನೆಗೆ ಸಿಕ್ಕಿತು ಕೇಂದ್ರದ ಬಲ; ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಎಂದ ಜಲಶಕ್ತಿ ಸಚಿವಾಲಯ

ಮರಳು ಮಾಫಿಯಾ ಹೆಡೆಮುರಿ ಕಟ್ಟಲು ಸರ್ಕಾರ ನಿರ್ಧಾರ; ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ..!

VB-G RAM G ಯೋಜನೆಗೆ ಹಣದ ಕೊರತೆಯೇ ಇಲ್ಲ, ಗ್ರಾಮೀಣ ಉದ್ಯೋಗಕ್ಕೆ 2,900 ಕೋಟಿ ರೂ. ಬಿಡುಗಡೆ: ರಾಜ್ಯ ಸರ್ಕಾರ

ಮೇಕೆದಾಟು ಯೋಜನೆಗೆ ಸಮ್ಮತಿ ಅಗತ್ಯವೇ ಇಲ್ಲ: ಕರ್ನಾಟಕದ ಹಕ್ಕು ಪುನರುಚ್ಚರಿಸಿದ ಕೇಂದ್ರ ಸರ್ಕಾರ ಡಿಕೆಶಿ ಧನ್ಯವಾದ

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ; ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ: ಆರ್. ಅಶೋಕ್ ಆರೋಪ