ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್ Online Desk
ರಾಜ್ಯ

ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್? ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ್ದಾರೆ. ಆರೋಪಿ ಜೊತೆಗೆ ಅವರಿಗೆ ಲಿಂಕ್ ಇರುವ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು, ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ್ದಾರೆ. ಆರೋಪಿ ಜೊತೆಗೆ ಅವರಿಗೆ ಲಿಂಕ್ ಇರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೇ ಮಾಹಿತಿ ಬಿಚ್ಚಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಮಿಷನರ್ ಏನಂದ್ರು?

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸದಲ್ಲಿ ಆರೋಪಿ ರಿತೇಶ್ ಪಾಂಡೆ ಉಳಿದುಕೊಂಡಿದ್ದ. ಈ ವೇಳೆ, ಮೊಬೈಲ್ ಎಕ್ಸ್‌ಚೇಂಜ್ ನಡೆದಿದ್ದು, ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೋ ಅಪ್ಲೋಡ್ ಆಗಿದೆ. ಜೊತೆಗೆ, ವಿಡಿಯೋ ಅಪ್ಲೋಡ್ ಮಾಡಲು ಬಳಸಲಾದ ಮೊಬೈಲ್ ಅನ್ನು ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಸೆಪ್ಟೆಂಬರ್ 26 ರಂದು ದೆಹಲಿಯಲ್ಲಿ ಖರೀದಿಸಿದ್ದರು ಎಂದು ತಿಳಿಸಿದರು.

ಏತನ್ಮಧ್ಯೆ, ಸಿಮ್ ಕಾರ್ಡ್ ಬಳಸಿ ವಿಡಿಯೋ ಅಪ್ಲೋಡ್ ಮಾಡುವ ಯೋಜನೆ ಇರಲಿಲ್ಲ; ಹಾಗಾಗಿ ವಿಡಿಯೋ ಅಪ್ಲೋಡ್ ಮಾಡಿದಾಗ ಮೊಬೈಲ್‌ನಲ್ಲಿ ಯಾವುದೇ ಸಿಮ್ ಕಾರ್ಡ್ ಇರಲಿಲ್ಲ. ಆದರೂ ಸಿಸಿಬಿ ಪೊಲೀಸರು ಮೊಬೈಲ್ ಖರೀದಿ ಜಾಲವನ್ನು ಪತ್ತೆಹಚ್ಚಿದ್ದಾರೆ. ಜೊತೆಗೆ, ಇವರಿಬ್ಬರ ರಿತೇಶ್ ಮತ್ತು ಪ್ರಜ್ವಲ್ ಪ್ರಸಾದ್ ನಡುವೆ ಹಣ ವರ್ಗಾವಣೆ ನಡೆದಿದ್ದು, ವಿಚಾರಣೆ ವೇಳೆ ಆರೋಪಿ ರಿತೇಶ್ ಕುಮಾರ್, ಪ್ರಜ್ವಲ್ ಪ್ರಸಾದ್ ಸೂಚನೆ ಮೇರೆಗೆ ಮೊಬೈಲ್ ಖರೀದಿಸಿದ್ದು, ಕೇಂದ್ರ ಸಚಿವರ ಮನೆ ಬಳಿ ಬರುವಂತೆ ಹೇಳಿದ ಕಾರಣ ಅಲ್ಲಿ ಮೊಬೈಲ್ ಹಸ್ತಾಂತರಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಹಾಗಾಗಿ, ಸಿಸಿಬಿ ಪೊಲೀಸರು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಪ್ರಜ್ವಲ್ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಅದರಂತೆ, ಪ್ರಜ್ವಲ್ ಅವರ ಹೇಳಿಕೆ ದಾಖಲಿಸಿಕೊಂಡ ನಂತರ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Google Lens ಬಳಸಿ ರಾಜ್ಯಕ್ಕೆ ಟಾಪರ್! VAO ಪರೀಕ್ಷೆಯಲ್ಲಿ 151 ಮಾರ್ಕ್ಸ್ ಪಡೆದಿದ್ದ ಶಂಕರ ಬನ್ನೂರ ಕಳ್ಳಾಟ ಬಯಲು, ಪೊಲೀಸ್ ವಶಕ್ಕೆ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿಸಿದ್ದು ಕುಮಾರಸ್ವಾಮಿಯೇ! ಡಿಕೆಶಿ ಸಿಎಂ ಆಗಿರೋದನ್ನ ಸಹಿಸಲಾಗದೆ ಹೆಚ್‌ಡಿಕೆ ಪಿತೂರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಗಂಭೀರ ಆರೋಪ

ಅಮಾನವೀಯ ಕೃತ್ಯ: ನೆರೆಮನೆಯವರ ಜೊತೆ ಜಗಳ, ಹಸು ಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ಕಿಡಿಗೇಡಿ!

ಕನ್ನಡ ಬಾವುಟದ ವಿನ್ಯಾಸ ಬದಲು: ಹಳದಿ-ಕೆಂಪು ಕನ್ನಡ ಧ್ವಜಕ್ಕೆ ಮತ್ತೊಂದು ಬಣ್ಣ, ಮಧ್ಯದಲ್ಲಿ ರಾಜ್ಯ ಲಾಂಛನ; ಡಿಕೆಶಿ ಮಹತ್ವದ ಘೋಷಣೆ

71ನೇ ಕನ್ನಡ ರಾಜ್ಯೋತ್ಸವ: ನಾಡದೇವತೆ ಭುವನೇಶ್ವರಿಗೆ ಪುಷ್ಪಾರ್ಚನೆ; ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆ.ಶಿವಕುಮಾರ್