ಡಿಕೆ ಶಿವಕುಮಾರ್ 
ರಾಜ್ಯ

Nandini ದರ ಏರಿಕೆ ವಿರುದ್ಧ ಜನಾಕ್ರೋಶಕ್ಕೆ ಮಣಿದ ಸರ್ಕಾರ: ಮೊಸರು ಬೆಲೆ ಕಡಿತಕ್ಕೆ ಸಿಎಂ ಶಿವಕುಮಾರ್ ಸೂಚನೆ!

ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತಿದೆ. ನಂದಿನಿ ಮೊಸರಿನ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತಿದೆ. ನಂದಿನಿ ಮೊಸರಿನ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇತ್ತೀಚಿನ ಬೆಲೆ ಏರಿಕೆ ಜನರಿಗೆ ಹೆಚ್ಚು ಹೊರೆಯಾಗುತ್ತಿದೆ. ಹಾಲು ಮತ್ತು ಮೊಸರು ದೈನಂದಿನ ಬಳಕೆಯ ಅಗತ್ಯ ವಸ್ತುವಾಗಿದ್ದು ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರದ ಮೇಲೆ ಬೆಲೆ ಇಳಿಸುವಂತೆ ಒತ್ತಡ ಹೆಚ್ಚಾಗಿದೆ. ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಶಿವಕುಮಾರ್ ಮೊಸರಿನ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಸ್ತಾಪವಿಲ್ಲ. ಆದರೆ ನಂದಿನಿ ಮೊಸರಿನ ಬೆಲೆಯನ್ನು ಸ್ವಲ್ಪ ಇಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಲೀಟರ್ ಮೊಸರಿಗೆ 14 ರೂ. ಹೆಚ್ಚಿಸಿದ್ದನ್ನು 12 ರೂ.ಗೆ ಇಳಿಕೆ ಮಾಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಅರ್ನಬ್' ಚಂಡಮಾರುತ ಪೀಡಿತ ಆಂಧ್ರಕ್ಕೆ ನೆರವಿನ ಹಸ್ತ: ಆಂಧ್ರ ಜನರೊಂದಿಗೆ ದೃಢವಾಗಿ ನಿಲ್ಲುತ್ತವೆ - ಸಿಎಂ ಶಿವಕುಮಾರ್

'ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ, ಇಮೇಜ್​​ಗೆ ಧಕ್ಕೆ ಆದ್ರೆ ಚುನಾವಣೆ ಪ್ರಚಾರಕ್ಕೆ ಬರಲ್ಲ': ರಾಹುಲ್​​ ಗಾಂಧಿ ಬಳಿ ಸಿದ್ದರಾಮಯ್ಯ ಬೇಸರ

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ ಬಲಿಷ್ಠ; 500 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿ: ಪ್ರಧಾನಿ ಮೋದಿ

ಜಾತಿ ಬಲದಿಂದಲೇ HDK ಸಿಎಂ ಆಗಿದ್ದು, ನಾನೂ ಎಲ್ಲವನ್ನು ಬಿಟ್ಟು ನಿಂತರೆ ಕಷ್ಟವಾಗುತ್ತೆ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

UP, Goa, Manipur: ಚುನಾವಣೆಗೆ ಸಿದ್ಧವಾಗಿರುವ ರಾಜ್ಯಗಳಲ್ಲಿ SIR ಪರಿಣಾಮವೇನು? ಮತದಾರರ ಸಂಖ್ಯೆಯಲ್ಲಿ ಇಳಿಕೆ ಎಷ್ಟು?: ಇಲ್ಲಿದೆ details