ಡಾ.ಜಿ. ಪರಮೇಶ್ವರ್ 
ರಾಜ್ಯ

ರಾಜ್ಯದಲ್ಲಿ ಭೀಕರ ಬರಗಾಲ: ₹22,400.58 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಡಾ.ಜಿ. ಪರಮೇಶ್ವರ್ ಪತ್ರ!

ಕೇಂದ್ರ ಸರ್ಕಾರವು SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಒಟ್ಟು ಬರ ಪರಿಹಾರದ ಬೇಡಿಕೆಯು ₹22,400.58 ಕೋಟಿಗೆ ಹೆಚ್ಚಳವಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಬರದಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ಆರ್ಥಿಕ ನೆರವು ಒದಗಿಸುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಹಂಚಿಕೊಂಡಿದ್ದು, ರಾಜ್ಯದ 226 ತಾಲ್ಲೂಕುಗಳು ಬರ ಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ₹62,481.88 ಕೋಟಿ ಅಂದಾಜು ಆರ್ಥಿಕ ನಷ್ಟ ಉಂಟಾಗಿದ್ದು, ನಮ್ಮ ರೈತರು ಹಿಂದೆಂದೂ ಕಾಣದಂತಹ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಒಟ್ಟು ಬರ ಪರಿಹಾರದ ಬೇಡಿಕೆಯು ₹22,400.58 ಕೋಟಿಗೆ ಹೆಚ್ಚಳವಾಗಿದೆ.

ಆದರೆ ಪರಿಷ್ಕೃತ ಪರಿಹಾರ ಮಾನದಂಡಗಳು ರೈತರ ನೈಜ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನಷ್ಟಕ್ಕೆ ಹೋಲಿಸಿದರೆ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪರಿಹಾರ ಮಾನದಂಡಗಳನ್ನು ಮರುಪರಿಶೀಲಿಸಬೇಕು, ಹಳೆಯ ಕೃಷಿ ಗಣತಿಯ ಬದಲು ಕರ್ನಾಟಕದ FRUITS ದತ್ತಾಂಶವನ್ನು ಬಳಸಬೇಕು ಹಾಗೂ ರಾಜ್ಯಕ್ಕೆ ಅಗತ್ಯವಿರುವ ಪರಿಹಾರದ ಮೊತ್ತವನ್ನು ತ್ವರಿತವಾಗಿ ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಭೇಟಿಗೆ ಸಮಯ ಕೋರಿದ ಪರಮೇಶ್ವರ್: ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ಖುದ್ದಾಗಿ ವಿವರಿಸಲು ಹಾಗೂ ಪರಿಹಾರದ ಬೇಡಿಕೆಯನ್ನು ಸಲ್ಲಿಸಲು ಪ್ರಧಾನಿ, ಗೃಹ ಸಚಿವರು ಮತ್ತು ಕೃಷಿ ಸಚಿವರ ಭೇಟಿಗೆ ಸಮಯ ಕೋರಿದ್ದಾರೆ.

ರಾಜ್ಯದ ರೈತರಿಗೆ ಕೇವಲ ಅಲ್ಪ ಪ್ರಮಾಣದ ಪರಿಹಾರದ ಹೆಚ್ಚಳ ಸಾಕಾಗುವುದಿಲ್ಲ. ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತೆ ಆರ್ಥಿಕವಾಗಿ ಚೇತರಿಸಿಕೊಂಡು, ತಮ್ಮ ಜೀವನೋಪಾಯವನ್ನು ಕಟ್ಟಿಕೊಳ್ಳಲು ಅಗತ್ಯವಾದ ನೆರವು ಸಕಾಲದಲ್ಲಿ ದೊರೆಯಬೇಕು. ರೈತರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ. ಸಂಕಷ್ಟದಲ್ಲಿರುವ ರೈತರ ಬೆಂಬಲಕ್ಕೆ ನಿಲ್ಲುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿದೆ ಎಂದು ಪರಮೇಶ್ವರ್ ಮನವರಿಕೆ ಮಾಡಿಕೊಟ್ಟಿದ್ದಾರೆ.

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ ಪ್ರತಿಭಟನೆಯಲ್ಲಿ ವಿಜಯೇಂದ್ರ ವಾಗ್ದಾಳಿ

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!

ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತ ಸ್ಥಳದ ಬಳಿ AAIB ಅಧಿಕಾರಿಗೆ ಅನಾರೋಗ್ಯ