ಆರ್ ಜೆ ಪೃಥ್ವಿ ಮತ್ತು ಹಾಸನಾಂಬ ದೇಗುಲ 
ರಾಜ್ಯ

ಪುರಿ ಜಗನ್ನಾಥ ಆಯ್ತು, ಈಗ ಹಾಸನಾಂಬೆ ಸರದಿ; 'ವರ್ಷವಾದರೂ ದೀಪ ಆರಿಲ್ಲ, ಹಣ್ಣು ಕೊಳೆತಿಲ್ಲ! ದೇವಾಲಯದ ಪವಾಡ ಪ್ರಶ್ನಿಸಿದ RJ ಪೃಥ್ವಿ

ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಿದ ಬಳಿಕವೂ ಒಂದು ವರ್ಷ ಕಳೆದರೂ ದೇವಾಲಯದಲ್ಲಿ ಹಚ್ಚಿಟ್ಟ ದೀಪ ಆರಿಲ್ಲ, ದೇವಿಗೆ ಅರ್ಪಿಸಿದ ಹಣ್ಣುಗಳು ಕೊಳೆತಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಪವಾಡದಂತಹ ನಂಬಿಕೆಯ ಕುರಿತು..

ಬೆಂಗಳೂರು: ಪುರಿ ಜಗನ್ನಾಥ ದೇವಾಲಯದ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಚರ್ಚೆಗೆ ಗ್ರಾಸವಾಗಿದ್ದ ಆರ್‌ಜೆ ಪೃಥ್ವಿ, ಇದೀಗ ಹಾಸನಾಂಬೆ ದೇವಾಲಯದ ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಗಮನ ಸೆಳೆದಿದೆ. ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಿದ ಬಳಿಕವೂ ಒಂದು ವರ್ಷ ಕಳೆದರೂ ದೇವಾಲಯದಲ್ಲಿ ಹಚ್ಚಿಟ್ಟ ದೀಪ ಆರಿಲ್ಲ, ದೇವಿಗೆ ಅರ್ಪಿಸಿದ ಹಣ್ಣುಗಳು ಕೊಳೆತಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಪವಾಡದಂತಹ ನಂಬಿಕೆಯ ಕುರಿತು ಆರ್‌ಜೆ ಪೃಥ್ವಿ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 'ಹಾಸನಾಂಬೆ ಅರ್ಚಕರು ಏನಂದರು?' ಎಂದು ಪ್ರಶ್ನಿಸಿರುವ ಅವರು, ಮತ್ತೊಂದೆಡೆ 'ಒಂದು ವರ್ಷ ಆದರೂ ದೀಪ ಆರಿಲ್ಲ, ಹಣ್ಣು ಕೊಳೆತಿಲ್ಲ!' ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಹಾಸನಾಂಬೆ ದೇವಾಲಯದ ಆಚರಣೆಗಳ ಹಿಂದಿನ ವಾಸ್ತವಾಂಶದ ಬಗ್ಗೆ ಕುತೂಹಲ ಹಾಗೂ ಚರ್ಚೆಗೆ ಕಾರಣರಾಗಿದ್ದಾರೆ.

ಪ್ರೂಫ್ ಕೇಳ್ಬಾರ್ದು, ಒಳ್ಳೇದಾಗಲ್ಲ? ಎಂದು ವ್ಯಂಗ್ಯ

ಇದೇ ವೇಳೆ ಹಾಸನಾಂಬೆ ದೇಗುಲದ ಆಚರಣೆಯನ್ನು ಪವಾಡ ಎಂದು ನಂಬುವ ಭಕ್ತರ ಕುರಿತೂ ವ್ಯಂಗ್ಯ ಮಾಡಿರುವ ಆರ್ ಜೆ ಪೃಥ್ಲಿ, 'ಇದಕ್ಕೆಲ್ಲಾ ಪ್ರೂಫ್ ಕೇಳ್ಬಾರ್ದು.. ನಂಬಬೇಕು ಅಷ್ಟೇ.. ಕಳೆದ ವರ್ಷ ಹಚ್ಚಿದ್ದ ದೀಪ ಕೂಡ ಆರಿಲ್ಲ.. ನಂಬಿದ್ರೆ ನಂಬಿ ಬಿಟ್ರೆ ಬಿಡಿ... ಪ್ರಶ್ನೆ ಕೇಳ್ಬಾರ್ದು.. ಒಳ್ಳೇದಾಗಲ್ಲ.. ಹೇಳಿದ್ರೆ ನಂಬಬೇಕು ಅಷ್ಟೇ.. ಇದು ಕೆಲವರ ನಂಬಿಕೆ ಅಷ್ಟೇ.. ಇಷ್ಟೇ ಪವಾಡ ಹೇಳಿದ್ದನ್ನ ಕೇಳ್ಬೇಕು.. ನಂಬಬೇಕು.. ಹೋಗ್ತಾ ಇರ್ಬೇಕು.. ಪ್ರೂಫು.. ಸಾಕ್ಷಿ ಎಲ್ಲಾ ಕೇಳೋಕ್ ಹೋಗ್ಬಾರ್ದು.. ಸಿಸಿಟಿವಿ ಕ್ಯಾಮೆರಾ ಹಾಕಿ ನಾವೂ ನೋಡ್ತೀವಿ ಅಂತೆಲ್ಲಾ ಕೇಳ್ಬಾರ್ದು.. ಅವೆಲ್ಲಾ ಪದ್ಧತಿ ಇಲ್ಲ.. ಹಾಕೋದು ಇಲ್ಲ.. ಎಂದು ವ್ಯಂಗ್ಯ ಮಾಡಿದ್ದಾರೆ.

ಹಾಸನಾಂಬ ದೇಗುಲ ಅರ್ಚಕರ ಹೇಳಿಕೆ ಉಲ್ಲೇಖ

ಇದೇ ವೇಳೆ ಮತ್ತೊಂದು ವಿಡಿಯೋದಲ್ಲಿ ಹಾಸನಾಂಬ ದೇಗುಲದ ಪ್ರಧಾನ ಅರ್ಚಕರ ಹೇಳಿಕೆಯನ್ನೂ ಉಲ್ಲೇಖಿಸಿರುವ ಆರ್ ಜೆ ಪೃಥ್ವಿ, ನಾನು ವಿಡಿಯೋ ಮಾಡೋ ಕಾರಣ ಮೂಡನಂಬಿಕೆಗಳಿಂದ ಜನ ಆಚೆ ಬರಬೇಕು ಎಂದಷ್ಟೇ.. ಸಾಕಷ್ಟು ಜನರಿಗೆ ಇದರಿಂದ ಸಹಾಯವಾಗಿದೆ. ಕೆಲವರು ನನ್ನ ವಿಡಿಯೋಗಳನ್ನೇ ತೆಗೆದುಕೊಂಡು ಟೀಕಿಸುತ್ತಿದ್ದಾರೆ. ನಾನು ಎಲ್ಲರಿಗೂ ಉತ್ತರಿಸುತ್ತೇನೆ ಎಂದು ದೇಗುಲದ ಅರ್ಚಕ ಹೇಳಿಕೆಯ ವಿಡಿಯೋವನ್ನು ತೋರಿಸಿದ್ದಾರೆ.

ಆ ವಿಡಿಯೋದಲ್ಲಿ ಅರ್ಚಕರೇ ನಾವು ಪವಾಡ ಎಂದು ಎಲ್ಲೂ ಹೇಳಿಲ್ಲ.. ಪ್ರತೀ ವರ್ಷ ನಮ್ಮ ಪದ್ದತಿ ಮತ್ತು ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದೇವೆ ಅಷ್ಟೇ.. ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಪೃಥ್ವಿ, ಅರ್ಚಕರೇ ಅಲ್ಲಿ ಏನೂ ಪವಾಡ ಇಲ್ಲ ಎಂದು ಹೇಳಿದ್ದಾರೆ. ನಿಮಗೆ ಅದರ ಹಿಂದಿನ ವಿಜ್ಞಾನ ತಿಳಿಯುವವರೆಗೂ ಮಾತ್ರ ಅದು ಪವಾಡ.. ತಿಳಿದ ಬಳಿಕ ಅದು ವಿಜ್ಞಾನ ಅಷ್ಟೇ.. ವಿಜ್ಞಾನ ಕಾಲಿಟ್ಟಲ್ಲಿ ಅಜ್ಞಾನ ಮತ್ತು ಪವಾಡಗಳಿಗೆ ಜಾಗವಿಲ್ಲ. ನನಗೆ ಹಿಂಧೂ ಧರ್ಮದ ಪ್ರಮಾಣಪತ್ರ ಕೊಡಲು ನೀವ್ಯಾರು ಎಂದು ಪೃಥ್ವಿ ಪ್ರಶ್ನಿಸಿದ್ದಾರೆ.

ಹಾಸನಾಂಬ ದೇಗುಲ ಕುರಿತು

ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯವು ವರ್ಷಕ್ಕೊಮ್ಮೆ ಮಾತ್ರ ಭಕ್ತರ ದರ್ಶನಕ್ಕೆ ತೆರೆದುಕೊಳ್ಳುತ್ತದೆ. ದೀಪಾವಳಿ ಸಂದರ್ಭದಲ್ಲಿ ಕೆಲವೇ ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ದೇವಾಲಯದ ಬಾಗಿಲು ಮುಚ್ಚುವಾಗ ಹಚ್ಚಿಡುವ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಉರಿಯುತ್ತಿರುತ್ತದೆ ಹಾಗೂ ದೇವಿಗೆ ಅರ್ಪಿಸಿದ ಹೂವು, ಹಣ್ಣುಗಳು ಹಾಳಾಗುವುದಿಲ್ಲ ಎಂಬುದು ಭಕ್ತರ ನಂಬಿಕೆ. ಈ ನಂಬಿಕೆ ಹಲವು ವರ್ಷಗಳಿಂದ ಹಾಸನಾಂಬೆ ದೇವಾಲಯದ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ದೆಹಲಿಯಲ್ಲಿ ಭೀಕರ ದುರಂತ: ನಿರ್ಮಾಣ ಹಂತದ 3 ಅಂತಸ್ತಿನ ಕಟ್ಟಡ ಕುಸಿತ; ಇಬ್ಬರ ಸಾವು, 15ಕ್ಕೂ ಹೆಚ್ಚು ಜನ ಸಿಲುಕಿರುವ ಆತಂಕ..!

ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮಸೂದೆ: 50:70 ಕೋಟಾಕ್ಕೆ ಸಾಂವಿಧಾನಿಕ ಅಡ್ಡಿ ಯಾಕೆ? ಉದ್ಯಮಿಗಳ ಪ್ರತಿರೋಧ

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: 482ಕ್ಕೆ ತಲುಪಿದ ವಾಯು ಗುಣಮಟ್ಟ ಸೂಚಿ, ಪರಿಸ್ಥಿತಿ ಮತ್ತಷ್ಟು ಗಂಭೀರ..!

'ಬಹುಮಟ್ಟಿಗೆ ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು': ಡೊನಾಲ್ಡ್ ಟ್ರಂಪ್