ವಿಧಾನಸೌಧದಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. 
ರಾಜ್ಯ

'ನಮ್ಮ ಶಾಲೆ ನಮ್ಮ ಜವಾಬ್ದಾರಿ': ಗ್ರಾಮೀಣ ಸರ್ಕಾರಿ ಶಾಲೆ ದತ್ತು ಪಡೆಯಲು ಖಾಸಗಿ ಶಾಲೆಗಳಿಗೆ ಸರ್ಕಾರ ಮನವಿ

'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮದಡಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಖಾಸಗಿ ಶಾಲೆಗಳ ಸಹಕಾರ ಅಗತ್ಯವಿರುವ ವಿವಿಧ ಕ್ಷೇತ್ರಗಳ ಬಗ್ಗೆ ಒತ್ತಿ ಹೇಳಿದೆ.

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಮೂಲಸೌಕರ್ಯ ಹಾಗೂ ಇತರ ಸೌಲಭ್ಯಗಳನ್ನು ಸುಧಾರಿಸಲು ಮುಂದಾಗುವಂತೆ ಕರ್ನಾಟಕ ಸರ್ಕಾರ ಖಾಸಗಿ ಶಾಲೆಗಳಿಗೆ ಮನವಿ ಮಾಡಿದೆ.

'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮದಡಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಖಾಸಗಿ ಶಾಲೆಗಳ ಸಹಕಾರ ಅಗತ್ಯವಿರುವ ವಿವಿಧ ಕ್ಷೇತ್ರಗಳ ಬಗ್ಗೆ ಒತ್ತಿ ಹೇಳಿದೆ.

200ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ 5,000ಕ್ಕೂ ಅಧಿಕ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳನ್ನು ಇಲಾಖೆ ಗುರುತಿಸಿದೆ. ಇವುಗಳಿಗೆ ನೆರವು ಹಾಗೂ ಮಾರ್ಗದರ್ಶನ ನೀಡಲು ಸಾಧ್ಯವಿರುವ 20,000 ಖಾಸಗಿ ಶಾಲೆಗಳಿಗೆ ಆಹ್ವಾನ ನೀಡಲಾಗಿದೆ.

ಶಾಲೆಗಳನ್ನು ದತ್ತು ಪಡೆಯಲು ಆರು ಪ್ರಮುಖ ಮಾನದಂಡಗಳನ್ನು ಪ್ರಕಟಿಸಿರುವ ಇಲಾಖೆ, ದತ್ತು ಪ್ರಕ್ರಿಯೆಯ ಸಂದರ್ಭದಲ್ಲಿ ಮತ್ತು ನಂತರ ಅನುಸರಿಸಬೇಕಾದ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಮೊದಲ ವರ್ಷದಲ್ಲಿ 1,000 ಸರ್ಕಾರಿ ಶಾಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ.

ಈ ಉಪಕ್ರಮದ ಕುರಿತು ಖಾಸಗಿ ಶಾಲೆಗಳಿಗೆ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಉತ್ತಮ ಕಾರ್ಯವಿಧಾನಗಳ ಪರಸ್ಪರ ವಿನಿಮಯವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ನಿಮ್ಮಲ್ಲಿರುವ ಅನುಭವ ಮತ್ತು ಸಾಧನೆಗಳ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಮಾರ್ಗದರ್ಶಕ ಮತ್ತು ಮಾರ್ಗದರ್ಶನ ಪಡೆಯುವ ಸಂಸ್ಥೆಗಳ ನಡುವಿನ ಈ ಪಾಲುದಾರಿಕೆ ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ಯಾವುದೇ ವಾಣಿಜ್ಯ ಉದ್ದೇಶವನ್ನು ಹೊಂದಿಲ್ಲ. ಖಾಸಗಿ ಶಾಲೆಗಳ ಸಾಮೂಹಿಕ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಲಾಗುತ್ತದೆ. 5,000 ಶಾಲೆಗಳ ಸಂಪೂರ್ಣ ಪಟ್ಟಿಯು ಸಿಎಸ್‌ಆರ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಶಾಲೆಗಳನ್ನು ಜೋಡಿಸುವ ಪ್ರಕ್ರಿಯೆಗೆ ಇಲಾಖೆಯ ಉಪನಿರ್ದೇಶಕರ ನೆರವನ್ನೂ ಪಡೆಯಬಹುದು.

ದತ್ತು ಪಡೆಯಲು ಗುರುತಿಸಿರುವ ಆರು ಪ್ರಮುಖ ಮಾನದಂಡಗಳು

  • ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಮತ್ತು ಪುಸ್ತಕಗಳಿವೆ. ಆದರೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವವರ ಕೊರತೆಯಿದೆ.

  • ಕೆಲವು ಶಾಲೆಗಳಲ್ಲಿ ಪ್ರಯೋಗಾಲಯಗಳಿದ್ದರೂ, ಬೋಧನೆಗೆ ಅಗತ್ಯವಾದ ಬೋಧಕರಿಲ್ಲ.

  • ಬಹುತರಗತಿ ವ್ಯವಸ್ಥೆಯನ್ನು ಏಕತರಗತಿ ವ್ಯವಸ್ಥೆಯಾಗಿ ಬದಲಾಯಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯನ್ನೂ ಎದುರಿಸುತ್ತಿವೆ.

  • ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡುವುದು.

ಶಾಲೆಗಳನ್ನು ದತ್ತು ಪಡೆಯಲು ಮಾರ್ಗಸೂಚಿಗಳು

  • ಯಾವುದೇ ಮಂಡಳಿಯ ಮಾನ್ಯತೆ ಮತ್ತು ಸಂಯೋಜನೆ (Recognition and Affiliation) ಕಡ್ಡಾಯ.

  • ಕಳೆದ ಐದು ವರ್ಷಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸಿರಬೇಕು.

  • ಶಿಕ್ಷಣ ಹಕ್ಕು ಕಾಯ್ದೆ (RTE) ನಿಯಮಗಳ ಪಾಲನೆ ಕಡ್ಡಾಯ.

  • ಮೂರು ವರ್ಷಗಳ ಕಾಲ ಬದ್ಧತೆಯೊಂದಿಗೆ ನೆರವು ನೀಡಲು ಅಗತ್ಯ ಸಂಪನ್ಮೂಲಗಳನ್ನು ಸಂಸ್ಥೆಗಳು ಹೊಂದಿರಬೇಕು.

  • ಸರ್ಕಾರವು ಯೋಜನೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಹೊಂದಿರುತ್ತದೆ.

  • ರಾಜ್ಯ ಸರ್ಕಾರದ ಪಠ್ಯಕ್ರಮವನ್ನೇ ಅನುಸರಿಸಬೇಕು.

  • ವಾಣಿಜ್ಯ ಹಾಗೂ ಪ್ರಚಾರ ಚಟುವಟಿಕೆಗಳಿಗೆ ಅವಕಾಶವಿಲ್ಲ.

  • ವಿದ್ಯಾರ್ಥಿಗಳ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ

ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; ₹20 ಸಾವಿರ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!

ಜಗನ್ ಮೋಹನ್ ಕುಟುಂಬದ ಮದುವೆ: ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್-ನಟಿ ತ್ರಿಷಾ!

'40% ಕಮಿಷನ್ ಸರ್ಕಾರ' ಜಾಹೀರಾತು: ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್