ಚನ್ನಪಟ್ಟಣದ ಶೆಟ್ಟಹಳ್ಳಿ ಕೆರೆ ಒತ್ತುವರಿಯಾಗಿರುವುದು. 
ರಾಜ್ಯ

TNIE ವರದಿ ಫಲಶ್ರುತಿ: ಚನ್ನಪಟ್ಟಣ ಕೆರೆಗಳ ಪುನಶ್ಚೇತನಕ್ಕೆ ತಲಾ ₹3 ಕೋಟಿ ಮಂಜೂರು..!

ಚನ್ನಪಟ್ಟಣ ಪಟ್ಟಣದ ಒಳಚರಂಡಿ ನೀರು ಹರಿದು ರಾಮಮ್ಮನ ಕೆರೆ ತೀವ್ರವಾಗಿ ಕಲುಷಿತಗೊಂಡಿದ್ದು, ಕೆರೆಯ ಜಾಗದಲ್ಲಿ ವ್ಯಾಪಕ ಒತ್ತುವರಿಯೂ ನಡೆದಿದೆ. ಇನ್ನು ಸಂತೇಮೊಗೆನಹಳ್ಳಿ ಕೆರೆ ಬತ್ತಿ ಹೋಗಿದ್ದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಚನ್ನಪಟ್ಟಣ: ತೀವ್ರ ಮಾಲಿನ್ಯ ಮತ್ತು ಒತ್ತುವರಿಯಿಂದ ಸೊರಗುತ್ತಿರುವ ಚನ್ನಪಟ್ಟಣ ತಾಲ್ಲೂಕಿನ ಎರಡು ಪ್ರಮುಖ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ತಲಾ 3 ಕೋಟಿ ರೂಪಾಯಿಗಳ ಭಾರಿ ಅನುದಾನವನ್ನು ಮಂಜೂರು ಮಾಡಿದೆ.

ತಾಲ್ಲೂಕಿನ ರಾಮಮ್ಮನ ಕೆರೆ ಹಾಗೂ ಸಂತೆಮೊಗೇನಹಳ್ಳಿ ಕೆರೆಗಳು ಈ ಯೋಜನೆಯಡಿ ಶೀಘ್ರದಲ್ಲೇ ಹೊಸ ರೂಪ ಪಡೆಯಲಿವೆ.

ಚನ್ನಪಟ್ಟಣ ಪಟ್ಟಣದ ಒಳಚರಂಡಿ ನೀರು ಹರಿದು ರಾಮಮ್ಮನ ಕೆರೆ ತೀವ್ರವಾಗಿ ಕಲುಷಿತಗೊಂಡಿದ್ದು, ಕೆರೆಯ ಜಾಗದಲ್ಲಿ ವ್ಯಾಪಕ ಒತ್ತುವರಿಯೂ ನಡೆದಿದೆ. ಇನ್ನು ಸಂತೇಮೊಗೆನಹಳ್ಳಿ ಕೆರೆ ಬತ್ತಿ ಹೋಗಿದ್ದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕೆರೆಯೊಳಗೆ ಮರಗಳು ಬೆಳೆದು ನಿಂತಿದ್ದವು. ಆನೆಗಳು ಈ ಕೆರೆಯ ಪ್ರದೇಶದಲ್ಲಿ ತಂಗಿ ಸುತ್ತಮುತ್ತಲಿನ ಜಮೀನುಗಳ ಬೆಳೆಗಳನ್ನು ಹಾನಿಗೊಳಿಸುತ್ತಿದ್ದವು. ಈ ಕೆರೆಯ ಒಂದು ಭಾಗವೂ ಒತ್ತುವರಿಯಾಗಿದೆ.

ಈ ಎರಡು ಕೆರೆಗಳು ಸೇರಿದಂತೆ ಜಿಲ್ಲೆಯ ಕೆಲವು ಕೆರೆಗಳ ದುಸ್ಥಿತಿಯ ಕುರಿತು 2025ರ ಮೇ 15ರಂದು ‘Channapatna lakes choked by sewage by UGD system’ ಎಂಬ ಶೀರ್ಷಿಕೆಯಡಿ TNIE ವರದಿ ಪ್ರಕಟಿಸಿತ್ತು.

ಇದನ್ನು ಗಮನಿಸಿದ ನ್ಯಾಯಮೂರ್ತಿ ಫಣೀಂದ್ರ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಕೆರೆಗಳಿಗೆ ಭೇಟಿ ನೀಡಿದ್ದರು.

ಬಳಿಕ ಸಂಬಂಧಪಟ್ಟ ಅಧಿಕಾರಿಗಳನ್ನು ಎರಡು ಬಾರಿ ವಿಚಾರಣೆಗೆ ಕರೆಸಿ, 2026ರ ಸೆಪ್ಟೆಂಬರ್ 9ರಂದು ನಡೆದ ಸಭೆಯ ಬಳಿಕ ಕೆರೆಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಇದೇ ವೇಳೆ, ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಕೆರೆಯ ಸಂರಕ್ಷಣೆಗಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 3.8 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

ತೀವ್ರವಾಗಿ ಕಲುಷಿತಗೊಂಡು ಒತ್ತುವರಿಯಾಗಿದ್ದ ಕೂಡ್ಲೂರು ಕೆರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದ ಹಿನ್ನೆಲೆಯಲ್ಲಿ, ಅವರ ಸೂಚನೆಗಳನ್ನು ಪರಿಗಣಿಸಿ ಅಕ್ಟೋಬರ್ 29ರಂದು ಈ ಅನುದಾನ ಮಂಜೂರು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈವಾಹಿಕ ಕಲಹ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ಭೀಕರ ಹತ್ಯೆ ಮಾಡಿದ ಕ್ಯಾಬ್ ಚಾಲಕ !

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು, ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ