ಇಂಡಿಗೋ ವಿಮಾನ  ಸಾಂದರ್ಭಿಕ ಚಿತ್ರ
ರಾಜ್ಯ

ಹೈಜಾಕ್ ಬೆದರಿಕೆ: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಮರಳಿದ ಇಂಡಿಗೋ ವಿಮಾನ..!

ಬೆದರಿಕೆ ಸಂದೇಶ ಪತ್ತೆಯಾದ ಬೆನ್ನಲ್ಲೇ ವಿಮಾನದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಬಳಿಕ ಪೈಲಟ್‌ಗಳು ವಿಮಾನವನ್ನು ಬೆಂಗಳೂರಿನ ಮೂಲ ವಿಮಾನ ನಿಲ್ದಾಣಕ್ಕೆ ಮರಳಿಸಲು ನಿರ್ಧರಿಸಿದರು.

ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾದ ಹಿನ್ನೆಲೆಯಲ್ಲಿ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತುರ್ತು ಲ್ಯಾಂಡಿಂಗ್ ಮಾಡಿರುವ ಆತಂಕಕಾರಿ ಘಟನೆ ಶನಿವಾರ ಸಂಜೆ ನಡೆದಿದೆ.

ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ಹೊರಟಿದ್ದ 6E-451 ಸಂಖ್ಯೆಯ ವಿಮಾನದ ಶೌಚಾಲಯದಲ್ಲಿ ಕೈಬರಹದ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ತಕ್ಷಣ ಪೈಲಟ್‌ಗಳಿಗೆ ಮಾಹಿತಿ ನೀಡಿದ್ದಾರೆ.

ಪತ್ರದಲ್ಲಿ ಈ ವಿಮಾನವನ್ನು ಸಂಜೆ 6.30ಕ್ಕೆ ಅಪಹರಣ ಮಾಡಲಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬರೆಯಲಾಗಿತ್ತು ಎಂದು ವರದಿಯಾಗಿದೆ.

ಬೆದರಿಕೆ ಸಂದೇಶ ಪತ್ತೆಯಾದ ಬೆನ್ನಲ್ಲೇ ವಿಮಾನದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಬಳಿಕ ಪೈಲಟ್‌ಗಳು ವಿಮಾನವನ್ನು ಬೆಂಗಳೂರಿನ ಮೂಲ ವಿಮಾನ ನಿಲ್ದಾಣಕ್ಕೆ ಮರಳಿಸಲು ನಿರ್ಧರಿಸಿದರು.

ಈ ನಡುವೆ ಬೆಂಗಳೂರಿನಿಂದ ಲಖನೌಗೆ ತೆರಳುತ್ತಿದ್ದ ವಿಮಾನದಲ್ಲಿ ಭದ್ರತಾ ಬೆದರಿಕೆ ವರದಿಯಾಗಿರುವುದನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಶನಿವಾರ ಖಚಿತಪಡಿಸಿದೆ.

ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದ್ದು, ಅಗತ್ಯ ಭದ್ರತಾ ತಪಾಸಣೆಗಾಗಿ ವಿಮಾನವನ್ನು ವಾಪಸ್ ಕರೆತರಲು ಪೈಲಟ್‌ಗಳು ನಿರ್ಧರಿಸಿದರು ಎಂದು ಸಂಸ್ಥೆ ತಿಳಿಸಿದೆ.

ಅಗತ್ಯ ಅನುಮತಿಗಳು ದೊರೆತ ಬಳಿಕ ವಿಮಾನವು ತನ್ನ ಪ್ರಯಾಣವನ್ನು ಪುನರಾರಂಭಿಸಲಿದೆ ಎಂದು ಇಂಡಿಗೋ ತಿಳಿಸಿದೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಅವರಿಗೆ ಉಪಾಹಾರ ಮತ್ತು ಪಾನೀಯಗಳನ್ನು ಒದಗಿಸುವುದು ಹಾಗೂ ನಿರಂತರವಾಗಿ ಮಾಹಿತಿ ನೀಡುವ ಮೂಲಕ ತೊಂದರೆ ಕಡಿಮೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರು, ವಿಮಾನದ ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಯೇ ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಪಾನ್‌ನಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆಯ ಕಂಪನಕ್ಕೆ ಜನಜೀವನ ಅಸ್ತವ್ಯಸ್ತ; 22 ಮಂದಿಗೆ ಗಾಯ, ಮುಂದಿನ 2-3 ದಿನಗಳಲ್ಲಿ ಪ್ರಬಲ ಕಂಪನ ಸಾಧ್ಯತೆ..!

ಮೋದಿ ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಅಂಬೇಡ್ಕರ್, ಗಾಂಧಿ, ನೆಹರುಗಿಂತ ದೊಡ್ಡವರಾಗಲು ಸಾಧ್ಯವಿಲ್ಲ: ದೀಪ್ಕೆ

ವೈದಿಕ ವಿರೋಧಿ ನಾಯಕನ ಮನೆಯಲ್ಲೇ ಶಾಸ್ತ್ರೋಕ್ತ ಮದುವೆ: ಸನಾತನ ಪದ್ಧತಿ ಆಚರಣೆಗೆ DMK ನಾಯಕನ ಸ್ಪಷ್ಟನೆ!

ನೌಕರರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ಕೊಟ್ಟ ಜವಳಿ ಉದ್ಯಮಿ, ಖುಷಿಯಿಂದ ಕಣ್ಣೀರು ಹಾಕಿದ ಸಿಬ್ಬಂದಿ!

ದೇಶದ ಜನತೆಗೆ ಪ್ರಧಾನಿಯಿಂದ ದೀಪಾವಳಿ ಹಬ್ಬದ ಶುಭಾಶಯ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯದ ಬಗ್ಗೆ ಹೇಳಿದ್ದಿಷ್ಟು...