ದೇವನಹಳ್ಳಿ ಹಿಟ್ ಅಂಡ್ ರನ್ 
ರಾಜ್ಯ

ದೇವನಹಳ್ಳಿ ಹಿಟ್ ಅಂಡ್ ರನ್: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು-Video

ಅಪರಿಚಿತ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ನಡೆದಿದೆ.

ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಹಿಟ್ ಅಂಡ್ ರನ್ ಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವೇಗವಾಗಿ ಬಂದ ಅಪರಿಚಿತ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ನಡೆದಿದೆ. ಅಪಘಾತದ ಬಳಿಕ ಕಾರು ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ದೇವನಹಳ್ಳಿ ಪಟ್ಟಣದ ನಿವಾಸಿಗಳಾದ ಮಿಥುನ್‌ (38) ಮತ್ತು ಪ್ರದೀಪ್‌ ಕುಮಾರ್‌ (38) ಎಂದು ಗುರುತಿಸಲಾಗಿದೆ. ಇಬ್ಬರೂ ರಸ್ತೆ ಬದಿಯ ಹೋಟೆಲ್‌ಗಳು ಮತ್ತು ಡಾಬಾಗಳಿಗೆ ಮೊಟ್ಟೆ ಹಾಗೂ ಕೋಳಿ ಮಾಂಸ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು.

ಭಾನುವಾರ ರಾತ್ರಿ ಸುಮಾರು 11.30ರ ವೇಳೆಗೆ ದೇವನಹಳ್ಳಿ ತಾಲ್ಲೂಕಿನ ಅತ್ತಿಬೆಲೆ ಸಮೀಪ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಅಪಘಾತ ಸಂಭವಿಸಿದೆ.

ಮಿಥುನ್‌ ಮತ್ತು ಪ್ರದೀಪ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದ ಬಳಿಕ ಕಾರು ಚಾಲಕ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತ ನಡೆದ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಡಿಕ್ಕಿ ಹೊಡೆದ ಕಾರನ್ನು ಪತ್ತೆಹಚ್ಚಿದ್ದಾರೆ. ಕಾರು ಚಾಲಕನಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರು ಮೆಟ್ರೋ ಬ್ಲಾಸ್ಟ್ ಮಾಡ್ತೇವೆ, ದಿಲ್‌ಜಿತ್ ಶೋ ಟಾರ್ಗೆಟ್ ಮಾಡಿ ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆ: ಅಮಿತಾಭ್ ಬಚ್ಚನ್ ಮನೆ ಮೇಲೂ ಉಗ್ರರ ಕಣ್ಣು!

ಭಾರತದ ವಿರುದ್ಧ ಮಹಾ ಷಡ್ಯಂತ್ರ?; ಢಾಕಾ ಬೀದಿಗಳ ತೋರಿಸಿ ದೆಹಲಿ ಎಂದ ಚೈನೀಸ್ ವ್ಲಾಗರ್ ಗಳು, ಬಾಂಗ್ಲಾ ಮಾಧ್ಯಮಗಳಿಂದಲೇ ಬಟಾಬಯಲು!

HDK ಒಬ್ಬ ಬೇಜವಾಬ್ದಾರಿ ಕೇಂದ್ರ ಸಚಿವ; ಸಾಬೀತು ಮಾಡದಿದ್ರೆ ಸುಮ್ನೆ ಬಿಡಲ್ಲ: ಲಂಚ ಆರೋಪಕ್ಕೆ ಶಿವಲಿಂಗೇಗೌಡ ಕಿಡಿ!

ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!

ಕರ್ನಾಟಕದ ಬೆನ್ನಲ್ಲೇ ಕೇರಳದಲ್ಲೂ ಪೆಟ್ರೋಲ್ ಪರೀಕ್ಷೆ; ಎಥೆನಾಲ್ ಪ್ರಮಾಣ ಪತ್ತೆಗೆ ದಿಢೀರ್ ದಾಳಿ! ತನಿಖೆ ಆರಂಭ