ಸಾಂದರ್ಭಿಕ ಚಿತ್ರ 
ರಾಜ್ಯ

E-ಖಾತಾ ಅಕ್ರಮ: GBA ಸಹಾಯಕ ಆಯುಕ್ತ ಮಾಗಿ ಸೇರಿ 31 ಜನರ ವಿರುದ್ಧ FIR ದಾಖಲು

ವರದಿಗಳ ಪ್ರಕಾರ, ಗ್ರೇಟರ್ ಬೆಂಗಳೂರು ಅಧಿಕಾರಿಗಳು ಮತ್ತು ನೌಕರರ ಸಂಘವು ಇಬ್ಬರು ಕಂದಾಯ ಅಧಿಕಾರಿಗಳ ಅಮಾನತು ಪ್ರಶ್ನಿಸಿ ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾಗಲೇ ಈ ಇಬ್ಬರು ಅಧಿಕಾರಿ ವಿರುದ್ಧ ನವೆಂಬರ್ 9 ರಂದು ದೂರು ದಾಖಲಿಸಿದ್ದಾರೆ.

ಬೆಂಗಳೂರು: ಕೆಆರ್ ಪುರಂನ ಸಹಾಯಕ ಆಯುಕ್ತರೂ ಆಗಿರುವ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಸಹಾಯಕ ಆಯುಕ್ತ, ಕೆಂಗೇರಿ ವಿಭಾಗದ ಪ್ರಭಾರ ಕಂದಾಯ ಅಧಿಕಾರಿ ಡಿಎಸ್ ಲೋಕಮಾತ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ ಮೌನೀಶ್ ಮೌದ್ಗಿಲ್ ಅವರು, ಈಗ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ(ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆ, 2002) ಸರ್ಫೇಸಿ ಕಾಯ್ದೆಯ ಉಲ್ಲಂಘನೆಗಾಗಿ ದೂರು ದಾಖಲಿಸಿದ್ದಾರೆ.

ವರದಿಗಳ ಪ್ರಕಾರ, ಗ್ರೇಟರ್ ಬೆಂಗಳೂರು ಅಧಿಕಾರಿಗಳು ಮತ್ತು ನೌಕರರ ಸಂಘವು ಇಬ್ಬರು ಕಂದಾಯ ಅಧಿಕಾರಿಗಳ ಅಮಾನತು ಪ್ರಶ್ನಿಸಿ ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾಗಲೇ ಈ ಇಬ್ಬರು ಅಧಿಕಾರಿ ವಿರುದ್ಧ ನವೆಂಬರ್ 9 ರಂದು ದೂರು ದಾಖಲಿಸಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಮಾಗಿ ಸೇದಂತೆ 31 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ದೀರ್ಘಾವಧಿಯ ಬಾಕಿ ಇರುವ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಾತ್ರ ಇ-ಖಾತಾವನ್ನು ಬ್ಯಾಂಕ್‌ಗಳಿಗೆ ನೀಡಬಹುದು ಎಂದು ಅಧಿಕಾರಿ ವಾದಿಸಿದ್ದರು. ಆದಾಗ್ಯೂ, ಕಟ್ಟಡ ಮತ್ತು ಡೆವಲಪರ್‌ಗಳ ಜೊತೆ ಶಾಮೀಲಾಗಿರುವ ಅಧಿಕಾರಿಗಳಿಗೆ ಸರ್ಫೇಸಿ ಕಾಯ್ದೆಯಡಿಯಲ್ಲಿ ಇ-ಖಾತಾ ನೀಡಲಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದೆ. ಕಂದಾಯ ಅಧಿಕಾರಿಗಳು ಕಂದಾಯ ಭೂಮಿಯಲ್ಲಿ ಬಿ-ಖಾತಾ ವ್ಯಾಪ್ತಿಗೆ ಬರುವ ಆಸ್ತಿಗಳಿಗೂ ಇ-ಖಾತಾ ನೀಡಿದ್ದಾರೆ. ಇದು ನಿಬಂಧನೆಯ ಪ್ರಕಾರ ಕಾನೂನುಬಾಹಿರವಾಗಿದೆ. ಆದ್ದರಿಂದ ಎಫ್‌ಐಆರ್ ಮಾಡಲಾಗಿದೆ ಎನ್ನಲಾಗಿದೆ.

"ಬಸವರಾಜ್ ಸೇರಿದಂತೆ 31 ಜನರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಮತ್ತು ಮಾಗಿಯನ್ನು ಆರೋಪಿ ನಂಬರ್ 1 ಮಾಡಲಾಗಿದೆ. ಆದರೆ ಲೋಕಮಾತ ಅವರ ವಿರುದ್ಧದ ಎಫ್‌ಐಆರ್‌ನ ವಿವರಗಳನ್ನು ಇನ್ನೂ ದೃಢೀಕರಿಸಿಲ್ಲ" ಎಂದು ಜಿಬಿಎನ ಹಿರಿಯ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು, Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

ಪ್ರೀತಿ, ನಷ್ಟ, ನೋವು, ತ್ಯಾಗದ ಅಪರೂಪದ ಕಥನ; ಪ್ರತಿಯೊಬ್ಬ ಭಾರತೀಯರ ಓದಲೇಬೇಕಾದ ಪುಸ್ತಕ': ಸೋನಿಯಾ ಗಾಂಧಿ ಆತ್ಮಕಥನಕ್ಕೆ ಕಾಂಗ್ರೆಸ್ ನಾಯಕರ ಮೆಚ್ಚುಗೆ..!

'ಕೈ' ಕಾರ್ಯಕರ್ತರಿಗೆ ಸರ್ಕಾರ ಭರ್ಜರಿ ಗಿಫ್ಟ್; 428 ಮಂದಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ..!

ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ, ವಿಭಾಗಗಳು 13ರಿಂದ 9ಕ್ಕೆ ಇಳಿಕೆ!

ಕಾಶ್ಮೀರದಲ್ಲಿ ಉಗ್ರ ದಾಳಿ ಬೆನ್ನಲ್ಲೇ ಕಿಶ್ತ್ವಾರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ನಾಪತ್ತೆ, ಶೋಧ ಕಾರ್ಯಾಚರಣೆ!