ಬೋಟ್ ದುರಂತ 
ರಾಜ್ಯ

ಮಡಿಕೇರಿಯಲ್ಲಿ ಬೋಟ್ ದುರಂತ: ಪ್ರವಾಸಕ್ಕೆಂದು ಬಂದಿದ್ದ ಗುಜರಾತ್ ಮೂಲದ ದಂಪತಿ ಸಾವು, ಬದುಕುಳಿದ ಮಕ್ಕಳು!

ಶುಕ್ರವಾರ ಸಂಜೆ ಕುಶಾಲನಗರ ವ್ಯಾಪ್ತಿಯ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ ಮೋಟಾರ್‌ಸ್ಪೋರ್ಟ್ಸ್ ನಲ್ಲಿ ತೊಡಗಿದ್ದ ಗುಜರಾತ್ ಮೂಲದ ದಂಪತಿ ಸಾವನ್ನಪ್ಪಿದ್ದಾರೆ.

ಮಡಿಕೇರಿ: ಶುಕ್ರವಾರ ಸಂಜೆ ಕುಶಾಲನಗರ ವ್ಯಾಪ್ತಿಯ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ ಮೋಟಾರ್‌ಸ್ಪೋರ್ಟ್ಸ್ ನಲ್ಲಿ ತೊಡಗಿದ್ದ ಗುಜರಾತ್ ಮೂಲದ ದಂಪತಿ ಸಾವನ್ನಪ್ಪಿದ್ದಾರೆ.

ಮೃತರನ್ನು ಗುಜರಾತ್‌ನ ಸೂರತ್ ಮೂಲದ ನಿಮ್ಮಿ (48) ಮತ್ತು ಧರ್ಮೇಶ್ (50) ದಂಪತಿ ಎಂದು ಗುರುತಿಸಲಾಗಿದೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಯೋಗದೊಂದಿಗೆ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಾಹಸಮಯ ದೋಣಿ ವಿಹಾರದಲ್ಲಿ ಅವರು ಪಾಲ್ಗೊಂಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಆರ್.ಎನ್. ಅವರ ಪ್ರಕಾರ, ದೋಣಿ ಚಾಲಕ ಪ್ರದೀಪ್‌ನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಯೋಗದೊಂದಿಗೆ ಈ ಹಿನ್ನೀರಿನ ಪ್ರದೇಶದಲ್ಲಿ ಸಾಹಸಮಯ ಜಲಕ್ರೀಡೆಗಳನ್ನು ಪರಿಚಯಿಸಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ. ಮೃತ ದಂಪತಿಗಳು ತಮ್ಮ 21 ಮತ್ತು 25 ವರ್ಷ ವಯಸ್ಸಿನ ಇಬ್ಬರು ಮಕ್ಕಳೊಂದಿಗೆ ಈ ದೋಣಿ ವಿಹಾರಕ್ಕೆ ತೆರಳಿದ್ದರು. ಲೈಫ್ ಜಾಕೆಟ್‌ಗಳ ಬಳಕೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿದ್ದರೂ, ದೋಣಿ ಮಗುಚಿ ಬಿದ್ದ ಪರಿಣಾಮ ದಂಪತಿಗಳು ಅದರ ಅಡಿಯಲ್ಲಿ ಸಿಲುಕಿಕೊಂಡು ನೀರಿನಲ್ಲಿ ಮುಳುಗಿದರು.

ಮರಣೋತ್ತರ ಪರೀಕ್ಷೆಯ ನಂತರ, ಮೃತದೇಹಗಳನ್ನು ಅವರ ಮಕ್ಕಳಿಗೆ ಹಸ್ತಾಂತರಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಿ: ವೇದಿಕೆಯಲ್ಲೇ ಪ್ರಧಾನಿ ಮೋದಿಗೆ ಸಿಎಂ ಮನವಿ! Video

ಅಕ್ಕಿಯ ಕಣಜದಲ್ಲಿ 'ಬೆಳೆ ರಜೆ'ಯ ಕೂಗು: ಅನ್ನಪೂರ್ಣ ಗೋದಾವರಿ ಡೆಲ್ಟಾದಲ್ಲಿ ಭತ್ತದ ಗದ್ದೆಗಳನ್ನು ನುಂಗುತ್ತಿರುವ ಜಲಕೃಷಿ!

₹1000 ಕೋಟಿ ಬಾಚಿಕೊಂಡ್ರೆ ಏನು? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ಯಶ್ ನಟನೆಯ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!

ಅಸ್ಸಾಂನಲ್ಲಿ ಘೋರ ದುರಂತ: ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್‌ಗೆ ಟ್ರಕ್ ಡಿಕ್ಕಿ; 24 ಸಾವು

ಬಾಂಗ್ಲಾ ಜೊತೆ ಭಾರತ ಸಕಾರಾತ್ಮಕ ಮತ್ತು ರಚನಾತ್ಮಕ ಸಂಬಂಧಗಳನ್ನು ಬಯಸುತ್ತದೆ: ವಿದೇಶಾಂಗ ಸಚಿವಾಲಯ