ಪ್ರಧಾನಿ ಮೋದಿ 
ರಾಜ್ಯ

ಮೈಸೂರು: ಅಸ್ವಸ್ಥಗೊಂಡು ಬೀಳುವ ಸ್ಥಿತಿಯಲ್ಲಿದ್ದ 70ರ ವೃದ್ಧ ಕಾರ್ಯಕರ್ತೆಗೆ ಜ್ಯೂಸ್ ಕೊಟ್ಟು ಆರೈಕೆ; ಪ್ರಧಾನಿ ಮೋದಿಯ ಮಾನವೀಯತೆಗೆ ಜನರ ಮೆಚ್ಚುಗೆ!

ತಮ್ಮನ್ನು ಸದಾ 'ಪ್ರಧಾನ ಸೇವಕ' ಎಂದು ಕರೆದುಕೊಳ್ಳುವ ಮೋದಿ ಅವರ ಈ ಸರಳತೆ ಹಾಗೂ ಹಾಗೂ ಸ್ಪಂದನಾಶೀಲ ವ್ಯಕ್ತಿತ್ವ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಶುಕ್ರವಾರ ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥಗೊಂಡ ಬಿಜೆಪಿಯ ಹಿರಿಯ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಸ್ವತಃ ಪ್ರಧಾನಿಗಳೇ ಮುಂದೆ ನಿಂತು ಆರೈಕೆ ಮಾಡಿದ್ದಾರೆ.

ತಮ್ಮನ್ನು ಸದಾ 'ಪ್ರಧಾನ ಸೇವಕ' ಎಂದು ಕರೆದುಕೊಳ್ಳುವ ಮೋದಿ ಅವರ ಈ ಸರಳತೆ ಹಾಗೂ ಹಾಗೂ ಸ್ಪಂದನಾಶೀಲ ವ್ಯಕ್ತಿತ್ವ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಸ್ಮೋಸ್‌ ಮೈಸೂರು ಪ್ಲಾನಿಟೋರಿಯಂ ಲೋಕಾರ್ಪಣೆ ವೇಳೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.

ಹೌದು. ಈ ಕಾರ್ಯಕ್ರಮಕ್ಕೆ ಬಂದಿದ್ದ ನಂಜನಗೂಡು ಮೂಲದ 70 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತೆ ಪ್ರೇಮಾ ಕೆ. ಎಂಬುವವರು ಜನದಟ್ಟಣೆ ಹಾಗೂ ಬಿಸಿಲಿನ ತಾಪದಿಂದಾಗಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬೀಳುವ ಸ್ಥಿತಿಯಲ್ಲಿದ್ದರು. ಇದನ್ನು ಗಮನಿಸಿದ ಪ್ರಧಾನಿ ಮೋದಿ ಅವರು ಕೂಡಲೇ ಅವರ ಬಳಿ ಧಾವಿಸಿದ್ದಾರೆ.

ತಕ್ಷಣವೇ ತಮ್ಮ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ಕರೆಯಿಸಿದ್ದು, ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದರು. ಅಲ್ಲದೇ, ಅವರಿಗೆ ಸ್ವತಃ ಎನರ್ಜಿ ಡ್ರಿಂಕ್, ಜ್ಯೂಸ್ ನೀಡಿ, ಅವರ ಬಳಿಯೇ ನಿಂತು ಕಾಳಜಿ ವಹಿಸಿದ್ದಾರೆ.

ಪ್ರೇಮಾ ಅವರು ಚೇತರಿಸಿಕೊಂಡು ಸುಧಾರಿಸಿಕೊಳ್ಳುವವರೆಗೂ ಅವರ ಜೊತೆಯಲ್ಲಿಯೇ ಇದ್ದ ಪ್ರಧಾನಿ ಮೋದಿ, 'ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ಯಾವುದೇ ಆತಂಕ ಬೇಡ' ಎಂದು ಧೈರ್ಯದ ಮಾತುಗಳನ್ನು ಹೇಳಿ ಆ ಬಳಿಕವಷ್ಟೇ ಅಲ್ಲಿಂದ ತೆರಳಿದ್ದಾರೆ. ಪ್ರಧಾನಿಗಳ ಈ ಅನಿರೀಕ್ಷಿತ ಕಾಳಜಿ ಮತ್ತು ಪ್ರೀತಿಯನ್ನು ಕಂಡು ಹಿರಿಯ ಕಾರ್ಯಕರ್ತೆ ಪ್ರೇಮಾ ಅವರು ಭಾವುಕರಾಗಿದ್ದು, ಧನ್ಯವಾದ ಸಲ್ಲಿಸಿದ್ದಾರೆ.

ಈ ವಿಶೇಷ ಕ್ಷಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಅಧಿಕಾರ, ಭದ್ರತೆಯ ಕಟ್ಟುಪಾಡುಗಳನ್ನೆಲ್ಲಾ ಬದಿಗೊತ್ತಿ ಸಾಮಾನ್ಯ ವೃದ್ಧ ಕಾರ್ಯಕರ್ತೆಯೊಬ್ಬರ ಆರೋಗ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೋರಿದ ಮಾನವೀಯ ನಡೆಗೆ ಸಾರ್ವಜನಿಕರು ಹಾಗೂ ನೆರೆದಿದ್ದ ಜನರಿಂದ ಭಾರಿ ಪ್ರಶಂಸೆ ವ್ಯಕ್ತವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಿ: ವೇದಿಕೆಯಲ್ಲೇ ಪ್ರಧಾನಿ ಮೋದಿಗೆ ಸಿಎಂ ಮನವಿ! Video

ಮಡಿಕೇರಿಯಲ್ಲಿ ಬೋಟ್ ದುರಂತ: ಪ್ರವಾಸಕ್ಕೆಂದು ಬಂದಿದ್ದ ಗುಜರಾತ್ ಮೂಲದ ದಂಪತಿ ಸಾವು, ಬದುಕುಳಿದ ಮಕ್ಕಳು!

ಅಕ್ಕಿಯ ಕಣಜದಲ್ಲಿ 'ಬೆಳೆ ರಜೆ'ಯ ಕೂಗು: ಅನ್ನಪೂರ್ಣ ಗೋದಾವರಿ ಡೆಲ್ಟಾದಲ್ಲಿ ಭತ್ತದ ಗದ್ದೆಗಳನ್ನು ನುಂಗುತ್ತಿರುವ ಜಲಕೃಷಿ!

₹1000 ಕೋಟಿ ಬಾಚಿಕೊಂಡ್ರೆ ಏನು? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ಯಶ್ ನಟನೆಯ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!

ಅಸ್ಸಾಂನಲ್ಲಿ ಘೋರ ದುರಂತ: ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್‌ಗೆ ಟ್ರಕ್ ಡಿಕ್ಕಿ; 24 ಸಾವು