ಅಪಘಾತಕ್ಕೀಡಾದ ಕಾರು Photo | ANI
ರಾಜ್ಯ

ಬೆಳಗಾವಿಯಲ್ಲಿ ಭೀಕರ ಅಪಘಾತ; ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಪುಣೆಯ ಒಂದೇ ಕುಟುಂಬದ ಮೂವರ ಸಾವು!

ಮೃತರನ್ನು ಓಂಕಾರ್ ಚಂದ್ರಶೇಖರ್ ಮಾಂದ್ರೆ (26), ರೇಷ್ಮಾ ಮಾಂದ್ರೆ (32) ಮತ್ತು ನಾಲ್ಕು ವರ್ಷದ ದೇವಾಂಶ ಮಾಂದ್ರೆ ಎಂದು ಗುರುತಿಸಲಾಗಿದೆ.

ಬೆಳಗಾವಿ: ಗೋಕಾಕ ತಾಲೂಕಿನ ಮಲದಿನ್ನಿ ಕ್ರಾಸ್ ಬಳಿ ಭಾನುವಾರ ನಡೆದ ಕಾರು ಮತ್ತು ಲಾರಿ ನಡುವಿನ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಮಹಾರಾಷ್ಟ್ರದ ಪುಣೆಯಿಂದ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರೊಂದು, ಯರಗಟ್ಟಿಯಿಂದ ಗೋಕಾಕದ ಕಡೆಗೆ ಬರುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ.

ಮೃತರನ್ನು ಓಂಕಾರ್ ಚಂದ್ರಶೇಖರ್ ಮಾಂದ್ರೆ (26), ರೇಷ್ಮಾ ಮಾಂದ್ರೆ (32) ಮತ್ತು ನಾಲ್ಕು ವರ್ಷದ ದೇವಾಂಶ ಮಾಂದ್ರೆ ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಶ್ರೀಕಾಂತ್ ಮಾಂದ್ರೆ, ವಂದನಾ ಮಾಂದ್ರೆ ಮತ್ತು ಹರ್ಷದಾ ಮಾಂದ್ರೆ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಅಪಘಾತ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ; ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ, ಇಬ್ಬರಿಗೆ ಗಾಯ!

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಉತ್ತರಾಖಂಡ ಸಿಎಂಗೆ ಬಹಿರಂಗ ಸವಾಲು!

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!

'ಕೆಲಸ ಕಳೆದುಕೊಳ್ಳುವ ಭಯವಿತ್ತು': 2011ರಲ್ಲಿ ಶೂಟಿಂಗ್ ವೇಳೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಘಟನೆ ನೆನಪಿಸಿಕೊಂಡ ಸ್ವರಾ ಭಾಸ್ಕರ್!